ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಎನ್, ಎಸ್, ಎಸ್ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಡಚಣ ಇವರ ಸಹಯೋಗದೊಂದಿಗೆ ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚಡಚಣ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಜುಂಜರವಾಡ ಮಾತನಾಡಿ, ಪೋಷಕಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದರು.
ಮುಖ್ಯ ಅತಿಥಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಚಾರಕಿ ಶ್ರೀಮತಿ ಎನ್. ಆರ್. ಬಿರಾದಾರ ಅವರು ಮಾತನಾಡಿ, ಆರೋಗ್ಯಕಾರಿ ಹಾಗೂ ಪೋಷಕಾಂಶಗಳಿರುವಂತಹ ಆಹಾರ ಕ್ರಮವು ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ, ಅದನ್ನು ನಾವು ದಿನನಿತ್ಯ ರೂಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್.ವಿ. ಕಟಗೇರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎಸ್.ಚೋರಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್ . ಎಸ್.ಎಸ್. ಅಧಿಕಾರಿಗಳಾದ ಎಚ್.ಎಸ್. ಮಕಾನದಾರ, ಹಿರಿಯ ಉಪನ್ಯಾಸಕ ಡಾ.ಬಿ.ಎಸ್. ಅಂಡಗಿ. ಶ್ರೀಮತಿ ಎಸ್.ಆರ್. ಟೆಂಗಿನಕಾಯಿ. ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್ .ಸಿ. ಕಾಮಗೊಂಡ ಉಪಸ್ಥಿತರಿದ್ದರು.
ಎನ್ . ಎಸ್.ಎಸ್. ವಿದ್ಯಾರ್ಥಿನಿ ಕುಮಾರಿ ಅನಿತಾ ತೊಳನೂರ ಕಾರ್ಯಕ್ರಮ ನಿರ್ವಹಿಸಿದಳು, ಕುಮಾರಿ ಅಕ್ಷತಾ ತೊಳನೂರ ವಂದನಾರ್ಪಣೆ ಮಾಡಿದಳು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿದ್ದ ವಿವಿಧ ತರಕಾರಿ ದವಸಧಾನ್ಯ ಮತ್ತು ಪೋಷಣೆಗೆ ಅವಶ್ಯಕವಾದ ಆಹಾರ ಪದಾರ್ಥಗಳನ್ನು ತಂದು ಶಿಕ್ಷಕರ ಮಾರ್ಗದರ್ಶನದಂತೆ ವಿವಿಧ ವಿನ್ಯಾಸಗಳಲ್ಲಿ ಜೋಡಿಸಿ ಪ್ರದರ್ಶನ ಮಾಡಿದರು.

