Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸುರಕ್ಷತಾ ನಿಯಮಗಳನ್ನು ಹೊಂದಿರದ ಶಾಲಾ ವಾಹನಗಳು
ವಿಶೇಷ ಲೇಖನ

ಸುರಕ್ಷತಾ ನಿಯಮಗಳನ್ನು ಹೊಂದಿರದ ಶಾಲಾ ವಾಹನಗಳು

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಾಲೆಗಳು!

ಲೇಖಕರು- ಸಾಯಬಣ್ಣ ಮಾದರ (ಸಲಾದಹಳ್ಳಿ )

ಉದಯರಶ್ಮಿ ದಿನಪತ್ರಿಕೆ

ನಾಯಿ ಕೊಡೆಯಂತೆ ಎಲ್ಲೆಂದರಲ್ಲಿ ತಲೆಯೆತ್ತುತ್ತಿರುವ ಖಾಸಗಿ ಶಾಲೆಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಪೈಪೋಟಿಗೆ ಬಿದ್ದಂತೆ ಖಾಸಗಿ ಶಾಲೆಗಳಿಗೆ ಸರಕಾರ ಪರ್ಮಿಷನ್ ಕೊಡುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಪ್ರತಿಯೊಂದು ಹಳ್ಳಿಗೆ ಒಂದೋ ಎರಡೋ ಖಾಸಗಿ ಶಾಲೆಗಳಿವೆ. ಅವುಗಳಿಗೆ ಪರ್ಮಿಷನ್ ಕೊಡುವಲ್ಲಿ ಯಾವುದೇ ಸರ್ಕಾರಿ ನಿಯಮವನ್ನು ಅಧಿಕಾರಿಗಳು ಪರಿಗಣಿಸಿಲ್ಲ. ಅವರು ಶಾಲಾ ಆಡಳಿತ ಮಂಡಳಿಯ ವರಮಾನದ ಕಡೆ ಮಾತ್ರ ಗಮನಹರಿಸಿರುವುದು ಕಂಡುಬರುತ್ತದೆ.
2015ರಂದು ಜನವರಿ ತಿಂಗಳು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಖಾಸಗಿ ಶಾಲಾ ವಿದ್ಯಾರ್ಥಿನಿಯಾದ ರಿಯಾನ ಎಂಬ ವಿದ್ಯಾರ್ಥಿನಿಯು ಶಾಲೆಯನ್ನು ಮುಗಿಸಿಕೊಂಡು ಮೂರು ಚಕ್ರದ ಆಟೋದಲ್ಲಿ ಸುಮಾರು 20 ವಿದ್ಯಾರ್ಥಿನಿಯರನ್ನು ತುಂಬಿಕೊಂಡು ಹೊನ್ನಳ್ಳಿಯಿಂದ 9 ಕಿಲೋಮೀಟರ್ ದೂರ ಇರುವ ಅಸಂತಾಪುರ ಗ್ರಾಮಕ್ಕೆ ಹೊರಟಿತ್ತು. ಆಟೋದ ಚಾಲಕನು ಟೇಪ್ ರೆಕಾರ್ಡನ್ನು ಭಾರಿ ಸೌಂಡ್ ಇಟ್ಟುಕೊಂಡು ಓಡಿಸುತ್ತಿದ್ದ ಚಾಲಕನ ಅಜಾಗ್ರಕತೆಯ ಚಾಲನೆಯಿಂದಾಗಿ ತಿರುವಿನ ರಸ್ತೆಯಲ್ಲಿ ಆಟೋ ಪಲ್ಟಿ ಯಾಗಿ ರಿಯಾನ್ ಎಂಬ ಪ್ರತಿಭಾವಂತ ವಿದ್ಯಾರ್ಥಿಯು ಸ್ಥಳದಲ್ಲೇ ಸಾವು ಗೀಡಾದಳು ಹಲವು ವಿದ್ಯಾರ್ಥಿನಿಗಳು ಗಾಯಗೊಂಡರು ವಿಪರಾಸೆಯೆಂದರೆ ಇದು ಯಾವುದೇ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಲಿಲ್ಲ ಉಳ್ಳವರ ಕೈಯಿಂದ ಆ ಪ್ರಕರಣವು ಮಾಯವಾಯಿತು ಮಗಳ ಸಾವಿನಿಂದ ಅವರ ತಾಯಿಯು ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳಬೇಕಾಯಿತು.
ಇಂತಹ ದುರ್ಘಟನೆಗಳು ಹಲವಾರು ನಡೆದರೂ ಖಾಸಗಿ ಶಾಲಾ ವಾಹನಗಳು ಹೆಗ್ಗಿಲ್ಲದೆ ಓಡಾಡುತ್ತಿರುವುದನ್ನು ನಾವು ನೋಡಬಹುದು ಯಾವ ಖಾಸಗಿ ಶಾಲೆಗಳು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ವಾಹನಗಳಿಗೆ ರೂಪಿಸಿರುವ ಸುರಕ್ಷತಾ ಮಾರ್ಗಸೂಚಿಯು ರಾಜ್ಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಾಗಿದೆ. ಆನೆ ನಡೆದಿದ್ದೇ ದಾರಿ ಎಂಬುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಗ್ಧ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕದ ಸೋಗಿನಲ್ಲಿ ಪಾಲಕರಿಂದ ಲಕ್ಷಾನುಗಟ್ಟಲೆ ಹಣ ವಸೂಲಿ ಮಾಡುತ್ತಿವೆ ಆದರೆ ಮಕ್ಕಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿವೆ ಅವುಗಳು ಬಳಸಬೇಕಾದಂತ ಸುರಕ್ಷತಾ ಮಾರ್ಗಸೂಚಿಯ ನಿಯಮಗಳನ್ನು ಗಾಳಿಗೆ ತೂರಿವೆ.
ಗ್ರಾಮೀಣ ಪ್ರದೇಶದಲ್ಲಿ ಅಂತೂ ಹೇಳುವವರಿಲ್ಲ ಕೇಳುವವರಿಲ್ಲದಂತ ಪರಿಸ್ಥಿತಿ ಮಕ್ಕಳನ್ನು ಕುರಿಗಳಂತೆ ವಾಹನದಲ್ಲಿ ತುಂಬಿಸಿ ಕರೆದ್ದೊಯ್ಯುತ್ತಾರೆ ಅನಾನುಭವಿ ಚಾಲಕನ ನೇಮಿಸಿಕೊಳ್ಳುವುದು ಮತ್ತು ಅತಿ ವೇಗದ ಚಾಲನೆ, ಶಾಲಾ ವಾಹನದ ಒಳ ವಿನ್ಯಾಸ ಬದಲಾಯಿಸುವುದು, ಹಳೆಯ ಸುಸ್ಥಿತಿಯಲ್ಲಿ ಇರದ ವಾಹನಗಳ ಬಳಕೆ ಸಾಮಾನ್ಯವಾಗಿವೆ.


ಪಾಲಕರು ಶಿಕ್ಷಣಕ್ಕೆ ಕೊಡುವಷ್ಟು ಪ್ರಾಮುಖ್ಯತೆ ಮಕ್ಕಳ ಸುರಕ್ಷತೆಗೆ ವಹಿಸದಿರುವುದು ದುರದೃಷ್ಟ ಎನ್ನಬಹುದು.
ಇತ್ತೀಚಿಗೆ ಗೋಕಾಕ್ ತಾಲೂಕಿನ ಮರಡಿಮಟ್ಟ ಗ್ರಾಮದ ಖಾಸಗಿ ಶಾಲೆಗೆ ಸೇರಿದ ಬಸ್ ಸ್ಟೇರಿಂಗ್ ರಾಡ ಮುರಿದು ಪಲ್ಟಿಯಾಗಿ ಅಲ್ಲಿ ದುರ್ಘಟನೆ ನಡೆಯಿತು ವಾಹನದಲ್ಲಿದ್ದ 17 ವಿದ್ಯಾರ್ಥಿಗಳು ಬಾರಿ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಉತ್ತರ ಕನ್ನಡದ ಸಿ ಬಿ ಎಸ್ ಈ ಖಾಸಗಿ ಶಾಲಾ ವಾಹನ ಪಲ್ಟಿಯಾಗಿ ಒಬ್ಬಳುವಿದ್ಯಾರ್ಥಿನಿಯು ಸಾವು ಗೇಡಾಗಿರುವುದು ಇನ್ನು ಮಾಸಿಲ್ಲ ಇಂತಹ ಹಲವಾರು ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದೆ ಕೆಲವು ಮಾತ್ರ ಸಮಾಜದ ಗಮನಕ್ಕೆ ಬಂದರೆ ಸಾವಿರಾರು ಪ್ರಕರಣಗಳು ಖಾಸಗಿ ಶಾಲಾ ಸಂಸ್ಥೆಯವರು ಮತ್ತು ಅಧಿಕಾರಿಗಳ ಜೊತೆ ಶಾಮೀಲಾಗಿ ಮುಚ್ಚಿಹೋಗಿವೆ.
ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಸುವ ಪಾಲಕರ ಹುಚ್ಚು ಮಧ್ಯಮ ವರ್ಗದ ಜನರು ಪೈಪೋಟಿಗೆ ಬಿದ್ದಂತೆ ಸಮೀಪದ ಸರ್ಕಾರಿ ಶಾಲೆಯನ್ನು ಬಿಟ್ಟು ದೂರದಲ್ಲಿರುವ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ ಮಧ್ಯಮ ವರ್ಗದವರ ಪ್ರತಿಷ್ಠತೆಯ ಶಿಕ್ಷಣದ ಭೂತದಿಂದ ಎಳೆಯ ಮಕ್ಕಳು ತಮ್ಮ ಭವಿಷ್ಯವನ್ನೇ ಪಾಲಕರು ಹಾಳು ಗೆಡುತ್ತಿರುವುದು ವಿಷಾದನೀಯ.
ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಶಾಲೆಗೆ ಸೇರಿಸುವ ಪಾಲಕರು ತಮ್ಮ ಮಕ್ಕಳು ಎಷ್ಟು ಸುರಕ್ಷಿತ ಎಂಬುವ ಕಾಳಜಿಯೇ ಇಲ್ಲ ಹಲವಾರು ಪ್ರತಿಷ್ಠಿತ ಶಾಲೆಗಳೆಲ್ಲ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೀಡುವಷ್ಟು ಆದ್ಯತೆ ರಕ್ಷಣಾ ಸುರಕ್ಷತೆಗೆ ನೀಡುವ ವಿಚಾರದಲ್ಲಿಲ್ಲ
ಬಹುತೇಕ ಖಾಸಗಿ ಶಾಲಾ ವಾಹನಗಳು ಮತ್ತು ನಾಲ್ಕು ಚಕ್ರದ ಆಟೋಗಳು ಸುರಕ್ಷತಾ ನಿಯಮಗಳ ಬಗ್ಗೆ ಅರಿವೇ ಇಲ್ಲ ಪ್ರತಿನಿತ್ಯ ಶಾಲೆ ಆರಂಭವಾದ ನಂತರ ಮತ್ತು ಮುಕ್ತಾಯದ ಸಂದರ್ಭದಲ್ಲಿ ವಾಹನಗಳ ಕಂಡರೆ ಎಂತವರಿಗಾದರೂ ಇದು ಅರ್ಥವಾಗುತ್ತದೆ.
ಖಾಸಗಿ ಶಾಲಾ ವಾಹನಗಳ ಅಪಘಾತಗಿಡಾಗಿರುವುದು ಅವುಗಳಿಂದಾಗಿರುವ ಕಹಿ ಘಟನೆಗಳನ್ನು ನಾವು ನೋಡಬಹುದು 2016ರ ಜೂನ್ 21ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಶಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಶಾಲೆಯ 8 ಮಕ್ಕಳು ಕೊನೆಯ ಉಸಿರು ಎಳಿದರು ನಾಲ್ಕೈದು ಮಕ್ಕಳು ತೀರ್ವ ಗಾಯಗಳಾಗಿದ್ದವು ಅದು ಓಮಿನಿ ಶಾಲಾ ವಾಹನವಾಗಿತ್ತು. ಅದೇ ತಿಂಗಳು ಹುಬ್ಬಳ್ಳಿಯಲ್ಲಿ ಶಾಲಾ ವಾಹನವ ಅಪಘಾತವಾಗಿ ವಿದ್ಯಾರ್ಥಿಗಳು ತೀವ್ರ ಗಾಯಗಳಾಗಿದ್ದು ನೋಡಿದ್ದೇವೆ.
ಏನು ಅರಿಯದ ಆ ವಿದ್ಯಾರ್ಥಿನಿಯ ಮುಂದಿನ ಭವಿಷ್ಯದ ಕನಸು ಹೊತ್ತು ಶಾಲೆಗೆ ಹೋದ ವಿದ್ಯಾರ್ಥಿನಿಯು ಮರಳಿ ಮನೆಗೆ ಬರಲಿಲ್ಲ ಈ ದುರ್ಘಟನೆಯೂ 2018ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದು ಇನ್ನೂ ಹಸಿರಾಗಿದೆ. ಇಷ್ಟು ಮಾತ್ರವಲ್ಲದೆ ರಿಕ್ಷಾದಲ್ಲಿ ಅಥವಾ ಓಮಿನಿ ವಾಹನಗಳಲ್ಲಿ ಶಾಲಾ ಮಕ್ಕಳು ಹೋಗುತ್ತಿರುವಾಗ ಅಪಘಾತ ಕ್ಕಿಡಾಗಿ ಸಾವು ನೋವು ಸಂಭವಿಸಿರುವುದು ರಾಜ್ಯದಲ್ಲಿ ನಡೆದರೂ ಅವು ಬೆಳಕಿಗೆ ಬಂದಿಲ್ಲ.
RC 276 AP ಅನ್ವಯ ಖಾಸಗಿ ಶಾಲಾ ವಾಹನಗಳ ನಿರ್ವಹಣೆ ಮಾರ್ಗಸೂಚಿಯು CSE AP ಶಾಲಾ ಮಕ್ಕಳ ಸುರಕ್ಷತೆ ಕುರಿತು ದಿನಾಂಕ 19 ಮೇ 2015ರಂದು PROC RC NO 276/PS-1/2014ಅನು ಬಿಡುಗಡೆ ಮಾಡಿದೆ. ಇದರ ಅನ್ವಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಡಿಯಲ್ಲಿ ಶಾಲಾ ಮಕ್ಕಳು ಸಾಗಿಸುವ ಶಾಲಾ ಬಸ್ಸುಗಳು ಮತ್ತು ವಾಹನಗಳು ರಾಜ್ಯದ ವಿವಿಧ ಭಾಗಗಳಲ್ಲಿ ಅಪಘಾತಗಳ ಸಂಭವಿಸಿದ್ದು ಈ ಘಟನೆಗಳು ಶಾಲಾ ಆಡಳಿತ ಮಂಡಳಿಯವರು ಬಸ್ಸುಗಳನ್ನು ಅಗತ್ಯ ಇರುವ ಮಟ್ಟಿಗೆ ನಿರ್ವಹಿಸುತ್ತಿಲ್ಲ ಎಂದು ದೃಢಪಡಿಸಿದೆ.
ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನಗಳನ್ನು ವ್ಯಾಪಾರಿಕರಣದ ದೃಷ್ಟಿಯಿಂದ ನೋಡುತ್ತಿರುವುದು ಏನು ಗುಟ್ಟಾಗಿ ಉಳಿದಿಲ್ಲ. ಒಂದಡೆ ನಿಯಮ ಉಲ್ಲಂಘನೆಯಾದರೆ ಮತ್ತೊಂದೆಡೆ ಎಳೆಯ ಮಕ್ಕಳು ಇಕ್ಕಟ್ಟಿನಲ್ಲಿ ಉಸಿರು ಕಟ್ಟುವ ವಾತಾವರಣದಲ್ಲಿ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ. ಇದು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಿತಿಮೀರಿದೆ ಎಂದು ಹೇಳಬಹುದು.
ಉತ್ತರ ಕರ್ನಾಟಕದ ಭಾಗದಲ್ಲಿ ಬೆಳಣಿಕೆಯಷ್ಟು ಶಾಲಾ ಬಸ್ಸುಗಳು ಕಾಣಬಹುದು. ಉಳಿದವು ಗೂಡ್ಸ್ ಗಾಡಿಗಳು, ಆಟೋಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ. ಗ್ರಾಮೀಣ ಅನಕ್ಷರಸ್ಥ ಜನರು ಕಂಡೂ ಕುರುಡ ರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ವಾಹನದ ಸೌಲಭ್ಯ ಇರುವುದಿಲ್ಲ. ಹೇಗೋ ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಕಪ್ಪ ಎನ್ನುವುದು ಪೋಷಕರ ಧೋರಣೆ.
ಬೆಳ್ಳಗಿರುವುದೆಲ್ಲಾ ಹಾಲಲ್ಲ, ಕಾವಿ ತೊಟ್ಟವರೆಲ್ಲ ಸ್ವಾಮಿಗಳಲ್ಲ ಎನ್ನುವ ಹಾಗೆ ಹಳದಿ ಬಣ್ಣ ಬಳಿದುಕೊಂಡಿರುವ ವಾಹನಗಳೆಲ್ಲ ಶಾಲಾ ವಾಹನಗಳಲ್ಲ. ರಾಜ್ಯದ ಬಹುತೇಕ ಶಾಲಾ ವಾಹನಗಳು ಹಳದಿ ಬಣ್ಣ ಒಂದನ್ನು ಬಿಟ್ಟು ಮತ್ಯಾವುದೂ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಶಾಲಾ ಸಂಸ್ಥೆಗಳ ನಿಜ ಬಣ್ಣ ತೋರಿಸುತ್ತದೆ.
ಶಾಲಾ ಮಕ್ಕಳ ರಸ್ತೆ ಸುರಕ್ಷತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳುವಂತೆ 5 ರಿಂದ 19 ವರ್ಷದ ವಯಸ್ಸಿನ ಮಕ್ಕಳು ಮತ್ತು ಯುವಕರಲ್ಲಿ ಮರಣದ ಪ್ರಾಥಮಿಕ ಕಾರಣವೇನೆಂದರೆ ರಸ್ತೆ ಸಂಚಾರ ಘಟನೆಗಳು. ಮಕ್ಕಳು ತಮ್ಮ ಸೀಮಿತ ದೈಹಿಕ ಅರಿವಿನ ಮತ್ತು ಸಾಮಾಜಿಕ ಬೆಳವಣಿಗೆಯಿಂದಾಗಿ ದುರ್ಬಲ ರಸ್ತೆ ಬಳಕೆದಾರರ ಸಾಲಿಗೆ ಸೇರುತ್ತಾರೆ. ರಸ್ತೆ ಅಪಘಾತದಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ತೀವ್ರ ಅಪಾಯಗಳಾಗುವುದು ಹೆಚ್ಚು. ಏಕೆಂದರೆ ಮಕ್ಕಳ ದೇಹವು ಇನ್ನೂ ಬೆಳವಣಿಗೆ ಹಂತದಲ್ಲಿ ಇರುತ್ತದೆ. ಚಿಕ್ಕ ಮಕ್ಕಳಿಗೆ ತಲೆ, ಕುತ್ತಿಗೆ, ತಲೆ ಬುರುಡೆ ತೆಳ್ಳಗಿರುತ್ತದೆ. ಇದು ಮೆದುಳಿಗೆ ಕಡಿಮೆ ರಕ್ಷಣೆ ನೀಡುತ್ತದೆ. ಆದ್ದರಿಂದ ಖಾಸಗಿ ಶಾಲಾ ವಾಹನಗಳಲ್ಲಿ ಮಕ್ಕಳು ಅಸುರಕ್ಷತೆಯನ್ನು ಹೊಂದಿದ್ದಾರೆ ಎಂದು ಹೇಳಿದೆ.
ಕರ್ನಾಟಕ ಸರ್ಕಾರ ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮವು ಶಾಲಾ ವಾಹನಗಳಿಗೆ ಅಷ್ಟೇ ಅಲ್ಲ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೆ ಅನ್ವಯವಾಗುತ್ತದೆ.
ಇದು 15 ಜೂನ್ 2024 ರಂದು ಹೊಸ ನಿಯಮ ಹೊರಡಿಸಿದ್ದು ಅದನ್ನು ತಕ್ಷಣ ವಾಹನ ಮಾಲೀಕರು ಅಳವಡಿಸಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಹೊಸ ನಿಯಮದ ಪ್ರಕಾರ ಶಾಲಾ ವಾಹನಗಳು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ಮೋಟಾರ್ ವಾಹನ ಕಾಯಿದೆ 1988ರ ಸೆಕ್ಷನ್ 96 (2) ಮತ್ತು212 ರ ಅಧಿಕಾರದ ಅಡಿಯಲ್ಲಿ ಶಾಲಾ ಮಕ್ಕಳ ಸುರಕ್ಷತೆಯ ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ.

  • ಶಾಲಾ ವಾಹನಗಳು ಪಾಲಿಸಬೇಕಾದಂತ ನಿಯಮಗಳು
  • ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಮಾತ್ರ ಚಲಿಸಬೇಕು
  • ಶಾಲಾ ವಾಹನವು 15 ವರ್ಷದಷ್ಟು ಹಳೆದಿರಬಾರದು
  • ವಾಹನದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಬೇಕು
  • ಶಾಲಾ ವಾಹನಗಳು ಮತ್ತು ಬಸ್ಸುಗಳು ಹಳದಿ ಬಣ್ಣದಿಂದ ಕೂಡಿದ್ದು ಬಸ್ಸಿನ ಎರಡು ಬದಿಯಲ್ಲಿಯು ಶಾಲೆಯ ಹೆಸರು ಸ್ಪಷ್ಟವಾಗಿ ಬರೆದಿರಬೇಕು
  • ಶಾಲಾ ವಾಹನದ ಹಿಂಭಾಗ ಮುಂಭಾಗಲ್ಲಿ ಶಾಲಾ ವಾಹನ ಎಂದು ಬರೆದು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು
  • ವಾಹನದಲ್ಲಿ ತೆರೆದ ಕಿಟಕಿ ಇರಬಾರದು ಅಡ್ಡಲವಾಗಿ ಸರಳಗಳನ್ನು ಅಳವಡಿಸಿರಬೇಕು
  • ತುರ್ತು ನಿರ್ಗಮನಾದ ದ್ವಾರ ಇರಬೇಕು
  • ಶಾಲಾ ವಾಹನದ ಚಾಲಕನನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪೋಲಿಸ್ ಪರಿಶೀಲನೆ ಆಗಿರಬೇಕು ಬಸ್ಸಿನಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ತರಬೇತಿ ಹೊಂದಿರುವ ಶಾಲಾ ಮಹಿಳಾ ಸಿಬ್ಬಂದಿ ಇರಬೇಕು
  • ಶಾಲಾ ವಾಹನದಲ್ಲಿ ಸೀಟಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುವಂತಿಲ್ಲ
  • ವಾಹನದಲ್ಲಿ ಎಲ್‌ಪಿಜಿ ಸಿಲಿಂಡರ್ ಇದ್ದಲ್ಲಿ ನೋಂದಣಿ ಸಂಖ್ಯೆ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿರಬೇಕು
  • ಸಿಲಿಂಡರ್ ಮೇಲೆ ಸೀಟು ಅಳವಡಿಸುವಂತಿಲ್ಲ
  • ಶಾಲಾ ವಾಹನದ ಚಾಲಕನಿಗೆ ತಿಳಿ ನೀಲಿ ಬಣ್ಣದ ಅಂಗಿ. ಕೋರ್ಟು, ಕಪ್ಪು ಬಣ್ಣದ ಬೂಟು ಧರಿಸಿರಬೇಕು ಶರ್ಟಿನ ಮೇಲೆ ಬಲಭಾಗದಲ್ಲಿ ಚಾ ಲಕನ ಹೆಸರಿನ ಬ್ಯಾಡ್ಜ್ ಹಾಕಿಕೊಂಡಿರಬೇಕು
  • ಆಟೋದಲ್ಲಿ ಆರು ಮಕ್ಕಳಿಗಿಂತ ಹೆಚ್ಚಿಗೆ ಕರೆದೊಯ್ಯುವಂತಿಲ್ಲ
  • ಮಕ್ಕಳ ಬ್ಯಾಗನ್ನು ಆಟೋ ಕನ್ನಡಿಗೆ ನೇತು ಹಾಕುವಂತಿಲ್ಲ
    ಇಂಥ ಅನೇಕ ನಿಯಮಗಳನ್ನು ಸರ್ಕಾರ ಹೊರಡಿಸಿದರೂ ಖಾಸಗಿ ಶಾಲೆಗಳಿಗೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬುವಂತ ಪರಿಸ್ಥಿತಿ ಸರ್ಕಾರದ್ದಾಗಿದೆ. ಸರಕಾರ ರೂಪಿಸಿದ ಸುರಕ್ಷತಾ ಕ್ರಮಗಳ ನಿಯಮಗಳು ಅವು ಕೇಳ್ವಲ್ ಕಾಗದ ಮೇಲೆ ಉಳಿದಿವೆ. ಕಣ್ಣೆದುರೇ ಉಲ್ಲಂಘನೆ ಮಾಡುತ್ತಿದ್ದರೂ ಆರ ಟಿ ಓ, ಹಾಗೂ ಪೊಲೀಸ್ ಇಲಾಖೆ ಮೌನ ವಹಿಸಿವೆ. ಸರ್ಕಾರದಲ್ಲಿ ಬೇರೆ ಯಾವ ನಿಯಮಗಳು ಜಾರಿಗೆ ಆಗಲಿ, ಇಲ್ಲ ಕಾಗದ ಮೇಲೆ ಉಳಿಯಲಿ, ಆದರೆ ಇಂದಿನ ಮಕ್ಕಳು ನಾಳಿನ ಭವಿಷ್ಯದ ಪ್ರಜೆಗಳು. ಆದಕಾರಣ ಸರ್ಕಾರವು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕೆಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.