ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2023-24ನೇ ಸಾಲಿನಲ್ಲಿ 19.66 ಲಕ್ಷ ಲಾಭ ಮಾಡಿ,ಶೇಕಡಾ 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಅವರು ರವಿವಾರದಂದು ನಗರದ ವನಶ್ರೀ ಭವನದಲ್ಲಿ
ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ, ವರದಿ ವಾಚಿಸಿ ಮಾತನಾಡಿದರು.
ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಲಾಭದಾಯಕವಾದ ಬದುಕನ್ನು ರೂಪಿಸಿಕೊಳ್ಳಲು ಸಹಕರಿಸುತ್ತಿದೆ ಎಂದು ಹೇಳಿದರು.
ನಿರ್ದೇಶಕ ಬಿ ಜಿ ಪಾಟೀಲ ಹಲಸಂಗಿ ಮಾತನಾಡಿ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸುವ ಪ್ರಾಥಮಿಕ ಗುರಿಯೊಂದಿಗೆ ನಮ್ಮ ಬ್ಯಾಂಕು ಆರಂಭಗೊಂಡು ಸತತವಾಗಿ 24 ವರ್ಷಗಳಿಂದ ಜನತೆಯ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದರು.
ನಿರ್ದೇಶಕ ಎಸ್ ಎಸ್ ಶಿರಾಡೋಣ ಮಾತನಾಡಿ,
ನಮ್ಮ ಸೊಸೈಟಿಯಲ್ಲಿ ಗ್ರಾಹಕರ ಧರ್ಮ, ಲಿಂಗ ಮತ್ತು ಜಾತಿಯನ್ನು ಲೆಕ್ಕಿಸದೇ, ಸದಸ್ಯತ್ವವು ಎಲ್ಲರಿಗೂ ಮುಕ್ತವಾಗಿದೆ. ಇದು ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಸೊಸಾಯಿಟಿ ಆಗಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಜ್ಞಾನ ಯೋಗಾಶ್ರಮದ ಅದ್ವಿತಾನಂದ ಸ್ವಾಮೀಜಿ ಮಾತನಾಡಿ, ಸೊಸೈಟಿಯು ಪರಸ್ಪರ ಸಹಾಯ ಮತ್ತು ಕಲ್ಯಾಣ ತತ್ವದ ಮೇಲೆ ಕಾರ್ಯನಿರ್ವಹಿಸಿ, ಜನಸ್ನೇಹಿಯಾಗಿ ಬೆಳೆದು, ಎಲ್ಲರ ಅಗತ್ಯತೆಗಳನ್ನು ಪೂರೈಸಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷ ಎ ಆರ್ ಉಕ್ಕಲಿ, ನಿರ್ದೇಶಕರಾದ ಜಿ ಟಿ ಪಾಟೀಲ, ಆರ್ ಎಲ್ ಇಂಗಳೇಶ್ವರ, ಎ ಎಸ್ ಹೊಸಮನಿ, ಎಸ್ ಜಿ ಗಡಗಿ, ಎಸ್ ಜಿ ಹಿಟ್ನಳ್ಳಿ, ಎಸ್ ಎಂ ಕಡಿ, ಶೋಭಾ ಕತ್ನಳ್ಳಿ ಹಾಗೂ ವಿವಿಧ ಶಾಖೆಯ ಗೌರವ ಸಲಹೆಗಾರರಾದ ಶರಣಪ್ಪ ಶಾಪೇಟಿ, ಕಾಶೀಬಾಯಿ ವಾಲೀಕಾರ, ಭೂಮಣ್ಣ ಪಾಸೋಡಿ, ಬಾಬುಗೌಡ ಪಾಟೀಲ, ಸೋಮಣ್ಣ ಬಾಗಲಕೋಟ, ವ್ಯವಸ್ಥಾಪಕಿ ಮೇಘಾ ಅರ್ಜುಣಗಿ ಸೇರಿದಂತೆ ಎಲ್ಲ ಶಾಖೆಯ ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದರು.
ಉತ್ತಮ ಗ್ರಾಹಕರನ್ನು ಹಾಗೂ ವಿವಿಧ ಶಾಖೆಯ ಗೌರವ ಸಲಹೆಗಾರರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಸಂತೋಷ ಬಂಡೆ ನಿರ್ವಹಿಸಿದರು. ಸಂಗೀತ ಶಿಕ್ಷಕ ಬಾಬಾಸಾಹೇಬ ಕಾಂಬಳೆ ಸ್ವಾಗತ ಗೀತೆ ಹಾಡಿದರು.

