ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಇಂಡಿ ರಸ್ತೆಯ ಕೋರಳ್ಳಿ ಚೌಕದಲ್ಲಿ ಗೋಕಾಕ ಚಳುವಳಿ ನೇತಾರ ಕನ್ನಡದ ಕಟ್ಟಾಳು ಗಂಗಾಧರ ಕೋರಳ್ಳಿ ಅವರು ಸಂಸ್ಥಾಪಿದ ಮಹಾಶಕ್ತಿ ಮಂದಿರದಲ್ಲಿ ಮಹಾಶಕ್ತಿ ದಸರಾ ಉತ್ಸವ ಸಮಿತಿಯಿಂದ ನಾಡಹಬ್ಬ ದಸರಾ ಪ್ರಯುಕ್ತ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನಾಡದೇವಿ ಘಟ ಸ್ಥಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾದೇವಿ ಕೋರಳ್ಳಿ ವೀಣಾ ಕೋರಳ್ಳಿ ಗಂಗವ್ವ ಮನಗೂಳಿ ಕವಿತಾ ಪ್ಯಾಟಿ ಮಂಗಲಾ ಹಿರೊಳ್ಳಿ ಶಾಂತಾ ಬಿದರಿ ಮಹಾಂನಂದ ಅನಂತಪುರ ಕಸ್ತೂರಿ ಅನಂತಪುರ ಶಾಂತಾ ಕೋರಿ ಪ್ರತಿಭಾ ಗೊಳಸಾರ ಅನುಷ್ಕಾ ಗೊಳಸಾರ ಮಹಾಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ನೀಲಕಂಠ ಕೋರಳ್ಳಿ, ಲಿಂಗಣ್ಣ ಮನಗೂಳಿ, ರಾಹುಲ ಮೆಳ್ಳಿ ಅಭಿಷೇಕ ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಸಮಿತಿ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

