Author: editor.udayarashmi@gmail.com

ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ವಾಹನ ಚಾಲಕರಾದ ವಿಜಯಕುಮಾರ್ ತೋರಗಲ್ ಅವರಿಗೆ ಆತ್ಮೀಯ ಬಿಳ್ಕೋಡುಗೆ ಉದಯರಶ್ಮಿ ದಿನಪತ್ರಿಕೆ ನವದೆಹಲಿ: ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದಲ್ಲಿ ಕಳೆದ ೧೨ ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿ, ಬೆಳಗಾವಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರ ಕಛೇರಿಗೆ ವರ್ಗಾವಣೆ ಹೊಂದಿರುವ ವಿಜಯಕುಮಾರ ತೋರಗಲ್ ಅವರನ್ನು ಆತ್ಮೀಯವಾಗಿ ಬಿಳ್ಕೋಡಲಾಯಿತು.ನಂ-೬ ಸರ್ದಾರ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನದಲ್ಲಿನ ಕರ್ನಾಟಕ ವಾರ್ತಾ ಕೇಂದ್ರದ ಕಛೇರಿಯಲ್ಲಿ ಬುಧವಾರ ನಡೆದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಪ್ರಭಾರ ಉಪ ನಿರ್ದೇಶಕಿ ಶ್ರೀಮತಿ ಎಂ ಶಾಲಿನಿ ಅವರು ಮಾತನಾಡಿ, ವಿಜಯ್ ಕುಮಾರ್ ಅವರು ಎಲ್ಲರೊಂದಿಗೆ ಅತ್ಯಂತ ಅತ್ಮೀಯತೆ ಹೊಂದಿದ್ದು, ಸಮಯ ಪರಿಪಾಲನೆಯೊಂದಿಗೆ ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಇತರ ಚಾಲಕರಿಗೆ ಮಾದರಿಯಾಗಿದ್ದು, ಇವರ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅನ್ಯ ಕರ್ತವ್ಯದ ಮೇಲೆ ನವದೆಹಲಿಯಲ್ಲಿದ್ದ ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಅಮರೇಶ್ ದೊಡಮನಿ, ಕರ್ನಾಟಕ ಭವನದ…

Read More

ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯಲ್ಲಿ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಹಾರ ಸರಪಳಿಯಲ್ಲಿ ಮತ್ತು ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಮಹಿಳೆಯರ ಕೊಡುಗೆ ಗಣನೀಯವಾಗಿದೆ. ಕೃಷಿ ಮಹಿಳಾ ಪ್ರಧಾನವಾಗಿದೆ. ಆದರೆ ಕೃಷಿಯ ಮೇಲಿನ ಅಧಿಕಾರ ಮಾತ್ರ ಪುರುಷರ ಪ್ರಾಬಲ್ಯದಲ್ಲಿದೆ. ಇದನ್ನು ಮೀರಿ ಮಹಿಳೆಯರು ಕೃಷಿ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು, ಮಹಿಳೆಯರು ಉದ್ಯಮಶೀಲತೆ ಬೆಳೆಸಿಕೊಳ್ಳಲು ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ವಿಶ್ವವಿದ್ಯಾಲಯಗಳು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿಯಲ್ಲಿ ಹೆಚ್ಚು ತೊಡಗಿದ್ದಾರೆ. ಪ್ರತಿ ಕೃಷಿ ಸಂಬಂಧಿ ಚಟುವಟಿಕೆಯ ಹಿಂದೆ ಮಹಿಳೆಯ ಕೊಡುಗೆ ಇದೆ. ಆದ್ದರಿಂದ ವಿಶ್ವಸಂಸ್ಥೆ ಗ್ರಾಮೀಣ ಮಹಿಳೆಯರ ದಿನಾಚರಣೆಯ ಅಂಗವಾಗಿ ಗ್ರಾಮೀಣ ಮಹಿಳೆಯರು ಎಲ್ಲರಿಗಾಗಿ ಉತ್ತಮ…

Read More

ಜೆಎಸ್‌ಎಸ್ ಹಾಸ್ಪಿಟಲ್ಸ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಜಾಥಾ ಹಾಗೂ ಯೋಗ ಶಿಬಿರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ಲಾಸ್ಟಿಕ್ ಇಂದು ಮಾನವನನ್ನು ಸಾವಿನ ಮನೆ ಬಾಗಿಲಿನಲ್ಲಿ ನಿಲ್ಲಿಸುತ್ತಿದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಟ್ಟದಲ್ಲಿ ಇಂದು ಪ್ಲಾಸ್ಟಿಕ್ ಮಾನವನ ಜೀವನದೊಂದಿಗೆ ಬೆರೆತು ಹೋಗಿದ್ದು ಪ್ಲಾಸ್ಟಿಕ್ ನಮ್ಮನ್ನು ಕೊಲ್ಲುವ ಮೊದಲು ನಾವು ಪ್ಲಾಸ್ಟಿಕ್‌ನ್ನು ನಿರ್ಮೂಲ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥ ಅಂತರಾಷ್ಟ್ರೀಯ ಖ್ಯಾತಿಯ ಯೋಗಿಕ್ ನ್ಯೂರೋ ಸರ್ಜನ್ ಡಾ.ಮಯೂರ್ ಕಾಕು ಹೇಳಿದರು.ವಿಶ್ವ ಬೆನ್ನುಹುರಿ ದಿನದ ಅಂಗವಾಗಿ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಯೋಗಶಿಬಿರ ಹಾಗೂ ವಾಕೇಥಾನ್ ಉದ್ಧೇಶಿಸಿ ಮಾತನಾಡಿದ ಅವರು; ಪ್ರತಿ ವರ್ಷವೂ ಜಾಗತಿಕವಾಗಿ ೪೬೦ ಮಿಲಿಯನ್ ಮೆಟ್ರಿಕ್‌ಟನ್ ಪ್ಲಾಸ್ಟಿಕ್‌ನ್ನು ಉತ್ಪಾದಿಸಲಾಗುತ್ತಿದೆ. ಸುಮಾರು ೨೦ ಮಿಲಿಯನ್ ಮೆಟ್ರಿಕ್‌ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ…

Read More

ವಿಜಯಪುರ: ನಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ 33 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 186 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿವಿಧ ಕಾರಣಗಳಿಂದ ನಗರದ ವಿವಿಧೆಡೆ ಖಾಲಿ ಆಗಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್‌ 9 ಕೊನೆಯ ದಿನವಾಗಿದೆ. ಕಾರಣ ನ.9 ರೊಳಗಾಗಿ http:\karnemakaone.kar.nic.in\abcd\ ಈ ವೆಬ್ ಸೈಟ್ ದಲ್ಲಿ ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಸಿ, ಉದ್ಯೋಗ ಪಡೆದುಕೊಳ್ಳಬೇಕು. ಈ ವಿಷಯವನ್ನು ತಮ್ಮ ಸಂಬಂಧಿಕರು, ನೆರೆ-ಹೊರೆ ಯವರಿಗೆ ತಿಳಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ೫,೦೦೦ರೂಗಳ ಆರ್ಥಿಕ ನೆರವನ್ನು ನೀಡುವ ಸಲುವಾಗಿ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕದ ಮಾಲೀಕರು ಹಾಗೂ ಸದರಿ ಘಟಕಗಳಲ್ಲಿ ಕಾರ್ಯನಿರ್ವಹಿಸುತತಿರುವ ಅರ್ಹ ಕಾರ್ಯನಿರತ ವಿದ್ಯುತ್ ಮಗ್ಗ ನೇಕಾರರನ್ನು ಈಗಾಗಲೇ ಕಳೆದ ಸಾಲಿನಲ್ಲಿ ನೇಕಾರ ಸಮ್ಮಾನ್ (ವಿದ್ಯುತ್ ಮಗ್ಗ) ಯೋಜನೆಯಡಿ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿದ ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ನೇಕಾರರಿಮದ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದೆ.ವಿಜಯಪುರ ಜಿಲ್ಲೆಯ ನೇಕಾರರು ನಿಗಧಿತ ಅರ್ಜಿ ನಮೂನೆಯೊಂದಿಗೆ ಘಟಕದ ಮಾಲೀಕರಿಂದ ಮುಚ್ಚಳಿಕೆ ಪತ್ರ, ಘಟಕದ ಮಾಲೀಕರ/ನೇಕಾರರ ಆಧಾರ್ ಲಿಂಕ್ ಬ್ಯಾಂಕ್ ಪಾಸ್‌ಬುಕ್ ಪ್ರತಿ, ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಯ ಫೋಟೋ, ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್. ಸಂಖ್ಯೆಯ ಇತ್ತಿಚೀನ ವಿದ್ಯುತ್ ಬಿಲ್, ಘಟಕದ ಉದ್ಯೋಗ ಆಧಾರ್/ಪಿ.ಎಂ.ಟಿ ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ, ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಕಾರರ ವಿವರಗಳನ್ನು ಒಳಗೊಂಡ ಮಜೂರಿಯ ಪಾವತಿಯ ಪ್ರತಿಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ವಿಜಯಪುರ ಕಕರಸಾ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಕುರಿತು ಚಾಲಕ, ನಿರ್ವಾಹಕರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಾರಿಗೆ ಅಧಿಕಾರಿ ಡಿ.ಎ.ಬಿರಾದಾರ, ಸಹಾಯಕ ಸಂಚಾರ ವ್ಯವಸ್ಥಾಪಕರಾದ ಜೆ.ಕೆ.ಹುಗ್ಗೆಣ್ಣವರ, ಕೇಂದ್ರ ಬಸ್ ನಿಲ್ದಾಣ ವಿಜಯಪುರ ವಿಭಾಗದ ಸಿಬ್ಬಂದಿ ವರ್ಗದವರು ಹಾಗೂ ನವಸ್ಪೂರ್ತಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಶುಪಾಲನ ಮತ್ತು ಪಶುವೈದ್ಯ ಇಲಾಖೆಯ ವತಿಯಿಂದ ರಾಷ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವಿಜಯಪುರ ತಾಲೂಕಿನಲ್ಲಿ ದಿನಾಂಕ ೨೧-೧೦-೨೦೨೪ ರಿಂದ ೨೦-೧೧-೨೦೨೪ರ ವರೆಗೆ ೬ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ವಿಜಯಪುರ ತಾಲೂಕಿನ ರೈತರು ಲಸಿಕಾ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕು ಎಂದು ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಬಿ.ಎಸ್. ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನಾಟಕ ಸರ್ಕಾರವು ಶ್ರೇಷ್ಠ ಸಹಕಾರಿಗಳನ್ನು ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಆಸಕ್ತರು ತಮ್ಮ ವ್ಯಯಕ್ತಿಕ ಪರಿಚಯ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿವರಗಳ ಅಗತ್ಯ ದಾಖಲೆಗಳನ್ನು ದಿನಾಂಕ ೧೮-೧೦-೨೦೨೪ರ ಬೆಳಿಗ್ಗೆ ೧೧ ಗಂಟೆಯೊಳಗಾಗಿ ಸಹಕಾರ ಸಂಘಗಳ ಉಪ ನಿಬಂಧಕರು ವಿಜಯಪುರ ಕಚೇರಿಗೆ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕರ ಪ್ರಕಟಣೆ ತಿಳಿಸಿದೆ.

Read More

’ವಚನ ದರ್ಶನ’ ಕೃತಿ ಮತ್ತು ’ಶರಣರ ಶಕ್ತಿ’ ಚಲನಚಿತ್ರ ನಿಷೇಧಿಸಲು ಆಗ್ರಹಿಸಿ ಬಸವ ಭಕ್ತರಿಂದ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ’ವಚನ ದರ್ಶನ’ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಹಾಗೂ ಶರಣ ಸಂಸ್ಕೃತಿಗೆ ಅಪಮಾನ ಮಾಡುವಂತಹ ’ಶರಣರ ಶಕ್ತಿ’ ಚಲನಚಿತ್ರವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಕಲ್ಬುರ್ಗಿ ಫೌಂಡೇಶನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಗಂಗಾಧರ ಸಾಲಕ್ಕಿ ಮಾತನಾಡಿ, ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ಈ ’ವಚನ ದರ್ಶನ’ ಕೃತಿ ರಚಿಸಿದ್ದು, ಇದು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ. ಇದರಿಂದ ಬಸವ ಭಕ್ತರಿಗೆ ನೋವಾಗಿದ್ದು, ಕಾರಣ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ಈ ಕೃತಿಯನ್ನು ಕೂಡಲೇ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನಿನ್ನೆ ನಡೆದ ವಕ್ಫ್ ಬೋರ್ಡ್ ವಿರುದ್ಧದ ಹೋರಾಟವು ರಾಜಕೀಯ ಪ್ರೇರಿತವಾಗಿದ್ದು, ಜನರನ್ನು ದಿಕ್ಕು ತಪ್ಪಿಸುವುದಾಗಿದೆ ಎಂದು ಕಾಂಗ್ರೆಸ್ ಮುಖಂಡರು ಗುಡುಗಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಷರಿಫ್ ಹಾಗೂ ಅಬ್ದುಲ್ ರಜಾಕ ಹೊರ್ತಿ ಅವರು,ಹತ್ತು ಸಾವಿರ ಎಕರೆಭೂಮಿ ಫ್ಲಾಗಿಂಗ್ ಮಾಡಿ ಸರ್ವೆ ಮಾಡಲು ನಮ್ಮ ವಕ್ಸ್ ಮಂತ್ರಿ ಜಮೀರ ಅಹಮದ್ಖಾನ್ ರವರು ಹೇಳಿದ್ದಾರೆ. ಆದರೆ ಇದನ್ನೇ ಒಂದು ನೆಪವಾಗಿ ಇಟ್ಟುಕೊಂಡು ನಗರದ ಬಿಜೆಪಿ ಶಾಸಕ ಯತ್ನಾಳ್ ಇದನ್ನು ಸಾರ್ವಜನಿಕರಲ್ಲಿ ತಪ್ಪಾಗಿ ಬಿಂಬಿಸುತ್ತಿರುವುದು ಖಂಡನಿಯ. ಅವರ ಭಾಷೆ ನಡೆ-ನುಡಿ ನೋಡಿದರೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾ‌ರಮಾಡುತ್ತಿದ್ದಾರೆ ಎಂದೆನಿಸುತ್ತಿದೆ ಎಂದರು.ವಕ್ಸ್ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿರುವ ಸರ್ವೆ ವಿಷಯದಲ್ಲಿ ಶೇಕಡ 98% ರಷ್ಟು ನಮ್ಮ ಮುಸ್ಲಿಂ ಸಮಾಜದ 2 ಗುಂಪುಗಳ ಅಥವಾ ಇಬ್ಬರು ಮುತುವಲ್ಲಿಗಳಲ್ಲಿ ತಂಟೆತಕರಾರುಗಳಿವೆ ಅವುಗಳನ್ನು ಕ್ಲಿಯರ್ ಮಾಡಬೇಕಾಗಿದೆ. ಈ ವಿಷಯವಾಗಿ ಸಚಿವರು ನಿರ್ದೇಶನ ನೀಡಿದ್ದಾರೆ. ಆದರೆ ಶಾಸಕ ಯತ್ನಾಳ್‌ ಇದರಲ್ಲಿಮುಸ್ಲಿಂ ಮಂತ್ರಿ…

Read More