Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿಯಿಂದ ರಾಜ್ಯದ ಎಲ್ಲಾ ವರ್ಗದವರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದಂತಹ ಹಲವು ರೂಪದಲ್ಲಿ ಸಹಕಾರಿಯಾಗಿದ್ದು, ಅರ್ಹರಿಗೂ ಈ ಯೋಜನೆಗಳ ಲಾಭ ದೊರಕಿಸಿ ಯಾರೂ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ ಪಾಟೀಲ ಹೇಳಿದರು.ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾ ಪಂಚಾಯತಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕಳೆದ ಬಾರಿಯ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ ೧೬೫ ಭರವಸೆಯಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದ್ದಲ್ಲದೇ, ಹೊಸದಾಗಿ ೩೦ ಯೋಜನೆಗಳನ್ನು ಸೇರಿಸಿ ೧೮೮ ಭರವಸೆಗಳನ್ನು ಪೂರೈಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ನಮ್ಮ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸಮೀಪದ ನಾಗನೂರ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಜರುಗಿದ ಹಿರೇಪಡಸಲಗಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹಲವು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಹಿರೇಪಡಸಲಗಿ ಸಿ.ಆರ್.ಪಿ. ಆರ್.ಎಚ್.ಮುದ್ನೂರ, ಶಿಕ್ಷಣ ಸಂಯೋಜಕರಾದ ಎಸ್.ವಿ.ವಿಜಾಪೂರ, ಮಹಾಂತೇಶ ಚವ್ಹಾಣ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಎಸ್.ದೇಸಾಯಿ ಇತರರನ್ನು ಕಾರ್ಯಕ್ರಮದಲ್ಲಿ ಸಂಘಟಕರು ಶಾಲು ಹೊದಿಸಿ ಗೌರವಿಸಿದರು.
ನಾಗನೂರ ಗ್ರಾಮದಲ್ಲಿ ಪ್ರತಿಭಾ ಕಾರಂಜಿ | ಕಲೋತ್ಸವ ಕಲರವ | ಮಕ್ಕಳ ನೃತ್ಯ, ವೇಷ ಭೂಷಣ ವೈಭವ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಮುಗ್ದ ಮನಸ್ಸಿನ ಮಕ್ಕಳ ಮನಭಾವದಲ್ಲಿ ಹುದುಗಿರುವ ಕಲಾ,ಕೌಶಲ್ಯದ ಸುಪ್ತಾವಸ್ಥೆಯ ಪ್ರತಿಭೆ ಹೊರಗಟ್ಟಲು ಪ್ರತಿಭಾ ಕಾರಂಜಿ, ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹಿರೇಪಡಸಲಗಿ ವಲಯದ ಸಿ.ಆರ್.ಪಿ. ರಾಚಣ್ಣ ಹಣಮಂತ ಮುದ್ನೂರ ಹೇಳಿದರು.ಸಮೀಪದ ನಾಗನೂರ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಜಮಖಂಡಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಹಿರೇಪಡಸಲಗಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪ್ರತಿ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕೌಶಲ್ಯಗಳಿವೆ. ಹಲ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಭಯ ಪಡುತ್ತಾರೆ. ಅಧೈರ್ಯದಿಂದ ಹಿಂಜರಿದು ಕಲಾತ್ಮಕ ಕಲಾ, ಕಲೆ ಕಮರಿಸಿಕೊಂಡು ದೂರುಳಿಯುತ್ತಲ್ಲಿದ್ದಾರೆ. ಇಂಥ ಯುವ ಮಕ್ಕಳ…
ರಾಷ್ಟ್ರಶಕ್ತಿ ಇನ್‌ವ್ಹೆಸ್ಟ್ ಕೋ- ಆರ್ಡಿನೇಶನ್ ಕಮೀಟಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸಿಎಂ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಕಂಪನಿಗಳಿಂದ ವಂಚನೆಗೆ ಒಳಗಾದ ರಾಜ್ಯದ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ರಾಷ್ಟ್ರಶಕ್ತಿ ಇನ್‌ವ್ಹೆಸ್ಟ್ ಕೋ- ಆರ್ಡಿನೇಶನ್ ಕಮೀಟಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ರಾಷ್ಟ್ರಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ೨೦೧೪ ರಲ್ಲಿ ಕೇಂದ್ರ ಸರಕಾರ ದೇಶದ ೧೮೫ ಕ್ಕಿಂತ ಹೆಚ್ಚು ಹಣಕಾಸು ಹಾಗೂ ವಿವಿಧ ಉದ್ಯಮ ಮಾಡುತ್ತಿರುವ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಈ ಅನ್ಯಾಯದ ಕುರಿತು ಪಿಎಸಿಎಲ್, ಪ್ಯಾನಕಾರ್ಡ್ ಕ್ಲಬ್, ಅಗ್ರಿಗೋಲ್ಡ, ಸಮೃದ್ಧಿ ಜೀವನ ಹೀಗೆ ನಾನಾ ಕಂಪನಿಗಳ ಗ್ರಾಹಕರು ಕೋರ್ಟ್ ಮೆಟ್ಟಲೇರಿದವು. ವಿಚಾರಣೆ ನಡೆಸಿದ ಕೋರ್ಟ್ ಬಹುಸಂಖ್ಯಾತ ಕಂಪನಿಗಳ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ತೀರ್ಪಿನನ್ವಯ ಸೆಬಿ ಸಂಸ್ಥೆಗೆ ನಿರ್ದೇಶನ ನೀಡಿ ತೀರ್ಪು ಬಂದ ೩ ತಿಂಗಳ ಒಳಗೆ ವಂಚನೆ ಒಳಗಾದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2023-24ನೇ ಸಾಲಿನಲ್ಲಿ 19.66 ಲಕ್ಷ ಲಾಭ ಮಾಡಿ,ಶೇಕಡಾ 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.ಅವರು ರವಿವಾರದಂದು ನಗರದ ವನಶ್ರೀ ಭವನದಲ್ಲಿದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ, ವರದಿ ವಾಚಿಸಿ ಮಾತನಾಡಿದರು.ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಲಾಭದಾಯಕವಾದ ಬದುಕನ್ನು ರೂಪಿಸಿಕೊಳ್ಳಲು ಸಹಕರಿಸುತ್ತಿದೆ ಎಂದು ಹೇಳಿದರು.ನಿರ್ದೇಶಕ ಬಿ ಜಿ ಪಾಟೀಲ ಹಲಸಂಗಿ ಮಾತನಾಡಿ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸುವ ಪ್ರಾಥಮಿಕ ಗುರಿಯೊಂದಿಗೆ ನಮ್ಮ ಬ್ಯಾಂಕು ಆರಂಭಗೊಂಡು ಸತತವಾಗಿ 24 ವರ್ಷಗಳಿಂದ ಜನತೆಯ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದರು.ನಿರ್ದೇಶಕ ಎಸ್ ಎಸ್ ಶಿರಾಡೋಣ ಮಾತನಾಡಿ,ನಮ್ಮ ಸೊಸೈಟಿಯಲ್ಲಿ ಗ್ರಾಹಕರ ಧರ್ಮ, ಲಿಂಗ ಮತ್ತು ಜಾತಿಯನ್ನು ಲೆಕ್ಕಿಸದೇ, ಸದಸ್ಯತ್ವವು ಎಲ್ಲರಿಗೂ ಮುಕ್ತವಾಗಿದೆ. ಇದು…
Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಸದೃಢವಾದ ದೇಹದಲ್ಲಿ ಸದೃಡ ಮನಸ್ಸು ಇರುತ್ತದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ಮೊಸಲಗಿ ಹೇಳಿದರು.ಪಟ್ಟಣದ ವಾಡೆ ಅವರಣದಲ್ಲಿ ಶನಿವಾರ ನಡೆದ 2024-25 ನೇ ಸಾಲಿನ ವಿಜಯಪುರ ಗ್ರಾಮೀಣ ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಸದೃಢರಾಗಿ ದೇಶ ಕಟ್ಟುವ ಕೆಲಸ ಮಾಡೋಣ, ಕ್ರೀಡೆಯಲ್ಲಿ ವಿಜಯಶಾಲಿಯಾಗಿ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಯಶಸ್ವೀಯಾಗಲಿ ಎಂದು ಶುಭ ಹಾರೈಸಿದರು.ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ.ಧಡಕೆ ಮಾತನಾಡಿ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಕ್ಕಳು ದೈಹಿಕವಾಗಿ ಸದೃಡರಾಗುತ್ತಾರೆ. ಆಟದಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.ಬಬಲೇಶ್ವರ ತಾಲ್ಲೂಕ ಅಧ್ಯಕ್ಷೆ ನೀಲಾ ಇಂಗಳೆ, ಗ್ರಾಮೀಣವಲಯ ಅಧ್ಯಕ್ಷ ಬಿ. ಎಸ್. ಮಠ, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ ಕೋರೆಮಾತನಾಡಿದರು.ಕಾರ್ಯಕ್ರಮದಲ್ಲಿ ಅಶೋಕ ಭಜಂತ್ರಿ, ಝಡ್.ಐ. ಇಂಡಿಕರ, ಉದಯ ಕೋಟ್ಯಾಳ, ಮಲ್ಲು ಟಕ್ಕಳಕಿ, ರವಿ ಉಗಾರ, ಸಾಬು ಗಗನಮಾಲಿ, ಚನ್ನಯ್ಯ ಮಠಪತಿ, ಜಗದೀಶ ಬೋಳಸೂರ, ಐ.ಎ.ತೇಲಿ, ವಿಜಯಕುಮಾರ ದೇಸಾಯಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆತ್ಮಹತ್ಯೆಯನ್ನು ತಡೆಯಬೇಕೆಂದರೆ ನಾವು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಬೇಕು. ಜನರು ಮುಕ್ತವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ ಮಾತನಾಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ವಿಜಯಪುರ ಜಿಲ್ಲಾ ಮನೋರೋಗ ವಿಭಾಗ, ಹಾಗೂ ತಾಲೂಕ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಲ್ಲಿ ಇರುತ್ತಾರೆ. ಆ ಸಮಸ್ಯಗೆ ಹೆದರದೆ, ಜೀವನದಲ್ಲಿ ಕುಗ್ಗದೆ ಅದನ್ನು ಎದುರಿಸಿ ಜೀವನ ಸಾಗಿಸಬೇಕು. ನಮ್ಮ ಸುತ್ತಮುತ್ತಲು ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆಯಲ್ಲಿ ಇರುತ್ತಾರೆ. ಅದು ನಮ್ಮ ನಿಮ್ಮ ಗಮನಕ್ಕೆ ಬಂದರೆ ತಡೆಗಟ್ಟಿ ಆ ವ್ಯಕ್ತಿಯ ಮನಃ ಪರಿವರ್ತನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು. ನಮ್ಮ ಮಾನಸಿಕ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು ಎಂದರು.ಈ ವೇಳೆ ವಿಜಯಪುರ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಮಂಜುನಾಥ ಮಸಳಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚು ಪ್ರಯತ್ನ ಮಾಡುವವರು…
ಸಿಂದಗಿ: ಕಾಯಕ ಯಾವುದೇ ಇರಲಿ ಎಲ್ಲರಲ್ಲಿ ಸಮಾನತೆ ಮೂಡಿಸಬೇಕು. ಎಲ್ಲ ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿಬೇಕು ಎಂದು ಪ್ರಾಚಾರ್ಯ ಡಿ.ಎಂ.ಪಾಟೀಲ ಹೇಳಿದರು.ಪಟ್ಟಣದ ಜಿಪಿ ಪೋರವಾಲ್ ಕಾಲೇಜಿನ ಆವರಣದಲ್ಲಿ ಜಿಲ್ಲಾ ನೆಹರು ಕೇಂದ್ರ, ಜಿಲ್ಲಾ ಎನ್‌ಎಸ್‌ಎಸ್ ಘಟಕ ಹಾಗೂ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಕಾಲೇಜಿನ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಇದರ ಅಡಿಯಲ್ಲಿ ಸ್ವಚ್ಛತಾ ಅಭಿಯಾನ ಹೊಸ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಯೂ ಸ್ವಚ್ಚತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಈ ವೇಳೆ ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ರಾಹುಲ ಡೊಂಗ್ರೆ, ಜಿಲ್ಲಾ ಎನ್‌ಎಸ್‌ಎಸ್ ಸಂಯೋಜನಾ ಅಧಿಕಾರಿ ಡಾ.ಪ್ರಕಾಶ ರಾಠೋಡ, ಎನ್‌ಎಸ್‌ಎಸ್. ಘಟಕ ೧ರ ಡಾ.ಎಸ್.ಎಲ್.ಪಾಟೀಲ್ ಎನ್‌ಎಸ್‌ಎಸ್ ಘಟಕ ೨ರ ವಿಕ್ರಮ ಪಾಂಡೆ, ಗಬಸಾವಳಗಿಯ ಬಂಜಾರ ಯುವಕ ಸೇವಾ ಸಂಘದ ಅಧ್ಯಕ್ಷ ಸಂಜೀವ ಪವಾರ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳು ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಠಿಕ ಆಹಾರ, ದ್ವಿದಳ ಧಾನ್ಯ, ಸಿರಿಧಾನ್ಯ ಹಾಗೂ ಹಸಿರು ತರಕಾರಿಗಳು ಸೇವಿಸಬೇಕೆಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ್ ನರಗೋದಿ ಹೇಳಿದರು.ಪಟ್ಟಣದ ಹೂಗಾರ ಲೇಔಟನಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಂಡ ಪೌಷ್ಟಿಕತೆ, ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುರುಕುರೆ, ಪಿಜ್ಜಾ, ಬರ್ಗರ್ ಇವೆಲ್ಲ ಜಂಗ್‌ಫುಡ್ ಇದರಿಂದ ದೇಹಕ್ಕೆ ಹಾನಿಕರವಾಗುವುದು. ಇಂತಹ ತಿಂಡಿಗಳನ್ನು ಮಕ್ಕಳು ಸೇವಿಸಬಾರದು. ಇದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಕುಸುಮ ಯಾಳಗಿ, ಸಕ್ಕುಬಾಯಿ ಡಾಂಗಿ, ವಿಕಾಸ್, ದೀಕ್ಷಾ, ರೂಪಾ ಪ್ರತಿಜ್ಞಾವಿಧಿ ಭೋಧಿಸಿದರು. ಮಕ್ಕಳಾದ ಈಶ್ವರಿ, ಸೃಷ್ಟಿ, ಭುವನ್ ಭೂತಿ, ಕಾರ್ತಿಕ್ ಭಾಷಣ ಮಾಡಿದರು. ಅರ್ಪಿತ, ಪೂರ್ಣಿಮಾ, ಸಂಗಮೇಶ್, ಶಂಕರ್, ಈಶ್ವರ್, ಹರೀಶ್, ಪೌಷ್ಟಿಕಾಂಶಗಳಿಗೆ ಸಂಬAಧಿಸಿದ ಕಥೆಗಳನ್ನು ವಾಚಿಸಿದರು. ರವಿಕುಮಾರ್, ಮಲ್ಲಿಕಾರ್ಜುನ್, ಭಗವಂತ, ಮಲ್ಕಪ್ಪ, ಪೌಷ್ಟಿಕಾಂಶದ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ…
