ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಗುರುವಾರ ನಡೆದ ಅಪಘಾತದಲ್ಲಿ 13 ಜನರಿಗೆ ಗಾಯಗೊಂಡಿದ್ದರು. ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಅದರಲ್ಲಿ ಈಗ ಇಬ್ಬರು ಸಾವನ್ನಪ್ಪಿದ್ದಾರೆ.
ವಿಜಯಪುರ ಆಸ್ಪತ್ರೆಗೆ ರವಾನಿಸಲಾಗಿದ್ದ ಆಕಾಶ ಚವ್ಹಾಣ ಹಾಗೂ ರವಿ ಚವ್ಹಾಣ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಜಯಪುರ ಎಸ್ಪಿ ಹೃಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಸರಣಿ ಅಪಘಾತದಲ್ಲಿ ಸುರೇಖಾ ಚವ್ಹಾಣ, ಶೀರು
ಪವಾರ, ಶಂಕರ ಪವಾರ, ಇಂದು ಪವಾರ, ಮಾಧವಿ ಪವಾರ, ಮಾಯಾ ಪವಾರ, ಮಧು ಪವಾರ, ಲಕ್ಷ್ಮೀ ಪವಾರ, ಸವಿತಾ ಚವ್ಹಾಣ, ಮಲ್ಲಿ ಶಂಕರ ಪವಾರ, ಸತ್ಯಬಾಯಿ ಶಂಕರ ಪವಾರ, ರಾಜವೀರ ಶಂಕರ ಪವಾರ ಗಾಯಗೊಂಡವರು. ಎಲ್ಲರೂ ಇಂಡಿಯವರೇ ಆಗಿದ್ದಾರೆ. ಸ್ಥಳಕ್ಕೆ ಎಸ್.ಪಿ ಋಷಿಕೇಶ ಸೋನವನೆ, ಡಿ.ವೈ.ಎಸ್.ಪಿ ಜಗದೀಶ ಎಚ್.ಎಸ್., ಸಿಪಿಐ ರತನಕುಮಾರ ಜಿರಗಿಹಾಳ, ಮಲ್ಲಿಕಾರ್ಜುನ ದಪ್ಪಿನ ಭೇಟಿ ನೀಡಿ
ಪರಿಶೀಲಿಸಿದ್ದಾರೆ.
