ವಿಜಯಪುರದ ’ವಿವಾ ಫಿಟ್ನೆಸ್ ಕೇಂದ್ರ’ ದಲ್ಲಿ ನಡೆದ 35 ನೇ ’ವಿವಾ ಡೇ’ ಸಮಾರಂಭದಲ್ಲಿ ಮಹಿಳೆಯರ ಕಲರವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರು ನಿಯಮಿತವಾಗಿ ಫಿಟ್ನೆಸ್ ಕೇಂದ್ರಗಳಿಗೆ (ಜಿಮ್) ತೆರಳಿ ವ್ಯಾಯಾಮ ಮಾಡುವುದನ್ನು ತಮ್ಮ ದೈನಂದಿನ ಭಾಗವಾಗಿಸಿಕೊಂಡರೆ ಆರೋಗ್ಯದಲ್ಲಿ ಸ್ಥಿರತೆ ಕಾಣಲು ಸಾಧ್ಯ ಎಂದು ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಪ್ರಾಯಪಟ್ಟರು.
ಗುರುವಾರ ಸಂಜೆ ನಗರದ ’ವಿವಾ ಫಿಟ್ನೆಸ್’ ಕೇಂದ್ರದಲ್ಲಿ ನಡೆದ ’ವಿವಾ ಡೇ’ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನೂ ಸೇರಿದಂತೆ ಇಲ್ಲಿಗೆ ಬರುವ ಅನೇಕ ಮಹಿಳೆಯರ ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಹೆಚ್ಚಲು ಕಾರಣಿಭೂತರು ಈ ಫಿಟ್ನೆಸ್ ಕೇಂದ್ರದ ಮುಖ್ಯಸ್ಥೆ ವಿಜಯಲಕ್ಷ್ಮಿ ಗಿರಗಾಂವಕರ ಮೇಡಂ ಅವರು. ಅವರಿಲ್ಲಿ ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ, ನಮ್ಮೊಂದಿಗೆ ಸ್ನೇಹದಿಂದ ಬೆರೆತು, ವ್ಯಾಯಾಮ ಮತ್ತು ಆರೋಗ್ಯದ ಬಗ್ಗೆ ಉಪಯುಕ್ತ ಟಿಪ್ಸ್ ಗಳನ್ನು ಹೇಳುತ್ತ ನಮ್ಮನ್ನು ಹುರಿದುಂಬಿಸುತ್ತಾರೆ. ನಮಗೆ ಎಕ್ಸರಸೈಜ್ ಮಾಡಲು ಪ್ರೇರೇಪಿಸುತ್ತಾರೆ. ಮೇಡಂ ಗೆ ಮತ್ತು ನನ್ನನ್ನು ಈ ವಾತಾವರಣಕ್ಕೆ ಪರಿಚಯಿಸಿದ ಗೆಳತಿ ಸವಿತಾ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆ ಎಂದು ಶೈಲಾ ಮಣೂರ ಮನದುಂಬಿ ಶ್ಲಾಘಿಸಿದರು.
’ವಿವಾ ಫಿಟ್ನೆಸ್ ಕೇಂದ್ರದ ಮುುಖ್ಯಸ್ಥೆ ಮತ್ತು ಟ್ರೇನರ್ ವಿಜಯಲಕ್ಷ್ಮಿ ಗಿರಿಗಾಂವಕರ ಮಾತನಾಡಿ, ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಈ ಕೇಂದ್ರವನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ತಮ್ಮಂಥ ಎಲ್ಲ ಸದಸ್ಯರ ಸಹಕಾರ, ಅಭಿಮಾನವೇ ಕಾರಣವಾಗಿದೆ. ಇಲ್ಲಿಗೆ ಬಂದ ಅನೇಕ ಮಹಿಳೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ. ಇನ್ನೂ ಹೆಚ್ಚು ಹೆಚ್ಚು ಈ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದರು
ಇದೇ ಸಂದರ್ಭದಲ್ಲಿ ವಿವಾ ಫಿಟ್ನೆಸ್ ಕೇಂದ್ರದ ಮುುಖ್ಯಸ್ಥೆ ವಿಜಯಲಕ್ಷ್ಮಿ ಗಿರಿಗಾಂವಕರ ಅವರನ್ನು ಶೈಲಾ ಮಣೂರ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸವಿತಾ ಅಗಸರ, ಹೇಮಾ ದೇಸಾಯಿ, ಪುಷ್ಪಾ ಗಡಿನಾಯಕ, ಪ್ರಿಯಾಂಕಾ, ಮೋನಾ ಬಿರಾದಾರ, ಅಶ್ವಿನಿ, ಶಮೀನಾ, ಹೇಮಾ ಗಡಬಳ್ಳಿ, ರಾಜೇಶ್ವರಿ, ಡಾ.ಭವಾನಿ, ನೇತ್ರಾ, ಕಾವ್ಯ ಶೀಲವಂತ, ಪ್ರಿಯಾಂಕ ಹಳ್ಳಿಕಟ್ಟಿ, ಅಕ್ಷತಾ, ಶೃತಿ, ಗಿರಿಗಾಂವಕರ, ನಸೀಬನ್ ಸೇರಿದಂತೆ ಅನೇಕರಿದ್ದರು.
” ನಿಯಮಿತ ವ್ಯಾಯಾಮದಿಂದ ನಮ್ಮ ಮಾನಸಿಕ ಆರೋಗ್ಯವು ಸುಧಾರಿಸುವುದಲ್ಲದೇ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ತೂಕವೂ ನಷ್ಟವಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ, ಇದು ನನ್ನ ಸ್ವ ಅನುಭವವಾಗಿದ್ದು ’ವಿವಾ ಫಿಟ್ನೆಸ್’ ಗೆ ಬರಲಾರಂಭಿಸಿದ ನಂತರವೇ ನನಗಿದು ಸಾಧ್ಯವಾಗಿದೆ.”
– ಶೈಲಾ ಮಣೂರ
ಪ್ರಕಾಶಕರು, ’ಉದಯರಶ್ಮಿ’ ದಿನಪತ್ರಿಕೆ

