ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಮತಕ್ಷೇತ್ರದ ಸುಂಗಠಾಣ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಗುರುವಾರ ಪಕ್ಷದ ಹಿರಿಯ ಸದಸ್ಯರು, ಕಾರ್ಯಕರ್ತರೊಂದಿಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಹಾಗೂ ವಿಕಸಿತ ಭಾರತ ನಿಮಿ೯ಸಲು ಅಭಿಯಾನ ಕೈಕೊಂಡಿದ್ದು, ಇದು ಪ್ರತಿ ಮನೆ ಮನೆಯಲ್ಲೂ ಜರುಗಲಿ ಎಂದು ಆಶಿಸಿದರು.
ಪ್ರದಾನಿ ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಲುವಾಗಿ ಹಗಲಿರುಳು ವಿಶ್ರಮಿಸದೆ ದುಡಿಯುತ್ತಿದ್ದಾರೆ,
ಭಾರತದ ಅಭಿವೃದ್ದಿಗಾಗಿ ಹಾಗೂ ಜನರ ಕಲ್ಯಾಣಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕೆಂದು ಕರೆ ನೀಡಿದರು
ಈ ಸಂದಭ೯ದಲ್ಲಿ ಮುಖಂಡರಾದ ಯಶವಂತ್ರಾಯಗೌಡ ರೂಗಿ, ಮಡಿವಾಳಪ್ಪಗೌಡ ಪಾಟೀಲ, ರಾಮಚಂದ್ರ ಕಲ್ಲೂರ, ರುದ್ರುಗೌಡ ಬಿರಾದಾರ, ಮಂಡಲ ಸಂಚಾಲಕ ಸಿದ್ದರಾಮ ಆನಗೋಂಡ, ಸಹ ಸಂಚಾಲಕ ಎಸ್, ಆರ್ ಪಾಟೀಲ, ರವಿಗೌಡ ಬಿರಾದಾರ, ದೌವಲತರಾಯಗೌಡ ಬಿರಾದಾರ, ಭೀಮಾಶಂಕರ ಮಜ್ಜಗಿ, ಸುನಿಲ ಪಾಟೀಲ, ಸುನೀಲ ಮಜ್ಜಿಗಿ, ಈರಣ್ಣ ಬಾಸಗಿ ಕಲ್ಲಪ್ಪ ಬಶೆಟ್ಟಿ ಹಾಗೂ ಗ್ರಾಮಸ್ಥರಿದ್ದರು.

