ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸ್ತ್ರೀ ಮತ್ತು ಪ್ರಸೂತಿ ಚಿಕಿತ್ಸಾ, ಶಸ್ತ್ರಚಿಕಿತ್ಸಾ ಹಾಗೂ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಹುಬ್ಬಳ್ಳಿ ಎಚ್.ಸಿ.ಜಿ ಕ್ಯಾನ್ಸರ್ ಸೆಂಟರ್ ಸಹಯೋಗದಲ್ಲಿ ಅಕ್ಟೋಬರ್ 15 ರಂದು ಮಂಗಳವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ.
ಇಂದು ಬೆ.10 ಗಂಟೆಯಿಂದ ಸಂ.4 ಗಂಟೆವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನುರಿತ ತಜ್ಞವೈದ್ಯರಾದ ಡಾ. ವಿಜಯಾ ಪಾಟೀಲ, ಡಾ. ರಾಜಶ್ರೀ ಯಳಿವಾಳ, ಡಾ. ಶ್ರೀಕಾಂತ ರವಿಚಂದ್ರನ, ಡಾ. ಸಂಜೀವ ಎಸ್. ರಾಠೋಡ, ಡಾ. ಶೈಲೇಶ ಕನ್ನೂರ ಮತ್ತು ಡಾ. ಶಿವಶಂಕರ ಆಜೂರ ಉಪಸ್ಥಿತರಿರಲಿದ್ದಾರೆ.
ಸ್ತನ ಕ್ಯಾನ್ಸರ್ ತಡೆಗಟ್ಟುವ ಕುರಿತು ಮುನ್ನೆಚ್ಚರಿಕಾ ಕ್ರಮಗಳು, ಅಲ್ಲದೇ, ಗರ್ಭಾಶಯ, ಗರ್ಭಕಂಠ ಹಾಗೂ ಬಾಯಿಯ ಕ್ಯಾನ್ಸರಗಳ ಉಚಿತ ತಪಾಸಣೆ ನಡೆಸಲಿದ್ದಾರೆ. ವೈದ್ಯರ ಶಿಫಾರಸ್ಸಿನಂತೆ ಅಗತ್ಯವಿರುವ ರೋಗಿಗಳಿಗೆ ಮೆಮೋಗ್ರಾಮ, ಪ್ಯಾಪ್ ಸ್ಮೇರ್ ತಪಾಸಣೆಗಳನ್ನು ರಿಯಾಯಿತಿ ದರದಲ್ಲಿ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9591682224, 9845649354, 6366786003 ಸಂಪರ್ಕಿಸಬಹುದು ಎಂದು ಡಾ. ರಾಜೇಶ ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
