Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ಅಡಿ ( ನರೇಗಾ ) ೨೦೨೫-೨೦೨೬ನೇ ಸಾಲಿನ ಕ್ರಿಯಾ ಯೋಜನೆ ಅಕ್ಟೋಬರ್ ೨ ರಿಂದ ಒಂದು ತಿಂಗಳುಗಳ ಕಾಲ ಸಿದ್ಧಪಡಿಸಲಾಗುತ್ತಿದ್ದು ಸಿಂದಗಿ ತಾಲೂಕಿನ ರೈತಾಪಿ ವರ್ಗ, ಮತ್ತು ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು. ಈ. ಅಗ್ನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ದಡಿ (Iಇಅ) ಉದ್ಯೋಗ ಖಾತ್ರಿ ನಡೆಗೆ ಸಬಲತೆಯಡಿಗೆ ಅಭಿಯಾನದ ಮೂಲಕ ಮುಂಚಿತವಾಗಿ ಆರ್ಥಿಕ ವರ್ಷದ ಕ್ರಿಯಾಯೋಜನೆಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ವಾರ್ಡ್ ಸಭೆ ನಂತರ ಗ್ರಾಮ ಸಭೆಯಲ್ಲಿ ಅನುಮೋದಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಡಿಸೆಂಬರ್ ೫ರೊಳಗೆ ತಾಲೂಕು ಪಂಚಾಯಿತಿಗೆ ಸಲ್ಲಿಸುವಂತೆ ತಾಲೂಕಿನ ಎಲ್ಲಾ ೧೬ ಗ್ರಾಮ ಪಂಚಾಯತಗಳಿಗೆ ಈ ಮೂಲಕ ತಿಳಿಸಲಾಗುವುದು ಹಾಗೂ ಕ್ರೂಡಿಕೃತ ಕ್ರಿಯಾಯೋಜನೆಯನ್ನು ಜಿಲ್ಲಾ ಪಂಚಾಯತಿಗೆ ಡಿಸೆಂಬರ್ ೨೦ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ(ಅಧಿಕಾರಿಗಳನ್ನು ಹೊರತು ಪಡಿಸಿ) ಜನರಲ್ ಕೆ.ಎಸ್.ತಿಮ್ಮಯ್ಯ ನಗದು ಪ್ರಶಸ್ತಿ ನೀಡಲು ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿಗಳನ್ನು ಉಪ ನಿರ್ದೇಶಕರ ಕಾರ್ಯಲಯ, ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆಯಿಂದ ಪಡೆದುಕೊಂಡು ದಿನಾಂಕ ೩೧-೧೦-೨೦೨೪ರೊಳಗಾಗಿ ತ್ರಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಅರ್ಕಟಶಾಹ ದರ್ಗಾ ಇವರ ಸಹಯೋಗದಲ್ಲಿ ದಿನಾಂಕ ೧೯-೧೦-೨೦೨೪ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಗರದ ಜೆ.ಎಂ.ರಸ್ತೆಯಲ್ಲಿರುವ ಅರ್ಕಟಶಾಹ ದರ್ಗಾದ ಆವರಣದಲ್ಲಿ ಸ್ಥಳೀಯ ಖಾಸಗಿ ಕಂಪನಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ.ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಐ.ಟಿ.ಐ. ಹಾಗೂ ಯಾವುದೇ ಪದವಿ ಪಾಸಾದಂತಹ ೩೫ ವರ್ಷ ವಯಸ್ಸಿನೊಳಗಿನ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಶಾಲಾ ದಾಖಲಾತಿಗಳು, ಆಧಾರ ಕಾರ್ಡ, ಬಯೋಡೆಟಾಗಳ ೪ಸೆಟ್ ಝರಾಕ್ಸನೊಂದಿಗೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: ೯೭೩೯೬೧೯೬೯೪, ೯೯೪೫೦೦೦೭೯೩ ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿದ ನಿವೇಶನಗಳನ್ನು ಸ್ವಂತ ಕಟ್ಟಡ ಕಟ್ಟಲು ಜಾಗದ ಸಮಸ್ಯೆ ಇರುವ ಸರ್ಕಾರಿ ಶಾಲೆ, ಕಚೇರಿ, ಆಸ್ಪತ್ರೆಗಳನ್ನು ಗುರುತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಲು ಪ್ರಥಮಾದ್ಯತೆ ನೀಡಬೇಕು ಎಂದು ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ,ಪಾಟೀಲ ಅವರು ಸೂಚಿಸಿದರು.ಸೋಮವಾರ ನಗಾರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದಲ್ಲಿ ಹಲವಾರು ಇಲಾಖೆಗಳಿಗೆ ಕಟ್ಟಡ ಕಟ್ಟಲು ಸ್ವಂತ ಜಾಗದ ಕೊರತೆಯಿದ್ದು, ಅವುಗಳನ್ನು ಗುರುತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಮಾಡಲು ಪ್ರಥಮಾಧ್ಯತೆ ನೀಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಸಂಘ-ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು, ನಿವೇಶನವನ್ನು ಬೇರೆ ಕಾರಣಕ್ಕಾಗಿ ಬಳಸಿಕೊಳ್ಳದಂತೆ ನಿಯಮಾನುಸಾರ ಉದ್ದೇಶಕ್ಕಾಗಿ ನಿವೇಶನ ಬಳಸುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.ವಿಜಯಪುರ ನಗರಕ್ಕೆ…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ರಾವುತರಾಯ-ಮಲ್ಲಯ್ಯರ ಜಾತ್ರಾ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಆರಂಭವಾಯಿತು.ಪಟ್ಟಣದ ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ನಸುಕಿನ ಐದು ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ವಿವಿಧ ಬಗೆಯ ಹೂ,ಹಾರಗಳಿಂದ ಪುಷ್ಪಾಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.ನಂತರ ರಾವುತರಾಯನ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ಆನಂತರ ರಾವುತರಾಯ-ಗಂಗಿಮಾಳಮ್ಮರ ಸಾಂಪ್ರದಾಯಿಕ ಮದುವೆಯ ರೂಪಕ ಜರುಗಿತು. ಸತತ ಐದು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಮೊದಲ ದಿನ ಆಗಮಿಸಿದ ಅಸಂಖ್ಯಾತ ಭಕ್ತರಿಗೆ…
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ’ವಚನ ದರ್ಶನ’ ಕೃತಿಯ ಮುಟ್ಟುಗೋಲಿಗೆ ಹಾಗೂ ವಿವಾದಿತ ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ನಿರ್ಮಿಸಿದ ’ಶರಣರ ಶಕ್ತಿ’ ಚಲನಚಿತ್ರ ನಿಷೇಧಕ್ಕೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಿಂದಗಿ-ವಿಜಯಪುರದ ಕಲ್ಬುರ್ಗಿ ಫೌಂಡೇಶನ್ ಆಗ್ರಹಿಸಿವೆ.ಈ ಕುರಿತು ಸೋಮವಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿರುವ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಅವರು, ಅಯೋಧ್ಯಾ ಪ್ರಕಾಶನದವರು ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ’ವಚನ ದರ್ಶನ’ ಎಂಬ ಕೃತಿಯಲ್ಲಿ ಕೆಲ ಸಂಪ್ರದಾಯವಾದಿ ಶಕ್ತಿಗಳು ಇಂದು ವಚನ ಸಾಹಿತ್ಯವನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಖೋಟಾ ವಚನ ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸ್ತ್ರೀ ಮತ್ತು ಪ್ರಸೂತಿ ಚಿಕಿತ್ಸಾ, ಶಸ್ತ್ರಚಿಕಿತ್ಸಾ ಹಾಗೂ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಹುಬ್ಬಳ್ಳಿ ಎಚ್.ಸಿ.ಜಿ ಕ್ಯಾನ್ಸರ್ ಸೆಂಟರ್ ಸಹಯೋಗದಲ್ಲಿ ಅಕ್ಟೋಬರ್ 15 ರಂದು ಮಂಗಳವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ.ಇಂದು ಬೆ.10 ಗಂಟೆಯಿಂದ ಸಂ.4 ಗಂಟೆವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನುರಿತ ತಜ್ಞವೈದ್ಯರಾದ ಡಾ. ವಿಜಯಾ ಪಾಟೀಲ, ಡಾ. ರಾಜಶ್ರೀ ಯಳಿವಾಳ, ಡಾ. ಶ್ರೀಕಾಂತ ರವಿಚಂದ್ರನ, ಡಾ. ಸಂಜೀವ ಎಸ್. ರಾಠೋಡ, ಡಾ. ಶೈಲೇಶ ಕನ್ನೂರ ಮತ್ತು ಡಾ. ಶಿವಶಂಕರ ಆಜೂರ ಉಪಸ್ಥಿತರಿರಲಿದ್ದಾರೆ.ಸ್ತನ ಕ್ಯಾನ್ಸರ್ ತಡೆಗಟ್ಟುವ ಕುರಿತು ಮುನ್ನೆಚ್ಚರಿಕಾ ಕ್ರಮಗಳು, ಅಲ್ಲದೇ, ಗರ್ಭಾಶಯ, ಗರ್ಭಕಂಠ ಹಾಗೂ ಬಾಯಿಯ ಕ್ಯಾನ್ಸರಗಳ ಉಚಿತ ತಪಾಸಣೆ ನಡೆಸಲಿದ್ದಾರೆ. ವೈದ್ಯರ ಶಿಫಾರಸ್ಸಿನಂತೆ ಅಗತ್ಯವಿರುವ ರೋಗಿಗಳಿಗೆ ಮೆಮೋಗ್ರಾಮ, ಪ್ಯಾಪ್ ಸ್ಮೇರ್ ತಪಾಸಣೆಗಳನ್ನು ರಿಯಾಯಿತಿ ದರದಲ್ಲಿ ಮಾಡಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9591682224, 9845649354, 6366786003 ಸಂಪರ್ಕಿಸಬಹುದು ಎಂದು ಡಾ.…
ಐದು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕೋರ್ಸಿಗೆ ಅಗತ್ಯವಾಗಿರುವ ಸಂಪೂರ್ಣ ಆರ್ಥಿಕ ನೆರವು ನೀಡಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗ ಕೋರ್ಸಿಗೆ ಅಗತ್ಯವಾಗಿರುವ ಸಂಪೂರ್ಣ ಆರ್ಥಿಕ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.ಸೋಮವಾರ ವಿಜಯಪುರದಲ್ಲಿರುವ ಗೃಹ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲೂಕಿನ ಕಾರಜೋಳ ತಾಂಡಾದ ಅಜೀತ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಸಚಿವರು ಮೊದಲ ಕಂತಾಗಿ ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ…
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ’ವಚನ ದರ್ಶನ’ ಕೃತಿಯ ಮುಟ್ಟುಗೋಲಿಗೆ ಹಾಗೂ ವಿವಾದಿತ ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ನಿರ್ಮಿಸಿದ ’ಶರಣರ ಶಕ್ತಿ’ ಚಲನಚಿತ್ರ ನಿಷೇಧಕ್ಕೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಿಂದಗಿ-ವಿಜಯಪುರದ ಕಲ್ಬುರ್ಗಿ ಫೌಂಡೇಶನ್ ಆಗ್ರಹಿಸಿವೆ.ಈ ಕುರಿತು ಸೋಮವಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿರುವ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಅವರು, ಅಯೋಧ್ಯಾ ಪ್ರಕಾಶನದವರು ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ’ವಚನ ದರ್ಶನ’ ಎಂಬ ಕೃತಿಯಲ್ಲಿ ಕೆಲ ಸಂಪ್ರದಾಯವಾದಿ ಶಕ್ತಿಗಳು ಇಂದು ವಚನ ಸಾಹಿತ್ಯವನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಖೋಟಾ ವಚನ ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು…
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಇಡೀ ವಿಶ್ವವೇ ಕೊರೋನಾ ಮಹಾಮಾರಿಗೆ ತತ್ತರಿಸಿ ಈಗಷ್ಟೇ ಈ ಜಾಡ್ಯದಿಂದ ನಿಧಾನವಾಗಿ ಹೊರಗೆ ಬರುತ್ತಿದೆ. ಇಂದು ಜನರ ಜೀವನ ಶೈಲಿಯಲ್ಲಿ ಬಹಳಷ್ಟು ಕೊರೋನಾ ಕಾರಣದಿಂದ ಬದಲಾವಣೆಗಳಾಗಿದ್ದು, ಇದುವರೆಗೂ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಾಜಾರೋಷವಾಗಿ ಅಲೆದಾಡುತ್ತಿದ್ದ ಮಂದಿ ಇಂದು ಮನೆಯಿಂದ ಹೊರಗೆ ಕಾಲಿಡುವ ಮೊದಲು ಹಲವು ಬಾರಿ ಯೋಚಿಸುವಂತೆ ಆಗಿದೆ. ಮನೆಯೊಳಗೆ ಕುಳಿತು ಉಂಟಾಗುವ ಏಕತಾನತೆಯನ್ನು ಕಳೆಯಲು ಈ ಎಲ್ಲಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು.ವಿವಿಧ ಜರ್ನಲ್ ಹಾಗೂ ಬ್ಲಾಗ್‌ಗಳನ್ನು ಪ್ರಾರಂಭಿಸಬಹುದು: ನಿಮಗೆ ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ನಿಮ್ಮ ಜೀವನದ ಸವಿನೆನಪುಗಳು, ಅಜ್ಜಿ ಹೇಳಿದ ಹಳೆಯ ಕಥೆಗಳು ಮತ್ತು ವಿಶೇಷ ಸನ್ನಿವೇಶಗಳು, ವಿಶೇಷ ಸಾಧನೆಗಳು, ಬಾಲ್ಯದ ಅನುಭವಗಳು ಮತ್ತು ರೋಚಕ ಸಂದರ್ಭಗಳನ್ನು ಬರೆದು ಅವುಗಳನ್ನು ನಿಮ್ಮದೇ ಆದ ಜರ್ನಲ್ ಯಾ ಬ್ಲಾಗ್‌ಗಳಲ್ಲಿ ಆನ್‌ಲೈನ್ ಮೂಲಕ ಮತ್ತು ಕೂ ಅಪ್ಲಿಕೇಶನ್ ಮೂಲಕ ಸಂಚಿಕೆಗಳಂತೆ…
