Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿವಿಧ ಬೇಡಿಕೆಗೆ ಆಗ್ರಹಿಸಿ ಗ್ರಾಮಾಡಳಿತ ಸಂಘದಿಂದ ಅನಿರ್ಧಿಷ್ಠಾವಧಿ ಮುಷ್ಕರ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನಮ್ಮ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ದೇಶನದಂತೆ ಬೇಡಿಕೆ ಈಡೇರುವವರೆಗೆ ಲೆಕ್ಕಣಿಗೆ ಬದಿಗಿಟ್ಟು ಮುಷ್ಕರ ಮುಂದುವರೆಸಲಾಗುವುದು ಎಂದು ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸಂಗಮೇಶ ಗ್ವಾಳೇದ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಮುಂದೆ ಗುರುವಾರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘ ಕರೆ ಕೊಟ್ಟ ಶಾಂತಿಯುತ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಬೆಂಬಲವಾಗಿ ಗುರುವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿ ತಾಲ್ಲೂಕು ಸಂಘದ ವತಿಯಿಂದ ಜರುಗಿದ ಮುಷ್ಕರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸರಕಾರ ನಮ್ಮ ಕೆಲಸಕ್ಕೆ ತಕ್ಕಂತೆ ಸಮಾನ ವೇತನ ನೀಡದೆ ಕೇವಲ ಕೆಲಸ ತೆಗೆದುಕೊಳ್ಳುವುದರಲ್ಲಿ ನಿರತವಾಗಿದೆ. ತಾಂತ್ರಿಕತೆ ಗೊತ್ತಿಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕ ಕಾರ್ಯಗಳಲ್ಲಿ ತೊಡಗಿಸುತ್ತಿದ್ದು ಅದಕ್ಕೆ ಸಂಭಾವನೆ ನೀಡುತ್ತಿಲ್ಲ. ಈ ವಿಷಯದ ಕುರಿತು ಹಲವಾರು ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆಯಿಟ್ಟು ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರದ ೨೧ ಸೇವೆಗಳು ಗ್ರಾಮಾಡಳಿತದ ಮೂಲಕವೇ ಅನುಷ್ಠಾನಗೊಳ್ಳುತ್ತಿವೆ.…
ಡೋಣಿ ನದಿ ಪಾತ್ರದ ಜಮೀನುಗಳಲ್ಲಿ ಪ್ರವಾಹದಿಂದ ನೀರು ನಿಂತು ಹಾಳಾಗಿರುವ ಬೆಳೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದ ಡೋಣಿ ನದಿಯ ಅಕ್ಕಪಕ್ಕದ ಜಮೀನುಗಳು ಡೋಣಿ ಪ್ರವಾಹದಿಂದ ನೀರು ನಿಂತು ಬೆಳೆಗಳು ಹಾಳಾಗಿದ್ದು ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಗ್ರೇಡ್-೨ ತಹಶೀಲ್ದಾರ ಎಸ್.ಎಚ್. ರಾಠೋಡ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಕೊಂಡಗೂಳಿ ಗ್ರಾಮದ ರೈತ ಪ್ರಮುಖರು ಗ್ರಾಮದ ಜಮೀನುಗಳಲ್ಲಿ ಡೋಣಿ ನೀರು ನಿಂತು ಬೆಳೆಗಳ ಹಾಳಾದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ರೈತಪ್ರಮುಖರಾದ ಎಸ್.ಎಮ್.ನಾಗಾವಿ ಮಾತನಾಡಿ, ಸತತ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ನಮ್ಮ ಗ್ರಾಮದ ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ಸಂಪೂರ್ಣ ಹಾಳಾಗಿವೆ. ಈಗಲೂ ಜಮೀನುಗಳಲ್ಲಿ ನಡೆಯಲು ಬಾರದಂತ ಪರಿಸ್ಥಿತಿಯಿದೆ. ಇಂತಹ ನೀರು ನಿಂತ ಜಮೀನುಗಳ ಬೆಳೆಗಳ ಫಸಲು ಬರುವುದು ಸಾಧ್ಯವೇ ಇಲ್ಲ.ಜಮೀನುಗಳ ವಾಸ್ತವಿಕ ಅಂಶಗಳನ್ನು ಅರಿಯಲು ತಾವು ಹಾಗೂ ಸಂಬಂಧಿಸಿದ ಸಿಬ್ಬಂದಿ ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲಿಸಬಹುದಾಗಿದೆ. ಜಮೀನುಗಳ ವೀಕ್ಷಣೆ ಹಾಗೂ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು ಆದ್ದರಿಂದ ಅಂಗನವಾಡಿ ಶಿಕ್ಷಣ ಮಕ್ಕಳಿಗೆ ಅಗತ್ಯ ಹಾಗೂ ಅಡಿಪಾಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ಪೋಷಣಾ ಅಭಿಯಾನದಲ್ಲಿ ಪಾಲ್ಗೊಂಡು ಪೋಷಣಾ ಮಾಸಾಚರಣೆ ಮಹತ್ವವನ್ನು ಉದ್ದೇಶಿಸಿ ಮಾತನಾಡಿದರು.ಮಕ್ಕಳಲ್ಲಿ ತಾರತಮ್ಯ ತೋರದೆ ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣಕ್ಕೆ ಒತ್ತು ನೀಡಲು ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಕಾಳಜಿ ವಹಿಸಲು ಅವರು ಕರೆ ನೀಡಿದರು.ಸಿಂದಗಿ ತಾಲ್ಲೂಕು ಸಿಡಿಪಿಓ ಎಸ್.ಎನ್.ಹಿರೇಮಠ ಮಾತನಾಡಿ, ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಿರಲು ಸಲಹೆ ನೀಡಿದರು.ಪೋಷಣಾ ಮಾಹ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕೈಗೊಂಡು ಸಸಿ ವಿತರಿಸಿ ಮಕ್ಕಳಂತೆ ಪೋಷಿಸಲು ಹೇಳಲಾಯಿತು. ಮಕ್ಕಳಿಗೆ ಅನ್ನಪ್ರಾಶನ, ಹೆಣ್ಣುಮಕ್ಕಳ ಜನ್ಮದಿನಾಚರಣೆ, ಹಾಗೂ ಹಳ್ಳಿಜೀವನ ಸೊಗಡನ್ನು ಪ್ರದರ್ಶಿಸಲಾಯಿತು.ಪೋಷಣಾ ಅಭಿಯಾನ ತಾಲ್ಲೂಕು ಸಂಯೋಜಕ ಪ್ರಮೋದ ಬೆಳಗಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೈನಾಬಿ ಬ್ಯಾಕೋಡ, ಸದಸ್ಯರಾದ ರಾಜಶೇಖರ ಛಾಯಾಗೋಳ, ಮಲ್ಲಪ್ಪ ಪಟ್ಟಣ,…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಯುನಿಸೆಫ್ ಸಂಸ್ಥೆಯ ಮತ್ತು ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಜೀವಜಲ ಸಂರಕ್ಷಿಸುವುದು ಹೇಗೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ ಎಸ್.ಬಿ.ರಾಠೋಡ ಮಾತನಾಡಿ, ಭೂಮಿ ಮೇಲಿನ ಅಮೂಲ್ಯ ಸಂಪತ್ತಾದ ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ವಿಜಯಪುರ ಜಿಲ್ಲೆಯ ನೀರು ಉಳಿಸಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಹಣಮಂತ ಪಿ ಮಾತನಾಡಿ, ಈ ಕಾರ್ಯಕ್ರದಡಿಯಲ್ಲಿ ಸೇವ್ ವಾಟರ್ (save water) ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಈ ನಿಟ್ಟಿನಲ್ಲಿ ಯುವ ಜನತೆಯಲ್ಲಿ ನೀರಿನ ಮಿತ ಬಳಕೆ ಮತ್ತು ಉಳಿತಾಯ ಮಾಡುವ ಮನೋಭಾವನೆಯನ್ನು ಮೂಡಿಸುವ ಪ್ರಯತ್ನದಲ್ಲಿ ನೀರು ಉಳಿಸುವ ಯುವಕರನ್ನು ಸ್ವಯಂ ಸೇವಕರು ಎಂದು ಕರೆಯಲಾಗುವುದು. ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದು ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದೆ ಎಂದರು.ಐ.ಕ್ಯೂ.ಎ.ಸಿ. ಸಂಯೋಜಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಸ್ಕೃತದಲ್ಲಿ ಶ್ಲೋಕದ ರೂಪದಲ್ಲಿರುವ ಆಯುರ್ವೇದ ಔಷಧಿಗಳ ಮಾಹಿತಿಯನ್ನು ಯುವವೈದ್ಯರು ಮತ್ತು ಸಂಶೋಧಕರಿಗೆ ಸರಳವಾಗಿ ಅಧ್ಯಯನ ಮಾಡಲು ‘ಅಗದ ಸಮುಚ್ಚಯ’ ಪುಸ್ತಕ ವರದಾನವಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ ಹೇಳಿದ್ದಾರೆ.ಗುರುವಾರ ವಿವಿ ಕಚೇರಿಯಲ್ಲಿ ಎ. ವಿ. ಎಸ್ ಆಯುರ್ವೇದ ಕಾಲೇಜಿನ ಅಗದ ತಂತ್ರವಿಭಾಗದ ಮುಖ್ಯಸ್ಥೆ ಡಾ.ಮಲ್ಲಮ್ಮ ಬಿರಾದಾರ ಅವರು ರಚಿಸಿದ ‘ಅಗದ ಸಮುಚ್ಚಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಡಾ.ಮಲ್ಲಮ್ಮ ಬಿರಾದಾರ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಯುರ್ವೇದ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಪುಸ್ತಕದಲ್ಲಿ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಬಹಳಷ್ಟು ವನಸ್ಪತಿ ಮತ್ತು ಗಿಡಮೂಲಿಕೆಗಳ ಮಾಹಿತಿ ಇದೆ. ಒಂದೇ ಹೆಸರನ್ನು ಹಲವಾರು ಗಿಡಮೂಲಿಕೆಗಳಿಗೆ ಬಳಸಿರುವುದರಿಂದ ನಿಜವಾದ ವಿಷನಾಶಕ ದ್ರವ್ಯ ಯಾವುದು? ಯಾವ ಭಾಗದಲ್ಲಿ ಉತ್ಕೃಷ್ಟ ಗುಣಗಳಿವೆ? ಎಂಬುದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ. ವಿಷಜಂತುಗಳಿಂದ ಅಪಾಯ ಎದುರಾದ ಸಂದರ್ಭದಲ್ಲಿ ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳು, ಔಷಧಿ ಬಳಕೆ ವಿಧಾನದ ಕುರಿತು ಮಾಹಿತಿ ನೀಡಲಾಗಿದೆ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಗೆ ಅಂತಿಮ ಮುದ್ರೆ ಒತ್ತಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆ ಸ್ವಾಗತಾರ್ಹ ಎಂದು ಹಿರಿಯ ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ ಹರ್ಷ ವ್ಯಕ್ತಪಡಿಸಿದರು.ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ದಶಕಗಳ ಬೇಡಿಕೆ ಈಡೇರಿಕೆಗೆ ಸಂತಸ ವ್ಯಕ್ತಪಡಿಸುತ್ತಾ, ಈ ಆದೇಶದಿಂದ ರಾಜ್ಯದ ಅರ್ಹ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದವರು, ಪ್ರಣಾಳಿಕೆಯಲ್ಲಿ ತಿಳಿಸಿದಂತೆ ನುಡಿದಂತೆ ನಡೆದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದ ಅರ್ಪಿಸಿದ ಅವರು ಯೋಜನೆ ಜಾರಿಗೊಳಿಸಲು ಕಾರಣೀಭೂತರಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾದ್ಯಮ ಸಲಹೆಗಾರ ಕೆ ವಿ ಪ್ರಭಾಕರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ಅಭಿನಂದನೆ ಸಲ್ಲಿಸಿದರು.
ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ ರೈತ ಮುಖಂಡರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿ ರಾಜ್ಯದಲ್ಲಿ ೫೦ ಕ್ಕೂ ಹೆಚ್ಚು ತಲಾಟಿಗಳು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಸಾರ್ವಜನಿಕರಿಗೆ, ರೈತರಿಗೆ ವಿವಿಧ ಸೇವೆಗಳನ್ನು ಒದಗಿಸಬೇಕಾಗಿರುವ ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳು ಹಾಗೂ ಸಹಾಯಕ ಸಲಹೆಗಾರರಿಗೆ ಕೆಲಸ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಳ್ಳುವುದು ಮಾತ್ರವಲ್ಲದೇ ಕೆಲಸದ ಒತ್ತಡದಿಂದ ಸಾರ್ವಜನಿಕರಿಗೆ ಸಿಗದೇ ಜನಸಾಮಾನ್ಯರಿಂದ ಹಿಡಿ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಸರಕಾರ ವಿವಿಧ ಇಲಾಖೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೊಟಿ ವಿನಾಃ ಹರಣ ಮಾಡಿ, ಯಾವುದೇ ಕೆಲಸಕ್ಕೆ ಬರದ ಕಟ್ಟಡ ಸೇರಿದಂತೆ ಬೇಕಾಬಿಟ್ಟಿ ಯೋಜನೆಗಳಿಗೆ ಹಣ ವ್ಯಯ ಮಾಡುತ್ತಿದೆ. ಆದರೆ ಇಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ವಂತ ಸೂರು ಇಲ್ಲದೇ ಹಳ್ಳಿ ಹಳ್ಳಿ ತಿರುಗಾಡಿ ಕೊನೆಗೆ ತಾಲೂಕಾ ಕಛೇರಿಗೆ ಅಲೆದಾಡಿ…
ಮುಡಾ ಹಗರಣ | ಮೈಸೂರು ಲೋಕಾಯುಕ್ತದಲ್ಲಿ ದಾಖಲು | ಸಿಎಂ ಸಿದ್ದರಾಮಯ್ಯ A1, ಅವರ ಪತ್ನಿ ಪಾರ್ವತಿ A2 ಆರೋಪಿ ಉದಯರಶ್ಮಿ ದಿನಪತ್ರಿಕೆ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ.ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.ಸಿಆರ್‌ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿತ್ತು. ಹಲವು ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯ ಸೂಚಿಸಿರುವ ಐಪಿಸಿ…
ವಿಜಯಪುರದ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಆಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಗುರುವಾರ ಯು ಕೆ ಜಿ ಮುದ್ದು ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಹಣ್ಣು ಹಮತ್ತು ವಿವಿಧ ರೀತಿಯ ತರಕಾರಿ ಚಟುವಟಿಕೆ ಏರ್ಪಡಿಸಲಾಗಿತ್ತುಈ ಸಂದರ್ಭದಲ್ಲಿ ಕಿಂಡರ್‌ಗಾರ್ಟನ್ ಮಕ್ಕಳು ವಿವಿಧ ಹಣ್ಣು ಮತ್ತು ತರಕಾರಿಗಳ ತೊಡಗು ಉಡಿದು ಶಾಲೆಯಲ್ಲಿ ಗಮನ ಸೆಳೆದರು.ಚಟುವಟಿಕೆಗೆ ಕೊಡುಗೆ ನೀಡಿದ ಮಕ್ಕಳು ಟೊಮ್ಯಾಟೊ, ಬೆಳ್ಳುಳ್ಳಿ, ಪೈನಾಪಲ್, ಕಿವಿ ಸೇರಿದಂತೆ ವಿವಿಧ ಹಣ್ಣುಗಳ ಆಕೃತಿಯಲ್ಲಿ ಸಿದ್ಧಗೊಂಡು ಮುದ್ರಣದಂತ ಸೊಬಗಿನೊಂದಿಗೆ ಪ್ರದರ್ಶನ ನೀಡಿದರು. ಮಕ್ಕಳ ಉತ್ಸಾಹದಿಂದ ಈ ಕಾರ್ಯಕ್ರಮ ಮತ್ತಷ್ಟು ಚೈತನ್ಯವನ್ನು ಪಡೆದುಕೊಂಡಿತು.ಯು ಕೆ ಜಿ ವಿದ್ಯಾರ್ಥಿಗಳು ಹಣ್ಣುಗಳು ಮತ್ತು ತರಕಾರಿಗಳಲ್ಲಿ ತಜ್ಞರಂತೆ ಪ್ರದರ್ಶನವನ್ನು ಆಯೋಜಿಸುತ್ತಿದ್ದಾರೆ. ಈ ಉತ್ಸವವು ಮಕ್ಕಳಿಗೆ ಆರೋಗ್ಯಕರ ಆಹಾರ ಮತ್ತು ಪೋಷಣೆಯ ಮಹತ್ವವನ್ನು ಅರಿಯಲು ಸಹಾಯ ಮಾಡುತ್ತದೆ. ಪ್ರದರ್ಶನದಲ್ಲಿ ಸೃಜನಾತ್ಮಕ ಶ್ರೇಣೀಬದ್ಧತೆ, ಕ್ರಿಯಾತ್ಮಕ ಚಟುವಟಿಕೆಗಳು ಪಾಲಕರ ಪ್ರಶಂಸೆಗೆ ಪಾತ್ರವಾದವು.ಈ ಪ್ರದರ್ಶನವನ್ನು ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಹಾದಿಮನಿ ಆಸ್ಪತ್ರೆ ಮತ್ತು ಆಲಮೇಲ ಸಮಾನ ಮನಸ್ಕರ ಬಳಗ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಸೆ.29ರಂದು ಪಟ್ಟಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಈ ಶಿಬಿರದಲ್ಲಿ ಶ್ರೀ ರಾಮಸುಧಾ ಆಸ್ಪತ್ರೆಯ ನೇತ್ರ ತಜ್ಣ ಡಾ.ಗುರುರಾಜ ಕುಲಕರ್ಣಿ, ಮೂತ್ರಪಿಂಡ ತಜ್ಞ ಡಾ.ಸಂದೀಪ ಪಾಟೀಲ್, ಎಲುಬು-ಕೀಲು ತಜ್ಞ ಡಾ.ಪ್ರೀತಿಶ್ ಯಂಡಿಗೇರೆ, ಡಾ.ರವಿ ಬಿರಾದಾರ ಚಿಕಿತ್ಸೆ ನೀಡುವರು.ತಜ್ಞ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ರಕ್ತ, ಮೂತ್ರ ತಪಾಸಣೆ ಮಾಡಲಾಗುತ್ತಿದ್ದು,ಸಂಧಿವಾತ, ಸ್ನಾಯು ಸೆಳೆತ, ಮೂಳೆಮುರಿತ ಮುಂತಾದ ಎಲುಬು-ಕೀಲುಗಳ ಸಮಸ್ಯೆ, ಅಂಧತ್ವ, ಕಣ್ಣಿನ ಪೊರೆ, ಬಿಪಿ, ಮಧುಮೇಹ (ಶುಗರ್), ಕಿಡ್ನಿ ಸ್ಟೋನ್ಸ್( ಹರಳುಗಳು), ಮೂತ್ರಕೋಶದ ಸೋಂಕು, ಕಿಡ್ನಿ ವೈಫಲ್ಯ, ಉರಿ ಮೂತ್ರ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಸಮೀರ ಹಾದಿಮನಿ, ಡಾ.ಜುನೇರಾ ಹಾದಿಮನಿ ತಿಳಿಸಿದ್ದಾರೆ
