ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ನಿನ್ನೆ ನಡೆದ ವಕ್ಫ್ ಬೋರ್ಡ್ ವಿರುದ್ಧದ ಹೋರಾಟವು ರಾಜಕೀಯ ಪ್ರೇರಿತವಾಗಿದ್ದು, ಜನರನ್ನು ದಿಕ್ಕು ತಪ್ಪಿಸುವುದಾಗಿದೆ ಎಂದು ಕಾಂಗ್ರೆಸ್ ಮುಖಂಡರು ಗುಡುಗಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಷರಿಫ್ ಹಾಗೂ ಅಬ್ದುಲ್ ರಜಾಕ ಹೊರ್ತಿ ಅವರು,
ಹತ್ತು ಸಾವಿರ ಎಕರೆ
ಭೂಮಿ ಫ್ಲಾಗಿಂಗ್ ಮಾಡಿ ಸರ್ವೆ ಮಾಡಲು ನಮ್ಮ ವಕ್ಸ್ ಮಂತ್ರಿ ಜಮೀರ ಅಹಮದ್
ಖಾನ್ ರವರು ಹೇಳಿದ್ದಾರೆ. ಆದರೆ ಇದನ್ನೇ ಒಂದು ನೆಪವಾಗಿ ಇಟ್ಟುಕೊಂಡು ನಗರದ ಬಿಜೆಪಿ ಶಾಸಕ ಯತ್ನಾಳ್ ಇದನ್ನು ಸಾರ್ವಜನಿಕರಲ್ಲಿ ತಪ್ಪಾಗಿ ಬಿಂಬಿಸುತ್ತಿರುವುದು ಖಂಡನಿಯ. ಅವರ ಭಾಷೆ ನಡೆ-ನುಡಿ ನೋಡಿದರೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ
ಮಾಡುತ್ತಿದ್ದಾರೆ ಎಂದೆನಿಸುತ್ತಿದೆ ಎಂದರು.
ವಕ್ಸ್ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿರುವ ಸರ್ವೆ ವಿಷಯದಲ್ಲಿ ಶೇಕಡ 98% ರಷ್ಟು ನಮ್ಮ ಮುಸ್ಲಿಂ ಸಮಾಜದ 2 ಗುಂಪುಗಳ ಅಥವಾ ಇಬ್ಬರು ಮುತುವಲ್ಲಿಗಳಲ್ಲಿ ತಂಟೆ
ತಕರಾರುಗಳಿವೆ ಅವುಗಳನ್ನು ಕ್ಲಿಯರ್ ಮಾಡಬೇಕಾಗಿದೆ. ಈ ವಿಷಯವಾಗಿ ಸಚಿವರು ನಿರ್ದೇಶನ ನೀಡಿದ್ದಾರೆ. ಆದರೆ ಶಾಸಕ ಯತ್ನಾಳ್ ಇದರಲ್ಲಿ
ಮುಸ್ಲಿಂ ಮಂತ್ರಿ ಎಂಬ ಒಂದೇ ಒಂದು ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಯಾವ ರೈತರ, ಬಡವರ ಭೂಮಿಯನ್ನು ಅನ್ಯಾಯದಿಂದ ತೆಗೆದುಕೊಳ್ಳಲಾಗುತ್ತಿಲ್ಲ, ಕೇವಲ ತಮ್ಮ ಪೂರ್ವಾಗ್ರಹಪೀಡಿತ ವಿಚಾರಗಳಿಂದ ಜನರಲ್ಲಿ ಗೊಂದಲಮಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ದಾಖಲೆಗಳಿಲ್ಲದೆ ಯಾರ ಭೂಮಿಯನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂಬ ಆಸೆಯಿಂದ ಇಂತಹ ಥರ್ಡ್ ಕ್ಲಾಸ್ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫಯಾಜ್ ಕಲಾದಗಿ, ಆನಂದ ಜಾಧವ, ಮಹಾದೇವಿ ಗೋಕಾಕ, ಭಾರತಿ ಹೊಸಮನಿ ಉಪಸ್ಥಿತರಿದ್ದರು.
“ಬಿಜಾಪುರದಲ್ಲಿ ಅತಿ ಹೆಚ್ಚು ಸ್ಲಿಪ್ಪರ್ ಸೆಲ್ಗಳಿವೆ ಅಂತ ಚಕ್ರವರ್ತಿ ಸೂಲಿಬೆಲೆ ಬಹಿರಂಗವಾಗಿ ಹೇಳಿದ್ದಾರೆ. ಇವರೊಬ್ಬ ಸುಳ್ಳಿನ ಸರದಾರನಾಗಿದ್ದು, ಸುಳ್ಳು ಕಥೆ ಕಟ್ಟುವಲ್ಲಿ ಅವರು ನಿಸ್ಸೀಮರು.
ಇವರಿಗೆ ತಕ್ಷಣ ಅರೆಸ್ಟ್ ಮಾಡಿ ಇವರನ್ನು ತನಿಖೆ ಮಾಡಬೇಕು. ಇವರ ಸ್ಲಿಪ್ಪರ್ ಸೆಲ್ ಗಳು
ಎಲ್ಲೆಲ್ಲಿದ್ದಾರೆ? ಯಾರ್ಯಾರು ಇದ್ದಾರೆ? ಎಂಬುದನ್ನು ತಿಳಿದುಕೊಳ್ಳಬೇಕು. ಇವರು ನಮ್ಮ
ಬಿಜಾಪುರಿನ ದಕ್ಷ ಪೊಲೀಸ್ ಅಧಿಕಾರಿಗಳ ಮತ್ತು ಇಂಟಲಿಜೆನ್ಸ್ ಡಿಪಾರ್ಟೆಂಟ್ ಬಗ್ಗೆ ಅನುಮಾನ
ವ್ಯಕ್ತಪಡಿಸುವುದು ನೋಡಿದರೆ ಇವರು ಏನೋ ಕುತಂತ್ರ ನಡೆಸಿರುವುದು ತಿಳಿದು ಬರುತ್ತಿದೆ. ಕಾರಣ ಇವರನ್ನು ಅರೆಸ್ಟ್ ಮಾಡಬೇಕೆಂದು ಆಗ್ರಹಿಸುತ್ತೇನೆ.”
– ಅಬ್ದುಲ್ ಹಮೀದ್ ಮುಷರಿಫ್
ಕಾಂಗ್ರೆಸ್ ಮುಖಂಡರು, ವಿಜಯಪುರ

