ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕು ೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ ೨೧ ರಂದು ಪಟ್ಟಣದ ಶ್ರೀ ಗುರು ಮಳೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದರು. ಸಮ್ಮೇಳನದ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತಿದೆ. ಕಸಾಪ ಗೌರವ ಕಾರ್ಯದರ್ಶಿ ಡಾ.ಸಂಗಣ್ಣ ಎಂ.ಸಿಂಗೆ ಅವರು ಸ್ಮರಣ ಸಂಚಿಕೆಯ ಸಂಪಾದಕರಾಗಿರಲಿದ್ದಾರೆ ಪ್ರಯುಕ್ತ ಸ್ವರಚಿತ ಕವನ ಹಾಗೂ ಲೇಖನಗಳನ್ನು ಕಳುಹಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಮಾತನಾಡಿದ ಅವರು ೭ ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಹೀಗಾಗಿ ಸ್ಮರಣ ಸಂಚಿಕೆಗೆ ಲೇಖನಗಳು ವಿಶೇಷವಾಗಿ ಅಫಜಲಪುರ ತಾಲೂಕಿನ ಐತಿಹಾಸಿಕ ಹಿನ್ನೆಲೆ, ಸಾಹಿತ್ಯ, ಕೃಷಿ, ನೆಲ-ಜಲ ಸೇರಿ ವಿವಿಧ ಕ್ಷೇತ್ರಗಳ ಕುರಿತಾಗಿರಬೇಕು ಮತ್ತು ಎಲ್ಲಾ ಲೇಖನಗಳು ಮತ್ತು ಕವನಗಳನ್ನು ಕಡ್ಡಾಯವಾಗಿ ನುಡಿ ತಂತ್ರಾಂಶದಲ್ಲಿ ಸಿಮೀತ ಪದಗಳಲ್ಲಿ ಬರೆದು afzalpurkasapa@gmail.comಈ ಮೇಲ್ ವಿಳಾಸಕ್ಕೆ ನ. ೫ ರ ಒಳಗಾಗಿ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೯೯೦೦೭೯೫೬೪೪, ೭೦೨೨೭೮೩೬೪೩, ೯೯೭೨೬೫೯೦೬೯, ೯೦೩೬೦೬೩೯೯೭, ೮೮೬೧೬೦೦೧೨೬ ಈ ಸಂಖ್ಯೆಗಳಿಗೆ ಸಂಪರ್ಕ ಮಾಡುವಂತೆ ಕೋರಿದ್ದಾರೆ.

