ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಸ್ವಚ್ಛತಾ ನಿರೀಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಶಂಕರ ಪುಕಳೆ ಅವರನ್ನು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಾದ ಮಹಾವೀರ ಬೋರಣ್ಣವರ, ಶಿವಾನಂದ ಅಂಬಿಗರ, ಅಶೋಕ ಸಜ್ಜನ್, ಪೌರಸೇವಾ ಸಂಘದ ಅಧ್ಯಕ್ಷ ರವಿಂದ್ರ ಶಿರಷ್ಯಾಡ, ರಾಜೇಶ್ವರಿ ಚಲವಾದಿ ಸೇರಿದಂತೆ ಹಲವರು ಇದ್ದರು.

