Author: editor.udayarashmi@gmail.com

ಕೆಂಭಾವಿ: ಪಟ್ಟಣದ ಶತಮಾನ ಕಂಡ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಕ್ರೃಂ ಪಿಎಸ್‌ಐ ಹಣಮಂತರಾಯ ಸಿದ್ದಾಪುರ ಅವರಿಗೆ ಕೆಂಭಾವಿ ಪಟ್ಟಣದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿಮಡಿವಾಳಪ್ಪಗೌಡ ಪೋ ಪಾಟೀಲ, ಮುರಗೇಶ ಸಾಹು ಹುಣಸಗಿ, ಬಾಪುಗೌಡ ಪೋ ಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ, ರಹೀಮಾನ ಪಟೀಲ್ ಯಲಗೋಡ, ಪ್ರಧಾನೆಪ್ಪ ಪೂಜಾರಿ, ರಂಗಪ್ಪ ವಡ್ಡರ, ಸುಭಾಷ ಮ್ಯಾಗೇರಿ, ಭೀಮು ಶಹಾಪುರ, ನಿಂಗಣ್ಣ ನಡಕೂರ, ಪ್ರವೀಣ ಕವಲ್ದಾರ, ಪ್ರಭು ಕವಲ್ದಾರ, ಬಸವರಾಜ ಮ್ಯಾಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

ಕೆಂಭಾವಿ: ಸುಮಾರು ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಲಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ, ಮಡಿವಾಳಪ್ಪಗೌಡ ಪಾಟೀಲ್ ಹೆಗ್ಗಣದೊಡ್ಡಿ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ಸ್ಪಂದನ ಶಾಲೆಯಲ್ಲಿ ಶುಕ್ರವಾರ ಸಂಜೆ ಜರುಗಿದ ವಲಯ ಕಸಾಪ ಸರ್ವ ಸದಸ್ಯರ ಸಭೆಯಲ್ಲಿ ಪತ್ರಕರ್ತ ಡಿ ಸಿ ಪಾಟೀಲ್ ಮಾತನಾಡಿ ಮಡಿವಾಳಪ್ಪಗೌಡ ಹೆಗ್ಗನದೊಡ್ಡಿ ಹೆಸರು ಸೂಚಿಸಿದರು. ಸಭೆಯಲ್ಲಿದ್ದ ಸಾಹಿತಿ ನಿಂಗನಗೌಡ ದೇಸಾಯಿ, ಶಿಕ್ಷಕ ಶಿವನಗೌಡ ಪಾಟೀಲ ಬೆಂಬಲಿಸಿದರು. ಶಿಕ್ಷಕ ಬಂದೇನವಾಜ್ ನಾಲತವಾಡ, ಪತ್ರಕರ್ತ ಗುರು ಕುಲಕರ್ಣಿ ಅನುಮೋದಿಸಿದರು. ಸುರಪುರ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಮಡಿವಾಳಪ್ಪಗೌಡರ ಹೆಸರನ್ನು ಸಭೆಯಲ್ಲಿ ಘೋಷಿಸುತ್ತಿದ್ದಂತೆ ಹಾಜರಿದ್ದ ಸರ್ವ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಿದರು,‌ ತದನಂತರ ಸುರಪುರ ಹಾಗೂ ಶಹಾಪುರ ತಾಲೂಕು ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು.ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಮಾತನಾಡಿ, 2022ರ ಫೆಬ್ರುವರಿಯಲ್ಲಿ ನಡೆದ ಸುರಪುರ ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಕೆಲವು ಕಹಿ…

Read More

ಚಡಚಣ: ನಾಗರಪಂಚಮಿ ನಾಡಿಗೆ ದೊಡ್ಡದು ಎಂಬತೆ ಶ್ರಾವಣ ಮಾಸದ ಪ್ರಾರಂಭದಲ್ಲಿ ಬರುವ ಹಬ್ಬ ನಾಗರಪಂಚಮಿ. ಗ್ರಾಮೀಣ ಭಾಗದಲ್ಲಿ ಇದು ಇನ್ನೂ ಮಹತ್ವ ಪಡೆದುಕೊಂಡಿದೆ. ಆಧುನಿಕತೆ ಬೆಳೆದಂತೆ ಹಬ್ಬವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಸಾಗಿದೆ. ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ. ಹೆಣ್ಣು ಮಕ್ಕಳು ನಾಗರಪಂಚಮಿಯನ್ನು ತವರಿನಲ್ಲಿಯೇ ಆಚರಿಸಬೇಕೆಂಬುದು ಅವರ ಕನಸು.ದಿ.೯ ರಂದು ಶುಕ್ರವಾರ ಪಟ್ಟಣದ ಅಗಸಿಯ ಮುಂದಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಬೃಹದಾಕಾರವಾದ ಸುಂದರವಾದ ಮಣ್ಣಿನ ನಾಗೇಶನನ್ನು ನಿರ್ಮಿಸಿದ್ದಾರೆ. ಪಟ್ಟಣದ ಎಲ್ಲ ಸುಮಂಗಲೆಯರು ಮಣ್ಣಿನ ನಾಗೇಶನಿಗೆ ಹಾಲೆರೆದು ಧನ್ಯರಾದರು.ಅದರಂತೆ ಪಟ್ಟಣದ ಪ್ರತಿಷ್ಠಿತ ಬಾಬುಗೌಡ ಪಾಟೀಲರ ಕುಟುಂಬದವರು ಮೊದಲು ನಾಗೇಶನಿಗೆ ಪೂಜೆ ಮಾಡುವ ವಾಡಿಕೆ. ಅವರ ಕುಟುಂಬದವರು ಮಣ್ಣಿನ ನಾಗೇಶನಿಗೆ ನೂಲು ಸುತ್ತಿ ಅರಿಷಿಣ ಕುಂಕುಮದೊಂದಿಗೆ ಪೂಜೆ ಮಾಡಿ, ಎಲ್ಲರೂ ಹಾಲೆರೆದು ನೈವೇದ್ಯ ಸಮರ್ಪಿಸಿದರು. ಇವರೊಂದಿಗೆ ಎಲ್ಲ ಮಹಿಳೆಯರು ಭಾಗಿಯಾಗಿದ್ದರು.ವಿಜಯಲಕ್ಷಿ, ಸುನಂದ, ಸುರೇಖ, ಸುವರ್ಣ, ಸ್ವಾತಿ, ಸನ್ನೀಧಿ, ಅಕ್ಷತಾ, ಲಕ್ಷ್ಮಿ, ಕೀರ್ತಿ, ಸೋನಾಲಿ, ಇವರು ಭಾಗಿಯಾಗಿದ್ದರು.ಗೌರಿ ಪೂಜೆ: ದಿ.೧೦ ರಂದು ಶನಿವಾರ ಸಿರಿಯಾಳಶೆಟ್ಟಿ ದಿನದಂದು…

Read More

ವಿಜಯಪುರ: ಬೃಹತ್ ಮತ್ತು ಮದ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಅವರು ಆಗಷ್ಟ11 ರಿಂದ ಆಗಷ್ಟ 15ರ ವರೆಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ನಾನಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಆಗಷ್ಟ 11 ರವಿವಾರ ಮತ್ತು ಆಗಷ್ಟ 12 ಸೋಮವಾರದಂದು ವಿಜಯಪುರ ಗೃಹ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಬೆಳಿಗ್ಗೆ 11 ಗಂಟೆ ವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕುಂದುಕೊರತೆ ಆಲಿಸಲಿದ್ದಾರೆ.ಆಗಷ್ಟ 13 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬಬಲೇಶ್ವರ ಹೆಸ್ಕಾಂ ಪರೀಕ್ಷಾ ಕೇಂದ್ರದ ಆವರಣದಲ್ಲಿ ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಹಾಗೂ ಪರೀಕ್ಷಣಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮದ್ಯಾಹ್ನ 12 ಗಂಟೆಗೆ ವಿಜಯಪುರ ನಗರದ ಹೆಸ್ಕಾಂ ಉಪವಿಭಾಗ-01ರ ಕಚೇರಿ ಆವರಣದಲ್ಲಿ ರೂ. 234 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡ, ರೂ.124 ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಿವಗಿರಿ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಛೇರಿ ಕಟ್ಟಡ…

Read More

ಆಲಮೇಲ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಡಾಹಗರಣದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕುತಂತ್ರ ಹಾಗೂ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಡೆಯನ್ನು ಪಟ್ಟಣದ ಕಾಂಗ್ರೆಸ್ ಮುಖಂಡ ನಬಿ ಆರ್ ಜಮಾದಾರ ಖಂಡಿಸಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಅದು ಫಲಿಸುವುದಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡುವ ಮೂಲಕ ಬಡವ, ದೀನದಲಿತರ, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಭಾಗ್ಯಗಳನ್ನು ಕೊಟ್ಟಂತಹ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ನಾಡಿನ ಎಲ್ಲ ಸಮುದಾಯದಗಳ ಜನಮನ ಗೆದ್ದಿದ್ದಾರೆ. 2013 ರಿಂದ 2018 ರವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡಿದ್ದಾರೆ ಎಂದು ಹೊಟ್ಟೆಕಿಚ್ಚಿನಿಂದ ಸಿದ್ದರಾಮಯ್ಯನವರನ್ನು ಇನ್ನು ಮುಂದೆ 5 ವರ್ಷ ಪೂರೈಸಬಾರದು, ಮತ್ತೆ ಈ ಅವಧಿಯಲ್ಲಿ ವರ್ಷ ಪೂರೈಸಿದರೆ ರಾಜ್ಯದಲ್ಲಿ ನಮಗೆ ಉಳಿಗಾಲವಿಲ್ಲವೆಂದು…

Read More

ಮೈಸೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು ಬೆಂಗಳೂರು: ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ. ಜೆಡಿಎಸ್‌ನ ದೇವೇಗೌಡರು ಮತ್ತು ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಂಡವರಲ್ಲ. ಧರಂಸಿಂಗ್ ಜೊತೆ ಸರ್ಕಾರ ರಚಿಸಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು ಎಂದು ದೇವೇಗೌಡರು ಹೇಳಿದ್ದರು. ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ” ಎಂದು ಹರಿಹಾಯ್ದರು.ನಾನು ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ, ಹಣ ಮಾಡುವ ಆಸೆ ಬಂದಿಲ್ಲ. ನನ್ನ…

Read More

ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆ.೧೯ ರಂದು ಶ್ರೀ ನುಲಿಯ ಚಂದಯ್ಯ ಜಯಂತಿ, ಆ.೨೦ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮತ್ತು ಆ.೨೬ ರಂದು ಶ್ರೀ ಕೃಷ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಕೈಗೊಳ್ಳಲಾಯಿತು.ಆಗಸ್ಟ್ ೧೯ ರಂದು ನುಲಿಯ ಚಂದಯ್ಯ ಜಯಂತಿ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಶ್ರೀ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ಹಾಗೂ ೧೦-೩೦ಕ್ಕೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಆ.೨೦ರಂದು ಸಂಜೆ ೪ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರ ಮೆರವಣಿಗೆ ಹಾಗೂ ಸಂಜೆ ೫ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು…

Read More

ಮಡಿಕೇಶ್ವರಕ್ಕೆ ಭೇಟಿ ನೀಡಿದ ಲೋಕಾ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ ಮುದ್ದೇಬಿಹಾಳ: ಸರ್ಕಾರಿ ನೌಕರರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ವೇತನ ಪಾವತಿಯಾಗುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಾರ್ವಜನಿಕರಿಗೆ ಸರಿಯಾದ ಸೇವೆ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರು ಹೇಳಿದರು.ತಾಲೂಕಿನ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಸರ್ಕಾರಿ ನೌಕರನ ವರ್ತನೆ ಸರಿಯಾರಬೇಕು. ತಮ್ಮ ಕರ್ತವ್ಯವನ್ನು ನಿಗಧಿತ ಅವಧಿಯಲ್ಲಿ ಮಾಡಬೇಕು. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಬಾರದು. ಸೇವೆ ನೀಡಲು ಯಾರೊಬ್ಬರ ಬಳಿಯೂ ಹಣ ನೀಡುವಂತೆ ಒತ್ತಾಯಿಸಬಾರದು. ಸರ್ಕಾರಿ ನೌಕರರು ತಮ್ಮ ಸೇವೆಗಾಗಿ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವಂತೆ ತಿಳಿಸಿದರು.ಆರೋಗ್ಯ ಕೇಂದ್ರದ ಸಂಗ್ರಹಣಾ ಕೊಠಡಿ, ಪ್ರಯೋಗಾಲಯ, ವಾರ್ಡ, ಸಿಬ್ಬಂದಿಗಳ ದಿನಚರಿ ಪುಸ್ತಕ, ಔಷಧಿಗಳನ್ನು ಖುದ್ದು ತಾವೇ ಪರಿಶೀಲಿಸಿದ ಲೋಕಾಯುಕ್ತರು ಸಾರ್ವಜನಿಕರಿಗೆ ಸೇವೆ ನೀಡುವ ಅವರ ಜವಾಬ್ದಾರಿಯ ಬಗ್ಗೆ ತಿಳಿಸಿದರು.ಈ ವೇಳೆ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ, ಉಪಾಧೀಕ್ಷಕ ಸುರೇಶ ರೆಡ್ಡಿ, ಇನ್ಸಪೆಕ್ಟರ್‌ಗಳಾದ ಆನಂದ ಡೋಣಿ ಮತ್ತು ಆನಂದ…

Read More

ಹೊನವಾಡ: ದೇಶದಲ್ಲಿ ಅನೇಕ ಶರಣರು, ಸಂತರು ಬಂದು ಹೋಗಿದ್ದಾರೆ ಅಂಥವರಲ್ಲಿ ಸಿದ್ಧಾರೂಢರು ಒಬ್ಬರಾಗಿದ್ದು, ಆಧ್ಯಾತ್ಮಿಕ ಭದ್ರ ಬುನಾದಿ ಹಾಕಿದ್ದಾರೆ. ಸಿದ್ಧಾರೂಢರು ಎಲ್ಲ ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡಿದರು ಎಂದು ಅಧ್ಯಕ್ಷತೆ ವಹಿಸಿ ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಬನಶಂಕರಿದೇವಿ ಸೇವಾ ಕಮಿಟಿ ವತಿಯಿಂದ ಶ್ರೀ ಸಿದ್ದಾರೂಢರ ಕಥಾಮೃತ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಂಕರ ತಿಪ್ಪಾರ ಶಾಸ್ತಿಗಳು ಮಾತನಾಡಿ, ಮನುಷ್ಯ ಸಂತರ ದರ್ಶನ ಪಡೆದು ಜೀವನ ಪಾವನ ಪಡೆಯಬೇಕು ಎಂದರು. ಐದು ವರ್ಷ ಇದ್ದಾಗಲೇ ಓಂಕಾರ ಪದವನ್ನು ಅರ್ಥವನ್ನು ಹೇಳುವ ಮೂಲಕ ಅವರು ಭಗವಂತನ ಸ್ವರೂಪ ಎಂಬುದನ್ನು ಸಾರಿದರು.ಈ ಕಾರ್ಯಕ್ರಮದಲ್ಲಿ ಕೃಷ್ಣಾಜಿ ಭೂಯಿನ ಗುಬ್ಬು ಹತ್ತಿಕಾಳ ನೀಲಯ್ಯ ಗೂಗವಾಡ ಶರಣು ಕುಂಬಾರ ಮತ್ತಿತರರು ಇದ್ದರು.ಶ್ರೀಕಾಂತ ಹಡಪದ ನಿರೂಪಿಸಿದರು, ಶ್ರಿಕಾಂತ ಕುಂಬಾರ ಸ್ವಾಗತಿಸಿದರು, ಚಂದ್ರಶೇಖರ ಕೊಣ್ಣೂರ ವಂದಿಸಿದರು.

Read More

ಕೊಲ್ಹಾರ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕ ಘಟಕ ಕೊಲ್ಹಾರ ವತಿಯಿಂದ ಕೊಲ್ಹಾರ ಪಟ್ಟಣದ ಸಂಗಮೇಶ್ವರ ಪ ಪೂ ಮಹಾವಿದ್ಯಾಲಯದಲ್ಲಿ ಆ.೧೦ರಂದು “ವಿಶ್ಟ ಬುಡಕಟ್ಟು” ದಿನಾಚರಣೆ ಆಚರಿಸಲಾಗುವುದು.ಕ ಜಾ ಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪ್ರಾಚಾರ್ಯ ಡಾ ಎ ಡಿ ಚವ್ಹಾಣ ಉದ್ಘಾಟಿಸುವರು, ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ಚು ಸಾ ಪ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ, ಪ್ರಾ ಶಾ ಶಿ ಸಂಘದ ತಾಲೂಕಾಧ್ಯಕ್ಷ ಸುರೇಶ ಬಿರಾದಾರ, ಕಾರ್ಯದರ್ಶಿ ಕೆ ಎಸ್ ಬಾಲಗೊಂಡ, ಹೇಮ ವೇಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ರುದ್ರಗಣಿ, ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಕಾರ್ಯದರ್ಶಿ ಭೀಮಶಿ ಬೀಳಗಿ ಮತ್ತು ಮೌಲಾಸಾಹೇಬ ಜಹಾಗೀರದಾರ ಇರುವರು.ಬುಡಕಟ್ಟು ಜಾನಪದ ಕಲಾಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Read More