Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ೦೬ ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಕಚೇರಿ ಸಹಾಯಕರ ಎರಡು ಹುದ್ದೆ ಹಾಗೂ ಕಚೇರಿ ಪ್ಯೂನ್ ಎರಡು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು, ಅಕ್ಟೋಬರ್ ೦೩ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್ ಕಟ್ಟಡ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ವಿಜಯಪುರ ಇವರಿಗೆ ಸಲ್ಲಿಸುವಂತೆಯೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ ೧೪ ಗ್ರಾಮಗಳಲ್ಲಿ ಅಕ್ಟೋಬರ್ ೦೫ ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಅಕ್ಟೋಬರ್ ೦೫ರ ಬೆಳಿಗ್ಗೆ ೧೧ ಗಂಟೆಗೆ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿಗಳು ಮತ್ತು ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ, ಇಂಡಿ ಉಪ ವಿಭಾಗಾಧಿಕಾರಿಗಳು ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ಡೋಮನಾಳ ಗ್ರಾಮದ ಗ್ರಾಮ ಚಾವಡಿಯಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಮಲಕನದೇವರಹಟ್ಟಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಬಬಲೇಶ್ವರದ ಗ್ರೇಡ-೨ ತಹಶೀಲ್ದಾರ ಅವರು ತಾಜಪೂರ ಪಿ.ಎಂ. ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಬಸವನ ಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು, ಮನಗೂಳಿ ಗ್ರಾಮದ ಗ್ರಾಮ ಚಾವಡಿಯಲ್ಲಿ, ತಹಶೀಲ್ದಾರ್ ಗ್ರೇಡ್-೧…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತದ (ಕೆಪೆಕ್) ಅಧ್ಯಕ್ಷರಾದ ಬಿ.ಎಚ್.ಹರೀಶ ಅವರು ಸೆ.೨೭ ಹಾಗೂ ಸೆ.೨೮ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಸೆ.೨೭ ರಂದು ಸಂಜೆ ೫:೩೦ಕ್ಕೆ ಬಾಗಲಕೋಟೆಯಿಂದ ಹೊರಟು, ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಸೆ.೨೮ರ ಬೆಳಿಗ್ಗೆ ೯ ಗಂಟೆಯಿಂದ ೧೦ ಗಂಟೆಯವರೆಗೆ ಶೀತಲಗೃಹ ಘಟಕಗಳಿಗೆ ಭೇಟಿ ನೀಡುವರು. ಬೆಳಿಗ್ಗೆ ೧೦ ರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತೋಟಗಾರಿಕಾ ಉಪ ನಿರ್ದೇಶಕರು, ಕೃಷಿ ಮಾರುಕಟ್ಟೆ ಉಪ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬೆಳಿಗ್ಗೆ ೧೧ ಗಂಟೆಗೆ ವಿಜಯಪುರದಿಂದ ಕುಷ್ಟಗಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತದ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ್ ಘೋಷ ಅವರು ಸೆಪ್ಟಂಬರ್ ೨೭ ಹಾಗೂ ೨೮ರಂದು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಸೆ.೨೭ರಂದು ವಿಜಯಪುರಕ್ಕೆ ಆಗಮಿಸಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳಿಗೆ ಹಾಗೂ ಶಾಲೆ, ಕಾಲೇಜು ಮತ್ತು ಐಟಿಐಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿನ ಹಾಸ್ಟೇಲ್‌ಗಳು, ಆಸ್ಪತ್ರೆಗಳಿಗೆ, ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಕಚೇರಿಗಳಿಗೆ ಭೇಟಿ ನೀಡಿ, ನಂತರ ಮುಂಗಾರು ಋತುವಿನ ವಿಪತ್ತು ನಿರ್ವಹಣಾ ಯೋಜನೆಯ ಪರಿಶೀಲನೆ ಹಾಗೂ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಅಂದು ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫-೩೦ರವರೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸೆ.೨೮ರ ಬೆಳಿಗ್ಗೆ ವಿಜಯಪುರದಿಂದ ಕಲಬುರಗಿ ಮೂಲಕ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಸೆ.೩೦ರಂದು ಗುಡ್ಡಾಪುರದಲ್ಲಿ ನಡೆವ ಕರ್ನಾಟಕ ಸಂಭ್ರಮ-೫೦ ಕುರಿತು ಅಧಿಕಾರಿಗಳಿಗೆ ಡಿಸಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸಂಭ್ರಮ-೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದ ಶ್ರೀ ದಾನಮ್ಮದೇವಿ ದೇವಸ್ಥಾನದ ಸುಕ್ಷೇತ್ರದಲ್ಲಿ ಸೆ.೩೦ ರಂದು ನಡೆಯುವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಗುಡ್ಡಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಸೇರಿದಂತೆ ಸಚಿವರು, ಗಣ್ಯಾತಿಗಣ್ಯರು ಆಗಮಿಸುವರು. ಶಿಷ್ಟಾಚಾರದಂತೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕರ್ನಾಟಕ ಗಡಿನಾಡ ಹಿರಿಯ ಚೇತನಗಳಾದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು, ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ…

Read More

ವಿಜಯಪುರ ದರಬಾರ ಪ್ರೌಡಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ | ಗುರು-ಶಿಷ್ಯರ ಮಹಾಸಂಗಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುರು ಶಿಷ್ಯರ ನಡುವಿನ ಸಂಬಂಧ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು, ಗುರು ಶಿಷ್ಯರ ನಡುವಿನ ಸಂಬಂಧದ ಶ್ರೇಷ್ಠತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು ಎಂದು ಡಾ. ಆರ್.ಬಿ.ಚೌಧರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೌತಮ್ ಆರ್. ಚೌಧರಿ ಹೇಳಿದರು.ನಗರದ ವಿ.ಭ.ದರಬಾರ ಪ್ರೌಡಶಾಲೆಯ ೧೯೮೬-೮೭ ನೇ ಸಾಲಿನ ೧೦ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ತಮ್ಮ ಅಂದಿನ ಶಾಲಾ ಗುರುಗಳಿಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ಇಂದು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ನಮಗೆ ಅಕ್ಷರ ಜ್ಞಾನ ನೀಡಿದ ಗುರುವಿನ ಶ್ರಮ ಅಡಗಿರುತ್ತದೆ. ಅವರಿಂದಲೇ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾವತ್ತೂ ಮರೆಯಬಾರದು ಎಂದರಲ್ಲದೆ, ತಮಗೆ ವಿದ್ಯಾದಾನ ನೀಡಿದ ಗುರುವೃಂದಕ್ಕೆ ಉಚಿತ ವೈದ್ಯಕೀಯ ಸೇವೆ ನೀಡಲು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಮತಕ್ಷೇತ್ರದ ಸುಂಗಠಾಣ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಗುರುವಾರ ಪಕ್ಷದ ಹಿರಿಯ ಸದಸ್ಯರು, ಕಾರ್ಯಕರ್ತರೊಂದಿಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದರು.ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಹಾಗೂ ವಿಕಸಿತ ಭಾರತ ನಿಮಿ೯ಸಲು ಅಭಿಯಾನ ಕೈಕೊಂಡಿದ್ದು, ಇದು ಪ್ರತಿ ಮನೆ ಮನೆಯಲ್ಲೂ ಜರುಗಲಿ ಎಂದು ಆಶಿಸಿದರು.ಪ್ರದಾನಿ ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಲುವಾಗಿ ಹಗಲಿರುಳು ವಿಶ್ರಮಿಸದೆ ದುಡಿಯುತ್ತಿದ್ದಾರೆ,ಭಾರತದ ಅಭಿವೃದ್ದಿಗಾಗಿ ಹಾಗೂ ಜನರ ಕಲ್ಯಾಣಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕೆಂದು ಕರೆ ನೀಡಿದರುಈ ಸಂದಭ೯ದಲ್ಲಿ ಮುಖಂಡರಾದ ಯಶವಂತ್ರಾಯಗೌಡ ರೂಗಿ, ಮಡಿವಾಳಪ್ಪಗೌಡ ಪಾಟೀಲ, ರಾಮಚಂದ್ರ ಕಲ್ಲೂರ, ರುದ್ರುಗೌಡ ಬಿರಾದಾರ, ಮಂಡಲ ಸಂಚಾಲಕ ಸಿದ್ದರಾಮ ಆನಗೋಂಡ, ಸಹ ಸಂಚಾಲಕ ಎಸ್, ಆರ್ ಪಾಟೀಲ, ರವಿಗೌಡ ಬಿರಾದಾರ, ದೌವಲತರಾಯಗೌಡ ಬಿರಾದಾರ, ಭೀಮಾಶಂಕರ ಮಜ್ಜಗಿ, ಸುನಿಲ ಪಾಟೀಲ, ಸುನೀಲ ಮಜ್ಜಿಗಿ, ಈರಣ್ಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ನಿರ್ದೇಶಕರು ಹಾಗೂ ನಗರ ಶಾಸಕರ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು ಬುಧವಾರ ಭೇಟಿ ನೀಡಿ, ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು.ವಾರ್ಡ್ ನಂ.೬ ರಲ್ಲಿ ಬರುವ ಕೆ.ಸಿ.ನಗರ ಹಾಗೂ ಬ್ಯಾಂಕರ್ಸ್ ಕಾಲೊನಿಗೆ ಭೇಟಿ ನೀಡಿ ಪರಿಶೀಲಿಸಿದ ಅವರಿಗೆ, ಕಾಲೊನಿಯಲ್ಲಿ ಹಳೆಯ ಚರಂಡಿ ಇರುವುದರಿಂದ ನೀರು ಸರಾಗವಾಗಿ ಹೋಗದೆ ತೊಂದರೆ ಉಂಟಾಗುತ್ತಿದ್ದು, ಹೊಸ ಚರಂಡಿ ನಿರ್ಮಿಸಬೇಕು, ಉದ್ಯಾನ ಅಭಿವೃದ್ಧಿ ಪಡಿಸಿ ವಾಕಿಂಗ್ ಟ್ರ‍್ಯಾಕ್ ನಿರ್ಮಿಸಬೇಕು ಹಾಗೂ ಹಾಳಾದ ಬೀದಿ ದೀಪಗಳ ಅಳವಡಿಕೆ ಮಾಡಲು ಅಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡರು.ನಂತರ ವಾರ್ಡ್ ೨೯ರ ರಾಮನಗರ, ರಾಜಾಜಿನಗರಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮನೆಗಳಲ್ಲಿ ಮಳೆ ನೀರು ನುಗ್ಗಿ ಹಾನಿಯಾದ ಕುರಿತಂತೆ ಮಾಹಿತಿ ಪಡೆದುಕೊಂಡರು.ಈ ವೇಳೆ ಅಲ್ಲಿನ ನಿವಾಸಿಗಳು ಚರಂಡಿ…

Read More

ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಾಲೆಗಳು! ಲೇಖಕರು- ಸಾಯಬಣ್ಣ ಮಾದರ (ಸಲಾದಹಳ್ಳಿ ) ಉದಯರಶ್ಮಿ ದಿನಪತ್ರಿಕೆ ನಾಯಿ ಕೊಡೆಯಂತೆ ಎಲ್ಲೆಂದರಲ್ಲಿ ತಲೆಯೆತ್ತುತ್ತಿರುವ ಖಾಸಗಿ ಶಾಲೆಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಪೈಪೋಟಿಗೆ ಬಿದ್ದಂತೆ ಖಾಸಗಿ ಶಾಲೆಗಳಿಗೆ ಸರಕಾರ ಪರ್ಮಿಷನ್ ಕೊಡುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಪ್ರತಿಯೊಂದು ಹಳ್ಳಿಗೆ ಒಂದೋ ಎರಡೋ ಖಾಸಗಿ ಶಾಲೆಗಳಿವೆ. ಅವುಗಳಿಗೆ ಪರ್ಮಿಷನ್ ಕೊಡುವಲ್ಲಿ ಯಾವುದೇ ಸರ್ಕಾರಿ ನಿಯಮವನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಅವರು ಶಾಲಾ ಆಡಳಿತ ಮಂಡಳಿಯ ವರಮಾನದ ಕಡೆ ಮಾತ್ರ ಗಮನಹರಿಸಿರುವುದು ಕಂಡುಬರುತ್ತದೆ.2015ರಂದು ಜನವರಿ ತಿಂಗಳು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಖಾಸಗಿ ಶಾಲಾ ವಿದ್ಯಾರ್ಥಿನಿಯಾದ ರಿಯಾನ ಎಂಬ ವಿದ್ಯಾರ್ಥಿನಿಯು ಶಾಲೆಯನ್ನು ಮುಗಿಸಿಕೊಂಡು ಮೂರು ಚಕ್ರದ ಆಟೋದಲ್ಲಿ ಸುಮಾರು 20 ವಿದ್ಯಾರ್ಥಿನಿಯರನ್ನು ತುಂಬಿಕೊಂಡು ಹೊನ್ನಳ್ಳಿಯಿಂದ 9 ಕಿಲೋಮೀಟರ್ ದೂರ ಇರುವ ಅಸಂತಾಪುರ ಗ್ರಾಮಕ್ಕೆ ಹೊರಟಿತ್ತು. ಆಟೋದ ಚಾಲಕನು ಟೇಪ್ ರೆಕಾರ್ಡನ್ನು ಭಾರಿ ಸೌಂಡ್ ಇಟ್ಟುಕೊಂಡು ಓಡಿಸುತ್ತಿದ್ದ ಚಾಲಕನ ಅಜಾಗ್ರಕತೆಯ ಚಾಲನೆಯಿಂದಾಗಿ ತಿರುವಿನ ರಸ್ತೆಯಲ್ಲಿ ಆಟೋ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ವಿಜಯಪುರ ನಗರದಲ್ಲಿ ಪ್ರಥಮ ಕಿತ್ತೂರು ಕರ್ನಾಟಕ ಜಾಂಬುರೇಟ್ ಆಯೋಜನೆ ಮಾಡುವ ಉದ್ದೇಶದಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹಾಗೂ ರಾಜ್ಯ ಪ್ರಧಾನ ಆಯುಕ್ತ ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಇವರ ಮಾರ್ಗದರ್ಶನದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.ಈ ಪ್ರಥಮ ಪ್ರಥಮ ಕಿತ್ತೂರು ಕರ್ನಾಟಕ ಜಾಂಬುರೇಟ್ (ಕಾರ್ಯಕ್ರಮ)ದಲ್ಲಿ ರಾಜ್ಯದ ಎಂಟು ಜಿಲ್ಲೆಗಳ ಒಳಗೊಂಡ ಸುಮಾರು ನಾಲ್ಕು ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮವು ೨೦೨೪ರ ಡಿಸೆಂಬರ್ ೧೪ ರಿಂದ ೧೮ ರವರೆಗೆ ವಿಜಯಪುರ ನಗರದ ಬಿ.ಎಲ್.ಡಿ.ಈ. ಸಂಸ್ಥೆಯ ನ್ಯೂ ಕ್ಯಾಂಪಸ್, ಸೋಲಾಪುರ ರೋಡ, ಇಲ್ಲಿ ನಡೆಸಲು ತೀರ್ಮಾನಿಸಲಾಯಿತು.ಈ ಐದು ದಿನಗಳ ಕಾರ್ಯಕ್ರಮದಲ್ಲಿ ಕಿತ್ತೂರು ಕರ್ನಾಟಕ ಜಾಂಬೂರೇಟದಲ್ಲಿ ಚಿತ್ರಕಲಾ ಸ್ಪರ್ಧೆ, ಉತ್ತರ ಕರ್ನಾಟಕದ ಜಾನಪದ ಜಾತ್ರೆ, ಫ.ಗು. ಹಳಕಟ್ಟಿಯವರ ವಚನ ಕಮ್ಮಟ, ಮಕ್ಕಳಿಗೆ ಕರಕುಶಲ ಚಟುವಟಿಕೆಗಳು,…

Read More