ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಹಾದಿಮನಿ ಆಸ್ಪತ್ರೆ ಮತ್ತು ಆಲಮೇಲ ಸಮಾನ ಮನಸ್ಕರ ಬಳಗ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಸೆ.29ರಂದು ಪಟ್ಟಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಶ್ರೀ ರಾಮಸುಧಾ ಆಸ್ಪತ್ರೆಯ ನೇತ್ರ ತಜ್ಣ ಡಾ.ಗುರುರಾಜ ಕುಲಕರ್ಣಿ, ಮೂತ್ರಪಿಂಡ ತಜ್ಞ ಡಾ.ಸಂದೀಪ ಪಾಟೀಲ್, ಎಲುಬು-ಕೀಲು ತಜ್ಞ ಡಾ.ಪ್ರೀತಿಶ್ ಯಂಡಿಗೇರೆ, ಡಾ.ರವಿ ಬಿರಾದಾರ ಚಿಕಿತ್ಸೆ ನೀಡುವರು.
ತಜ್ಞ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ರಕ್ತ, ಮೂತ್ರ ತಪಾಸಣೆ ಮಾಡಲಾಗುತ್ತಿದ್ದು,
ಸಂಧಿವಾತ, ಸ್ನಾಯು ಸೆಳೆತ, ಮೂಳೆಮುರಿತ ಮುಂತಾದ ಎಲುಬು-ಕೀಲುಗಳ ಸಮಸ್ಯೆ, ಅಂಧತ್ವ, ಕಣ್ಣಿನ ಪೊರೆ, ಬಿಪಿ, ಮಧುಮೇಹ (ಶುಗರ್), ಕಿಡ್ನಿ ಸ್ಟೋನ್ಸ್( ಹರಳುಗಳು), ಮೂತ್ರಕೋಶದ ಸೋಂಕು, ಕಿಡ್ನಿ ವೈಫಲ್ಯ, ಉರಿ ಮೂತ್ರ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಸಮೀರ ಹಾದಿಮನಿ, ಡಾ.ಜುನೇರಾ ಹಾದಿಮನಿ ತಿಳಿಸಿದ್ದಾರೆ

