Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಮಠ ಮಾನ್ಯಗಳು, ಪುಣ್ಯ ಕ್ಷೇತ್ರಗಳು, ಮಾನವ ಜನ್ಮದ ಭವಬಂಧನ ಕಳೆಯುವ ಆಧ್ಯಾತ್ಮಿಕ ಕೇಂದ್ರಗಳು ಎಂದು ಸಾಹಿತಿ, ಶಿಕ್ಷಕ ಶಿವರುದ್ರಪ್ಪ ಬೊಮ್ಮನಹಳ್ಳಿ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಸತ್ಯಾಸತ್ಯತೆಯ ನಿಜ ಸ್ವರೂಪ ಅರಿತು ಬೆರೆತು ಬಾಳಲು ಕಲಿಸುವ ಸತ್ಸಂಗ, ಶಿವಾನುಭವ ಗೋಷ್ಠಿಯ ಅತ್ಯಾವಶ್ಯಕ. ನರನು ಹರನಾಗಿಸಿ, ಮಾನವ ಮಹಾದೇವನಾಗಿಸುವ ಶಕ್ತಿ ಸತ್ಸಂಗಕ್ಕಿದೆ ಎಂದವರು. ಮಾಸಿಕ ಹುಣ್ಣಿಮೆಯ ಗೋಷ್ಠಿಯಲ್ಲಿ ಜ್ಞಾನಾಮೃತ ಉಣಬಡಿಸುವ ಶ್ರೀಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಕಾರ್ಯ ಸಾರ್ಥಕ ಎಂದರು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಆದಿಕವಿ ಮಹರ್ಷಿ ವಾಲ್ಮೀಕಿ ಬರೆದಿಟ್ಟ ಮಹಾಕಾವ್ಯವನ್ನು ಚೆನ್ನಾಗಿ ಅರಿತಾಗ ಬದುಕು ಸುಂದರವಾಗಿ ರೂಪುಗೊಂಡು, ಸದಾ ಪ್ರಜ್ವಲಿಸುತ್ತದೆ ಎಂದು ಆಶಿಸಿದರು.ಶರಣಕುಮಾರ ಯಾಳಗಿ, ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಅದ್ಭುತವಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಅ.೧೯ರಂದು ಶನಿವಾರ ಹೊನವಾಡ ಮತ್ತು ತಿಕೋಟಾ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.ಬೆ.೮ಗಂಟೆಗೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರೂ.೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಬಳಿಕ ಬೆ.೯ ಗಂಟೆಗೆ ತಿಕೋಟಾ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ತಲಾ ರೂ.೫೦ ಲಕ್ಷ ವೆಚ್ಚದಲ್ಲಿ ಪಟ್ಟಣದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಮತ್ತು ಗೈರಾಣ ಕಾಲನಿಯ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಅಲ್ಲದೇ, ಪಟ್ಟಣ ಪಂಚಾಯಿತಿ ವತಿಯಿಂದ ರೂ.೧೧೨.೨೩ ಲಕ್ಷ ವೆಚ್ಚದಲ್ಲಿ ಪ.ಪಂ ವ್ಯಾಪ್ತಿಯ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕರ ಕಚೇರಿ ಮಾಧ್ಯಮ ಪ್ರಕಟಣೆಯಲ್ಲಿ ನೀಡಲಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಸ್ವಚ್ಛತಾ ನಿರೀಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಶಂಕರ ಪುಕಳೆ ಅವರನ್ನು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಾದ ಮಹಾವೀರ ಬೋರಣ್ಣವರ, ಶಿವಾನಂದ ಅಂಬಿಗರ, ಅಶೋಕ ಸಜ್ಜನ್, ಪೌರಸೇವಾ ಸಂಘದ ಅಧ್ಯಕ್ಷ ರವಿಂದ್ರ ಶಿರಷ್ಯಾಡ, ರಾಜೇಶ್ವರಿ ಚಲವಾದಿ ಸೇರಿದಂತೆ ಹಲವರು ಇದ್ದರು.
ವಿಜಯಪುರದ ’ವಿವಾ ಫಿಟ್ನೆಸ್ ಕೇಂದ್ರ’ ದಲ್ಲಿ ನಡೆದ 35 ನೇ ’ವಿವಾ ಡೇ’ ಸಮಾರಂಭದಲ್ಲಿ ಮಹಿಳೆಯರ ಕಲರವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ನಿಯಮಿತವಾಗಿ ಫಿಟ್ನೆಸ್ ಕೇಂದ್ರಗಳಿಗೆ (ಜಿಮ್) ತೆರಳಿ ವ್ಯಾಯಾಮ ಮಾಡುವುದನ್ನು ತಮ್ಮ ದೈನಂದಿನ ಭಾಗವಾಗಿಸಿಕೊಂಡರೆ ಆರೋಗ್ಯದಲ್ಲಿ ಸ್ಥಿರತೆ ಕಾಣಲು ಸಾಧ್ಯ ಎಂದು ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಪ್ರಾಯಪಟ್ಟರು.ಗುರುವಾರ ಸಂಜೆ ನಗರದ ’ವಿವಾ ಫಿಟ್ನೆಸ್’ ಕೇಂದ್ರದಲ್ಲಿ ನಡೆದ ’ವಿವಾ ಡೇ’ ಸಮಾರಂಭದಲ್ಲಿ ಅವರು ಮಾತನಾಡಿದರು.ನಾನೂ ಸೇರಿದಂತೆ ಇಲ್ಲಿಗೆ ಬರುವ ಅನೇಕ ಮಹಿಳೆಯರ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಹೆಚ್ಚಲು ಕಾರಣಿಭೂತರು ಈ ಫಿಟ್ನೆಸ್ ಕೇಂದ್ರದ ಮುಖ್ಯಸ್ಥೆ ವಿಜಯಲಕ್ಷ್ಮಿ ಗಿರಗಾಂವಕರ ಮೇಡಂ ಅವರು. ಅವರಿಲ್ಲಿ ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ, ನಮ್ಮೊಂದಿಗೆ ಸ್ನೇಹದಿಂದ ಬೆರೆತು, ವ್ಯಾಯಾಮ ಮತ್ತು ಆರೋಗ್ಯದ ಬಗ್ಗೆ ಉಪಯುಕ್ತ ಟಿಪ್ಸ್ ಗಳನ್ನು ಹೇಳುತ್ತ ನಮ್ಮನ್ನು ಹುರಿದುಂಬಿಸುತ್ತಾರೆ. ನಮಗೆ ಎಕ್ಸರಸೈಜ್ ಮಾಡಲು ಪ್ರೇರೇಪಿಸುತ್ತಾರೆ. ಮೇಡಂ ಗೆ ಮತ್ತು ನನ್ನನ್ನು ಈ ವಾತಾವರಣಕ್ಕೆ ಪರಿಚಯಿಸಿದ ಗೆಳತಿ ಸವಿತಾ…
Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಕ್ತರಿಗಾಗಿ ಸದ್ಗುರು ವಿರೇಶ್ವರ ಶಿವಯೋಗಿಗಳು ತಮ್ಮ ಭಾಗದಲ್ಲಿ ಸಂಚರಿಸಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಭಕ್ತರ ಏಳ್ಗೆಯೇ ಅವರ ಮುಖ್ಯ ಧ್ಯೇಯವಾಗಿತ್ತು. ಅವರ ತತ್ವಗಳು ಸರ್ವಕಾಲಿಕ ಸತ್ಯವಾಗಿವೆ ಎಂದುತಾಳಿಕೋಟಿ – ಹಿರೂರ ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೀಠಾಪತಿ ಪ್ರವಚನಕಾರ ಜಯ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ 84 ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ 25 ನೇ ವರ್ಷದ ಪುರಾಣ – ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ ಪುರಾಣ ಗ್ರಂಥ ಹಾಗೂ ಜೀವನ ಚರಿತ್ರೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸತ್ವುರುಷರ ಜೀವನದ ಸಂದೇಶಗಳು ಆಲಿಸುವದರಿಂದ ಹಾಗೂ ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದರು.ಕೊಣ್ಣೂರು ಮಠದ ಡಾ.ವಿಶ್ವಪ್ರಕಾಶ ಶಿವಾಚಾರ್ಯರು ಮಾತನಾಡಿ, ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರ ಜೀವನ ಸಂದೇಶಗಳ ಮೌಲ್ಯಗಳು ಮೂಲಕ ಧರ್ಮದ ದಾರಿಯಲ್ಲಿ ನಡೆಯುವ ಸತ್ಸಂಗದಿಂದ ಆದ್ಯಾತ್ಮೀಕ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಪುಟ್ಟ ಬಾಲಕಿಯ ತಲೆ ನೋವಿನಿಂದ ಸಿಡಿಯುತ್ತಿತ್ತು ಕಾರಣ ಸ್ಪಷ್ಟ.. ಕಳೆದೆರಡು ದಿನಗಳಿಂದ ಆಕೆ ಊಟ ಮಾಡಿರಲಿಲ್ಲ. ಹಸಿವಿನ ಸಂಕಟವು ತಲೆನೋವಿನ ರೂಪದಲ್ಲಿ ಕಾಣಿಸಿಕೊಂಡಿತ್ತು.ವೈಭವೋಪೇತ ಕಲ್ಯಾಣಮಂಟಪದ ಹಿಂದಿನ ಕಸದ ತೊಟ್ಟಿಯಲ್ಲಿ ಹಲವಾರು ನಾಯಿಗಳು ಉಂಡು ಎಸೆದ ಬಾಳೆ ಎಲೆಯಲ್ಲಿ ಉಳಿದ ಆಹಾರವನ್ನು ಸೇವಿಸುತ್ತಿದ್ದರೆ ಅಲ್ಲಿಯೇ ದೂರದ ಸ್ಲಂ ನ ಮಕ್ಕಳು ಆ ನಾಯಿಗಳನ್ನು ಓಡಿಸಿ ಅಲ್ಲಿ ಹಾಕಿದ್ದ ಇನ್ನಿತರ ಎಲೆಗಳಲ್ಲಿನ ಅಳಿದುಳಿದ ಆಹಾರವನ್ನು ಗಬಗಬನೆ ತಿನ್ನುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು. ಅವರಿವರ ಮನೆ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಆ ವಿಧವೆ ತಾಯಿಗೆ ತನ್ನ ಎರಡು ಮಕ್ಕಳ ಶಾಲಾ ಫಿ ಕಟ್ಟಲು ಒದ್ದಾಡುತ್ತಿದ್ದಳು. ಹರಿದ ಅಂಗಿಗೆ ಪಿನ್ನು ಹಾಕಿಕೊಂಡು, ತೇಪೆ ಹಾಕಿದ ಲಂಗವನ್ನು ಧರಿಸಿದ ಮಕ್ಕಳ ಮುಖದಲ್ಲಿ ನೋವು ನಿರಾಶೆ ಮಡುಗಟ್ಟಿತ್ತು.ಉಪ್ಪು ಸಂಸ್ಕರಣೆ ಮಾಡುತ್ತಿರುವ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆ ಕೆಲಸಗಾರರಲ್ಲಿ ಶೂ ಗಳನ್ನು ಕೊಳ್ಳುವ ಆರ್ಥಿಕ ಅನುಕೂಲವಿಲ್ಲದ ಕಾರಣ ಯಾರೊಬ್ಬರೂ ಕಾಲಿಗೆ…
ಬಾಬಾನಗರ ಗ್ರಾಮದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಮನರೇಗಾ ಯೋಜನೆಯ ಮಾಹಿತಿ, ಶಿಕ್ಷಣ & ಸಂವಹನ (ಐಇಸಿ) ಕಾರ್ಯಕ್ರಮದಡಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಅಂಗವಾಗಿ ಮನೆ-ನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರೇಣುಕಾ ಸೋಲಾಪುರ ಅವರು ಮಾತನಾಡಿದರು.ಸರಕಾರದ ನಿರ್ದೇಶನದಂತೆ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅಕ್ಟೋಬರ್ ೦೨ ರಿಂದ ಒಂದು ತಿಂಗಳುಗಳ ಕಾಲ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವದರ ಜೊತೆಗೆ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಪತ್ರರಹಿತ ಕೆಲಸ ಮಾಡಲು ಹೆಚ್ಚು ಒಲವು ತೋರುತ್ತಾರೆ. ಅದರಂತೆ ನಮ್ಮ ಮನರೇಗಾ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಬಸವೇಶ್ವರ ಪ್ರೌಡಶಾಲೆ, ಬಸವೇಶ್ವರ ಪದವಿ ಪೂರ್ವ ಕಾಲೇಜು, ಬಸವೇಶ್ವರ ಪದವಿ ಮಹಾವಿಧ್ಯಾಲಯದ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಲೇಜಿನ ಸಂಭಾಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಆಚರಣೆಮಾಡಲಾಯಿತು.ಮುಖ್ಯಗುರು ಜಗದೀಶ ಗುಮಶೆಟ್ಟಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು,ಪದವಿ ಕಾಲೇಜಿನ ಪ್ರಾಚಾರ್ಯ ಜಗದೀಶ ಕಾದಳ್ಳಿ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಿದರು.ಈ ಸಂದರ್ಬದಲ್ಲಿ ನಿಂಗನಗೌಡ ಗುಂಡಕನಾಳ,ರವಿ ಕುಲಕರ್ಣಿ,ವಿರೇಶ ಝಳಕಿ ಸೇರಿದಂತೆ ಅನೇಕರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಮಾಜದಲ್ಲಿ ಒಬ್ಬ ಬೇಟೆಗಾರ ಬದಲಾಗಿ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಾದರಿ ವ್ಯಕ್ತಿ ರಾಮನಾಮ ಜಪದಿಂದ ರಾಮಾಯಣದಂತಹ ಮಹಾಕಾವ್ಯವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹನೀಯರಲ್ಲಿ ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ ಎಂದು ತಹಶೀಲ್ದಾರ ಎಸ್ ಎಸ್ ನಾಯಕಲಮಠ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕಾ ಆಡಳಿತ ಹಾಗೂ ವಾಲ್ಮೀಕಿ ಸಮುದಾಯದ ಸಹಭಾಗಿತ್ವದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಮಾತನಾಡಿದರು.ರಾಮಾಯಣ ಎಂದರೆ ರಾಮನಲ್ಲಿರುವ ಶ್ರೇಷ್ಠ ಮೌಲ್ಯಗಳ ಪ್ರತಿಪಾದನೆಯ ಗ್ರಂಥವಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮನು ಪತ್ತಾರ ಮಾತನಾಡಿದರು.ಮಂಜುನಾಥ ಅರೇಶಂಕರ ಮಾತನಾಡಿ, ವಾಲ್ಮೀಕಿ ಸಮಾಜ ಗುರುಭಕ್ತಿಗೆ ಹೆಬ್ಬೆರಳು, ದೇಶಭಕ್ತಿಗೆ ಪ್ರಾಣ, ದೈವಭಕ್ತಿಗೆ ಕಣ್ಣು, ಧರ್ಮ ಪತ್ನಿಯರಿಗೆ ರಾಮಾಯಣ ಗ್ರಂಥ ನೀಡಿದ ಸಮಾಜ ಇದಾಗಿದೆ. ಮಹರ್ಷಿ ವಾಲ್ಮೀಕಿ ಹಿಂದೂ ಸಮಾಜ ನೆಲೆಯಾಗಿ ನಿಂತಿರುವ ಈ ಗ್ರಂಥ ನೀಡಿದ ನಮ್ಮ ಸಮಾಜದ ಕೊಡುಗೆ ಎಂದರು.ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮಸಿ ದಳವಾಯಿ, ತೆಲಗಿ ಗ್ರಾಂ.ಪಂ.ಅಧ್ಯಕ್ಷ ಅರವಿಂದ ಕೊಪ್ಪದ, ಪಶುವೈದ್ಯಾಧಿಕಾರಿ ಡಾ.ವೆಂಕಟೇಶ ವಾಲಿಕಾರ,…
