ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ವಿವಿಧ ಸಂಘಟಣೆಗಳು ನಾಡಹಬ್ಬ ದಸರಾ ನಿಮಿತ್ತ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ದಸರಾ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
ದಸರಾ ಹಬ್ಬದ ನಿಮಿತ್ತ ಆದಿಶಕ್ತಿಯ ಮೂರ್ತಿಗಳನ್ನು ಗುರುವಾರ ಮುಂಜಾನೆ ವಿವಿಧ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತಂದು ಗ್ರಾಮದ ಪ್ರಮಖ ಬೀದಿ, ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ರಸ್ತೆ, ಸುಭಾಸಚಂದ್ರ ಬೋಸ್ ವೃತ್ತ ಸೇರಿದಂತೆ ಗ್ರಾಮದ ಹಲವೆಡೆ ಸ್ಥಾಪಿಸಲಾಗಿದ್ದು ಒಂಬತ್ತು ದಿನಗಳಕಾಲ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು ಪ್ರತಿದಿನ ದೇವಿಯ ಉತ್ಸವ ಜರುಗಲಿದೆ ಸ್ಥಳಿಯ ಹಟಗಾರ ಸಮಾಜ ಬಾಂಧವರು ಗ್ರಾಮದ ಅಗಸೀಯ ಹತ್ತಿರ ಪ್ರತಿಷ್ಠಾಪಿಸಲಾದ ತಾಯಿ ಚಾಮುಂಡಿ ಮೂರ್ತಿಗೆ ಪ್ರಥಮದಿನ ನೂರಾರು ಮಹಿಳೆಯರು ಹಳದಿ ವರ್ಣದ ಸೀರೆಉಟ್ಟು ದೇವಿಗೆ ವಿಶೇಷಪೂಜೆ ಆರತಿ ನೆರವೇರಿಸಿದರು.

