Author: editor.udayarashmi@gmail.com

– ವಿವೇಕಾನಂದ. ಎಚ್. ಕೆ.ಚಿಂತಕರು, ಲೇಖಕರುಬೆಂಗಳೂರು ಉದಯರಶ್ಮಿ ದಿನಪತ್ರಿಕೆ ನೇಪಾಳದಲ್ಲಿ ಪ್ರವಾಹದಿಂದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲವು ಯಾತ್ರಿಗಳು ಪ್ರವಾಹದಿಂದ ಕೊಚ್ಚಿ ಹೋದ ಸಂದರ್ಭದಲ್ಲಿ ಕಾರ್ಪೊರೇಟ್ ಅಧ್ಯಾತ್ಮಿಕ ಗುರು ಶ್ರೀ ಜಗ್ಗಿ ವಾಸುದೇವ್ ಅವರು ಕಣ್ಣೀರು ಹಾಕಿದ್ದಾರೆ. ಅವರ ಇಶಾ ಫೌಂಡೇಶನ್ ಗೆ ಸೇರಿದ ಹಲವಾರು ಭಕ್ತರು ಈ ಪ್ರವಾಹದಲ್ಲಿ ಅಸುನೀಗಿದ್ದು ಅವರಿಗೆ ತುಂಬಾ ದುಃಖ ಉಂಟು ಮಾಡಿದೆ. ಆ ದು:ಖ ಅತ್ಯಂತ ಸಹಜವಾದದ್ದು. ನೋವು, ನಲಿವು ಈ ಬದುಕಿನಲ್ಲಿ ಯಾರನ್ನೂ ಬಿಡುವುದಿಲ್ಲ.ನಿರ್ವಾಣ ಸಮಯದಲ್ಲಿ ಬುದ್ದಂಗೂ ಕಾಡಿತ್ತು ಕಿಬ್ಬೊಟ್ಟೆ ನೋವು. ಅಂದರೆ ಮಾನಸಿಕವಾಗಿ ದೇಹ ತ್ಯಾಗಕ್ಕೆ ಸಿದ್ದರಾದ, ಎಲ್ಲಾ ರೀತಿಯ ಭಾವಗಳನ್ನು ಗೆದ್ದು ಸ್ಥಿತಪ್ರಜ್ಞರಾಗಿದ್ದ ಬುದ್ದರಿಗೂ ನೋವು ಕಾಡದೇ ಬಿಡಲಿಲ್ಲ. ಸಾವು ನೋವು ರೋಗರುಜಿನಗಳು ಯಾರನ್ನೂ ಬಿಡುವುದಿಲ್ಲ.ನೇಪಾಳದ ಪ್ರವಾಹದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ..ಶಿವರಾತ್ರಿಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರೊಂದಿಗೆ ಕುಣಿಯುತ್ತಾ, ಶಿವನನ್ನು ಪೂಜಿಸುವ, ಆರಾಧಿಸುವ, ಶಿವನದೇ ವಾಸಸ್ಥಾನವನ್ನು ನೋಡಲು ಮಾನಸ ಸರೋವರದ ಕೈಲಾಸ ಪರ್ವತ ಯಾತ್ರೆಗೆ ಶಿವನ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡ.ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ಹಳ್ಳಿಯ ಹೊರಭಾಗದಲ್ಲಿ ಇದ್ದ ಬೃಹತ್ ಆಲದ ಮರದಲ್ಲಿ ಹೆಣ್ಣು ಗಿಳಿಯೊಂದು ಗೂಡನ್ನು ಕಟ್ಟಿಕೊಂಡು ತನ್ನ ಮರಿಗಳೊಂದಿಗೆ ವಾಸಿಸುತ್ತಿತ್ತು. ಗಿಳಿಗೆ ಪ್ರತಿದಿನವೂ ತನ್ನ ಗೂಡಿನಲ್ಲಿ ಏನೋ ಒಂದು ರೀತಿಯ ಕೆಟ್ಟ ವಾಸನೆಯು ಬರುತ್ತಿದೆ ಎಂದು ಅನಿಸುತ್ತಿತ್ತು. ತನ್ನ ಗೂಡಿನೊಳಗೆ ಈ ಕೆಟ್ಟ ವಾಸನೆ ಎಲ್ಲಿ ಬರುತ್ತಿದೆ ಎಂದು ಗಿಳಿಯು ಎಷ್ಟೇ ಹುಡುಕಿದರೂ ಅದಕ್ಕೆ ವಾಸನೆಯ ಮೂಲ ದೊರೆಯಲಿಲ್ಲ. ತಾನು ಇರುವಂತಹ ಗೂಡು ಎಷ್ಟೇ ಉತ್ತಮವಾಗಿ ಇದ್ದರೂ ಅದರೊಳಗಿಂದ ಬರುತ್ತಿರುವ ಕೆಟ್ಟ ವಾಸನೆಯಿಂದಾಗಿ ಆ ಗಿಳಿಗೆ ಗೂಡಿನಲ್ಲಿ ಇರಲು ಸಾಧ್ಯವಾಗಲಿಲ್ಲ.ಕೊನೆಗೆ ಆ ಗಿಳಿಯು ತನ್ನ ಗುಂಪಿನ ಹಿರಿಯ ಪಾರಿವಾಳದ ಬಳಿಯಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ನನ್ನನ್ನೊಂದು ವಿಭಿನ್ನವಾದ ಸಮಸ್ಯೆಯು ಕಾಡುತ್ತಿದೆ, ಅದು ಏನೆಂದರೆ ನನ್ನ ಗೂಡಿನಿಂದ ಒಂದು ರೀತಿಯ ಅಸಹ್ಯವಾದ ವಾಸನೆಯು ಬರುತ್ತಿದೆ. ಆ ವಾಸನೆಯಿಂದಾಗಿ ನಾನು ಹಲವಾರು ಬಾರಿ ನನ್ನ ಗೂಡನ್ನು ಬದಲಿಸುತ್ತಾ…

Read More

ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ ’ ಉದಯರಶ್ಮಿ ದಿನಪತ್ರಿಕೆ ಬದುಕಿನ ಕೆಲ ಸಮಯ ಸಂದರ್ಭಗಳು ಎಂತಹ ಮನುಷ್ಯನನ್ನು ಕೂಡಾ ಕೆಲವೊಮ್ಮೆ ಖಿನ್ನತೆಗೆ ತಳ್ಳುತ್ತವೆ. ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಒಂದು ಹೆಜ್ಜೆ ಮುಂದೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುವಂತೆ ಮಾಡುತ್ತವೆ.ನೀನು ಎಷ್ಟೇ ದೊಡ್ಡ ಶ್ರೀಮಂತನಿರು, ಎಂತಹುದೇ ಅಧಿಕಾರದಲ್ಲಿರು, ಎಂತಹುದೇ ಪ್ರಖ್ಯಾತಿ ಪಡೆದಿರು, ನೀ ಹೆಣ್ಣೇ ಆಗಿರು, ಗಂಡೇ ಆಗಿರು ಒಂದಿಲ್ಲ ಒಂದು ಸಲವಾದರೂ ಈ ಖಿನ್ನತೆ (Depression), ಆತ್ಮ ಹತ್ಯೆಯ ಆಲೋಚನೆ (Sucidal Tendency)ಕಾಡದೆ ಇರದು.ಇಂತಹ ಸಂದರ್ಭಗಳಲ್ಲಿ ಮನುಷ್ಯ ಆ ಕ್ಷಣದ ಖಿನ್ನತೆಯ ಮೀರಿ ಆಲೋಚಿಸದೇ, ದಿನಾಲೂ ಸಾಯುವುದಕ್ಕಿಂತ ಒಂದೇ ಕ್ಷಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳೋಣವೆಂದು ಸಾವಿಗೆ ಶರಣಾಗಿ ಬಿಡುತ್ತಾನೆ. ಆಯಾ ಸಂದರ್ಭದ ಸಮಸ್ಯೆಗಳ ಮುಂದೆ, ತನ್ನದೇ ಮಕ್ಕಳು, ತನ್ನದೇ ತಂದೆ-ತಾಯಿಗಳು, ತನ್ನದೇ ಆಪ್ತರು ಆ ಕ್ಷಣದಲ್ಲಿ ಅದೃಶ್ಯವಾಗಿಬಿಡುತ್ತಾರೆ. ಭರವಸೆ ಇಲ್ಲದ ಬದುಕಿನ ಬರಡು ಕ್ಷಣಗಳೆಂದರೆ ಆತ್ಮಹತ್ಯೆಗೆ ಶರಣಾಗುವ ಮುಂಚೆಯ ಕ್ಷಣಗಳು. ಆ ಭಯಾನಕ ಭರವಸೆಯೇ ಕಾಣದ ಖಿನ್ನತೆಯಿಂದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹುತಾತ್ಮ ವೃತ್ತದ ಬಳಿ ವೇದಾಂತ ಸೌಹಾರ್ದ ಸಹಕಾರಿ ಸಂಘ ಶುಭಾರಂಭ ಮಾಡಿತು.ಸೌಹಾರ್ದ ಸಂಘದ ಸೇವೆಗೆ ಚಾಲನೆ ನೀಡಿದ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಅವರನ್ನು ಸ್ವಾವಲಂಬಿಯಾಗಿಸುವಲ್ಲಿ ಸೌಹಾರ್ದ ಹಾಗೂ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದರು. ವೇದಾಂತ ಕೇಸರಿ ಎಂದು ಶ್ರೀ ಮಲ್ಲಿಕಾರ್ಜುನ ಶ್ರೀಗಳನ್ನು ಕರೆಯಲಾಗುತ್ತಿತ್ತು. ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಗುರು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹೆಸರು ಕೇಳಿದಾಕ್ಷಣ ಅತ್ಯಂತ ಸಂತೋಷಪಡುತ್ತಿದ್ದರು, ಅಷ್ಟೊಂದು ಗುರುಭಕ್ತಿ ಅವರಲ್ಲಿತ್ತು, ಈಗ ಅವರ ಗುರುಗಳ ಹೆಸರಿನಲ್ಲಿಯೇ ಸೌಹಾರ್ದ ಸಂಘ ಆರಂಭಗೊಂಡಿರುವುದು ಅತ್ಯಂತ ಸಂತೋಷ ತಂದಿದೆ, ಈ ಸೌಹಾರ್ದ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.ಮುಖ್ಯ ಅತಿಥಿಯಾಗಿದ್ದ ಡಿ.ವೈ.ಎಸ್.ಪಿ. ಹಾಗೂ ಲೇಖಕ ಬಸವರಾಜ ಯಲಿಗಾರ ಮಾತನಾಡಿ, ಸಹಕಾರ ಹಾಗೂ ಸೌಹಾರ್ದ ಸಂಘಗಳಿಗೆ ವಿಶ್ವಾಸವೇ ಜೀವಾಳ, ಆಡಳಿತ ಮಂಡಳಿ ಈ ವಿಶ್ವಾಸ ಗಳಿಸಿಕೊಂಡರೆ ಸಹಕಾರ ಸಂಘ…

Read More

ಉದಯರಶ್ಮಿ ದಿನಪತ್ರಿಕೆ ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ಪಟ್ಟಣದ ಮಹಿಳೆಯರ ಸಾರ್ವಜನಿಕ ಶೌಚಾಲಯಕ್ಕೆ ಮೀಸಲಾದ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಅಕ್ರಮ ಆಶ್ರಯ ಕಟ್ಟಡ ನಿರ್ಮಾಣವನ್ನು ತಡೆದು, ಒತ್ತುವರಿ ತೆರವುಗೊಳಿಸಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಂತೆ ಕೋರಿ ಪಟ್ಟಣದ ಮಹಿಳೆಯರು ಹಾಗೂ ನಾಗರಿಕರಿಂದ ಬ್ರಹತ್ ಪ್ರತಿಭಟನೆ ನಡೆಯಿತು.ಪಟ್ಟಣದ ವ್ಯಾಪ್ತಿಯಲ್ಲಿರುವ ವಾರ್ಡ್ ನಂಬರ್ 3 ರ ಸರ್ಕಾರಿ ಜಾಗವನ್ನು ಬಹು ಕಾಲದಿಂದ ಈ ಭಾಗದ ಬಡ ಮತ್ತು ಸಾಮಾನ್ಯ ವರ್ಗದ ನೂರಾರು ಮಹಿಳೆಯರು ನಿತ್ಯ ಸಾರ್ವಜನಿಕ ಶೌಚಾಲಯದ ಜಾಗವಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಖಾಸಗಿ ವ್ಯಕ್ತಿಗಳು ಯಾವುದೇ ಸೂಕ್ತ ಅನುಮತಿ, ಪಟ್ಟಣ ಪಂಚಾಯಿತಿಯ ಪರವಾನಗಿ ಇಲ್ಲದೆ, ಈ ಮಹಿಳಾ ಶೌಚಾಲಯದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ಕಾನೂನು ಬಾಹಿರವಾಗಿ ಆಶ್ರಯ ಯೋಜನೆಯಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಇದನ್ನು ಸ್ಥಳೀಯ ಮಹಿಳೆಯರು ಒಟ್ಟಾಗಿ ವಿರೋಧಿಸಿದಾಗ, ಒತ್ತುವರಿದಾರರು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಮಹಿಳೆಯರು ನಿತ್ಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.ಈ ಕುರಿತು ನಾವು ಯಡ್ರಾಮಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಗಸ್ಟ್ 28 ರಿಂದ ಆಗಷ್ಟ 30ರ ವರೆಗೆ ಮೂರು ದಿನಗಳ ಕಾಲ ನಾನಾ ಕ್ರೀಡಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಚಾಲನೆ ನೀಡಲಾಯಿತು. ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.ಬಿ.ಎಲ್.ಡಿ.ಇ. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ, ಎಸ್. ಎಸ್. ಕೋರಿ ಅವರು ಮೇಜರ್ ಧ್ಯಾನ್ ಚಂದ್ ಅವರ ಜೀವನ, ಸಾಧನೆ ಹಾಗೂ ಭಾರತೀಯ ಹಾಕಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಕುರಿತು ಮಾತನಾಡಿದರು.ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ವಿದ್ಯಾರ್ಥಿನಿ ಶ್ರಾವಣಿ ಅವರು ರಾಷ್ಟ್ರೀಯ ಕ್ರೀಡಾ ದಿನದ ಪ್ರತಿಜ್ಞಾವಿಧಿ…

Read More

ಸಂಪೂರ್ಣ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರೈತಸಂಘ ಆಗ್ರಹ ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಜಯಪುರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಮ್ಮಿಕೊಳ್ಳಲಾದ ಅನಿರ್ದಾಷ್ಟಾವಧಿ ಹೋರಾಟಕ್ಕೆ ಚಡಚಣ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಎಲ್ಲ ಸಂಘಟನೆಗಳು, ರೈತರು ಪಾಲ್ಗೊಂಡು ಸೆ. 2ರಿಂದ ಹಮ್ಮಿಕೊಳ್ಳಲಾದ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಚಡಚಣ ತಾಲೂಕಾ ರೈತ ಸಂಘದ ಅಧ್ಯಕ್ಷ ವಸಂತ ಭೈರಾಮಡಿ ಮನವಿ ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಕೇವಲ 3 ತಾಲೂಕುಗಳನ್ನು ಬರ ಎಂದು ಘೋಷಿಸಿ ಇನ್ನುಳಿದ ತಾಲೂಕುಗಳಿಗೆ ಸರಕಾರ ಅನ್ಯಾಯ ಎಸಗಿದ್ದು, ಸಂಪೂರ್ಣ ಜಿಲ್ಲೆಯನ್ನು ಬರ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ. 2ರಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅನಿರ್ದಾಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಈ ಹೋರಾಟದಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಪ್ರತಿ ಎಕರೆಗೆ 50 ಸಾವಿರ ರೂ. ಬರಗಾಲ ಪರಿಹಾರ ಹಾಗೂ ಮಧ್ಯಂತರ ವಿಮೆ ಬಿಡುಗಡೆ, ಜಿಲ್ಲೆಯ ಉಳಿದ 10 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಬೇಕು, ಜಿಲ್ಲೆಯ ಎಲ್ಲ ಕೆರೆ, ಕಾಲುವೆಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚೆಗೆ ಕುಕುನೂರಿನಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮೊಹಮ್ಮದ್ ಪೈಗಂಬರ ಜಯಂತಿಯಲ್ಲಿ ಮಾತನಾಡುತ್ತಾ ಇಸ್ಲಾಂ ಧರ್ಮ ಸರ್ವ ಶ್ರೇಷ್ಠ ಧರ್ಮ. ನಾನು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದಿರುವ ಹೇಳಿಕೆಯನ್ನು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಖಂಡಿಸಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರೆ ನಿಮ್ಮ ಬಾಲಿಶತನದ ಮಾತುಗಳು ನಮಗೆ ನಾಚಿಕೆ ತಂದಿದೆ. ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ವೋಟ್ ರಾಜಕಾರಣಕ್ಕಾಗಿ ನೀವು ಹೀಗೆ ಹೇಳಿದಿರೋ ಹೇಗೆ? ಒಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದ ನೀವು ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ ನಿಮ್ಮ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವದು ಸರಿ ಅಲ್ಲ. ನೀವು ಬಸವ ಧರ್ಮದಲ್ಲಿ ಹುಟ್ಟಿಕೊಂಡು ಹೀಗೆ ಹೇಳಿದರೆ ನಿಮಗೆ ಅದು ಶೋಭೆಯೇ? ಎಂದು ಪ್ರಶ್ನಿಸಿದ್ದಾರೆ.ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ…

Read More

ಅಧಿಕಾರಿ-ಗುತ್ತಿಗೆದಾರರ ಶಾಮೀಲಿಗೆ ಅಫಜಲಪುರ ಜನ ಹೈರಾಣ! | ಆಮೆಗತಿಯ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಸಂಪರ್ಕ ವ್ಯವಸ್ಥೆಗೆ ಕಾಯಕಲ್ಪ ನೀಡಲು ರೂಪಿಸಲಾದ ಮಹತ್ವಾಕಾಂಕ್ಷೆಯ ‘ಕಲ್ಯಾಣ ಪಥ’ ಯೋಜನೆ ಅಫಜಲಪುರ ತಾಲೂಕಿನಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ. ನಿಗದಿತ ಕಾಲಾವಧಿ ಮುಗಿದರೂ ಕಾಮಗಾರಿ ಮುಕ್ತಾಯವಾಗದೆ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿದೆ.ಮಳೆ ಬಂದರೆ ಜಾರುಬಂಡಿ:ಕಾಮಗಾರಿ ಆರಂಭವಾಗಿ ತಿಂಗಳುಗಳೇ ಕಳೆದರೂ ಕೇವಲ ಮಣ್ಣು ಮತ್ತು ಜಲ್ಲಿ ಸುರಿದು ಅರ್ಧಕ್ಕೆ ಬಿಡಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಇಡೀ ರಸ್ತೆ ಜಾರುಬಂಡಿಯಂತಾಗಿದ್ದು, ದ್ವಿಚಕ್ರ ವಾಹನ ಸವಾರರು ದಿನನಿತ್ಯ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ ಕೂಡ ಊರು ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಬೇಕು. ಕಾಮಗಾರಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು. ಬಾಕಿ ಉಳಿದಿರುವ ರಸ್ತೆ ಡಾಂಬರೀಕರಣವನ್ನು ತಕ್ಷಣವೇ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು…

Read More