ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಸದೃಢವಾದ ದೇಹದಲ್ಲಿ ಸದೃಡ ಮನಸ್ಸು ಇರುತ್ತದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ಮೊಸಲಗಿ ಹೇಳಿದರು.
ಪಟ್ಟಣದ ವಾಡೆ ಅವರಣದಲ್ಲಿ ಶನಿವಾರ ನಡೆದ 2024-25 ನೇ ಸಾಲಿನ ವಿಜಯಪುರ ಗ್ರಾಮೀಣ ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಸದೃಢರಾಗಿ ದೇಶ ಕಟ್ಟುವ ಕೆಲಸ ಮಾಡೋಣ, ಕ್ರೀಡೆಯಲ್ಲಿ ವಿಜಯಶಾಲಿಯಾಗಿ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಯಶಸ್ವೀಯಾಗಲಿ ಎಂದು ಶುಭ ಹಾರೈಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎ.ಬಿ.ಧಡಕೆ ಮಾತನಾಡಿ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಮಕ್ಕಳು ದೈಹಿಕವಾಗಿ ಸದೃಡರಾಗುತ್ತಾರೆ. ಆಟದಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಬಬಲೇಶ್ವರ ತಾಲ್ಲೂಕ ಅಧ್ಯಕ್ಷೆ ನೀಲಾ ಇಂಗಳೆ, ಗ್ರಾಮೀಣವಲಯ ಅಧ್ಯಕ್ಷ ಬಿ. ಎಸ್. ಮಠ, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ ಕೋರೆ
ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಶೋಕ ಭಜಂತ್ರಿ, ಝಡ್.ಐ. ಇಂಡಿಕರ, ಉದಯ ಕೋಟ್ಯಾಳ, ಮಲ್ಲು ಟಕ್ಕಳಕಿ, ರವಿ ಉಗಾರ, ಸಾಬು ಗಗನಮಾಲಿ, ಚನ್ನಯ್ಯ ಮಠಪತಿ, ಜಗದೀಶ ಬೋಳಸೂರ, ಐ.ಎ.ತೇಲಿ, ವಿಜಯಕುಮಾರ ದೇಸಾಯಿ, ಶಂಕರ ಖಂಡೇಕರ, ವೈ. ಬಿ. ವಾಲಿಕಾರ, ಜಿ.ಟಿ. ಕಾಗವಾಡ, ಸುಭಾಸ್ ರಾಠೋಡ, ವಸಂತ ಚವ್ಹಾಣ, ದಿಲೀಪ್ ಕಾಂಬಳೆ, ಸುಜಾತಾ ಬಾಗಲಕೋಟ, ಬಸವರಾಜ ತೇಲಿ, ರಫೀಕ್ ಜಮಾದಾರ, ಸಿದರಾಯ ಅಥಣಿ, ರವಿ ರಾಠೋಡ, ಬಿ. ಎಸ್. ಕುಮಟಗಿ ಇದ್ದರು.
ಸ್ವಾಗತವನ್ನು ಪ್ರಭು ಬಿರಾದಾರ, ನಿರೂಪಣೆಯನ್ನು ರಾಜು ಬಿಸನಾಳ, ವಂದನಾರ್ಪಣೆಯಯನ್ನು ವಸಂತ ಚವ್ಹಾಣ ನೆರವೇರಿಸಿದರು.

