Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಎಲ್ಲ ಅಂಗಡಿಕಾರರು ತಮ್ಮ ಅಂಗಡಿಗಳ ನಾಮಫಲಕದಲ್ಲಿ ೬೦% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರ ನಿಯಮ ರೂಪಿಸಿದೆ. ಎಲ್ಲರೂ ತಪ್ಪದೇ ಈ ನಿಯಮವನ್ನು ಪಾಲಿಸಬೇಕು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಬೇರೆ ಭಾಷೆಯ ನಾಮ ಫಲಕವನ್ನು ಬಳಸುವದರಿಂದ ಕನ್ನಡಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಖಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಸರ್ಕಾರದ ಆದೇಶವನ್ನು ಪಾಲಿಸುವದು ನಮ್ಮೆಲ್ಲರ ಕರ್ತವ್ಯ. ನ೧ ರಿಂದ ಎಲ್ಲ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ೬೦ ರಷ್ಟು ಕನ್ನಡ ಬಾಷೆಯನ್ನು ಬಳಸಬೇಕು. ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆಯೂ ಸಹ ಆದೇಶವಾಗಿದ್ದು ಅದನ್ನೂ ಕಡ್ಡಾಯವಾಗಿ ಎಲ್ಲ ಪಟಾಕಿ ವ್ಯಾಪಾರಸ್ಥರು ತಹಸೀಲ್ದಾರ ಕಚೇರಿಯಿಂದ ಅನುಮತಿ ಪಡೆದು ಪಾಲಿಸಬೇಕು. ನಿಯಮಗಳನ್ನ ಮೀರಿ ನಡೆದು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ ೧೦೦ ಸಂಖ್ಯಾಬಲದ ಒಟ್ಟು ೬೨ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-೨ ಆದೇಶ ಹೊರಡಿಸಿದ್ದಾರೆ.ಈ ವಸತಿ ನಿಲಯದ ಮಂಜೂರಾತಿಗೆ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರು ಪ್ರಸ್ತಾವನೆ ಸಲ್ಲಿಸಿದ ಮೇರೆಗೆ ಬಸವನಬಾಗೇವಾಡಿ ತಾಲೂಕಿಗೆ ಒಂದು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಂಜೂರಾಗಿದೆ ಎಂದು ಶಾಸಕ, ಸಚಿವ ಶಿವಾನಂದ ಪಾಟೀಲ ಆಪ್ತಸಹಾಯಕ ಐ.ಟಿ.ಕೊಪ್ಪಳ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನ.೧ ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಜೊತೆಗೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗಣ್ಯರು ಭಾಗವಹಿಸುವ ಮೂಲಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕುರಿತಂತೆ ಕರೆಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ ೧ ರಂದು ಬೆಳಗ್ಗೆ ೮ ಗಂಟೆಗೆ ತಮ್ಮ ಶಾಲಾ-ಕಾಲೇಜುಗಳಲ್ಲಿ, ವಿವಿಧ ಇಲಾಖೆಯ ಕಚೇರಿಗಳಲ್ಲಿ ನಾಡದೇವಿ ಭುವನೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ನಾಡು-ನುಡಿಗೆ ನಮನ ಸಲ್ಲಿಸಿದ ನಂತರ ೮.೩೦ ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾಗುವ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಜನತೆ ಭಾಗವಹಿಸುವ ಮೂಲಕ ಮೆರವಣಿಗೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶುಕ್ರವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ಹಾಗೂ ನಗರದ ಜಿಲ್ಲಾ ಪಂಚಾಯತ್ ಹತ್ತಿರವಿರುವ ಈಜುಕೊಳಕ್ಕೆ (ಸ್ವೀಮ್ಮಿಂಗ್ ಫೂಲ್) ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಅಭ್ಯಾಸಕ್ಕೆ ಆಗಮಿಸುವ ಕ್ರೀಡಾಪಟುಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮಳೆ ನೀರು ಕ್ರೀಡಾಂಗಣದಲ್ಲಿ ನಿಲ್ಲದಂತೆ ನೋಡಿಕೊಂಡು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಕ್ರೀಡಾಂಗಣ ದೊಡ್ಡದಾಗಿರುವುದರಿಂದ ಹೆಚ್ಚಿನ ಸ್ವಚ್ಚತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮವಹಿಸಬೇಕು. ಕ್ರೀಡಾಂಗಣದ ಆವರಣದಲ್ಲಿರುವ ಅಂಗಡಿಗಳ ಬಾಡಿಗೆ ದರ ಪರಿಷ್ಕರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಂಗಮಂದಿರದ ನವೀಕರಣಕ್ಕಾಗಿ ಕಾಮಗಾರಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ರಂಗಮಂದಿರವನ್ನು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ಪೇಟಿಂಗ್, ಗೋಡೆ ಚಿತ್ರ ಬರೆಯಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು, ಆವರಣದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದು ಮತ ಮತಗಳ ಮಧ್ಯದಲ್ಲಿ ಅತೃಪ್ತ ವಾತಾವರಣ ಉಂಟಾಗುತ್ತಿದೆ. ಇಂತಹ ಅತೃಪ್ತ ವಾತಾವರಣವನ್ನು ಹೋಗಲಾಡಿಸಬೇಕಾದರೆ ಭಗವದ್ಗೀತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀಮದ್ ಮಜ್ಜಗದ್ಗುರು ಶಂರರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಸಂಸ್ಥಾನ ಮಠದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರಸರಸ್ವತಿ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಭೀಮಾಶಂಕರ ಮಠದಲ್ಲಿ ಶಿರಸಿಯ ಶ್ರೀ ಸರ್ವಜ್ಷೇಂದ್ರ ಸರಸ್ವತಿ ಪ್ರತಿಷ್ಠಾನದ ವತಿಯಿಂದ ಜರುಗಿದ ಸಿಂದಗಿ ಶ್ರೀ ಭಗವದ್ಗೀತಾ ಅಭಿಯಾನ ಹಾಗೂ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮದ ಆತ್ಮವೇ ಆಧ್ಯಾತ್ಮ. ಭಗವದ್ಗೀತೆ ಆಧ್ಯಾತ್ಮ ಆತ್ಮ. ಹಾಗಾಗಿಯೇ ಮೋದಿಜಿಯವರು ಹೊರ ದೇಶದ ನಾಯಕರುಗಳಿಗೆ ಭಗವದೀತೆಯ ಕೃತಿ ಅರ್ಪಣೆ ಮಾಡುವ ಪರಿಪಾಠ ಹಾಕಿಕೊಂಡಿದ್ದಾರೆ. ಇದರಿಂದಾಗಿ ವಿದೇಶಿಯರಿಗೂ ಭಗವದ್ಗೀತೆಯ ಮಹತ್ವ ಅರಿಯಲು ಸಹಾಯವಾಗುತ್ತದೆ. ಅಲ್ಲದೇ ಜಗತ್ತಿನ ಎಲ್ಲ ಭಾಷೆಗಳಲ್ಲಿ ಭಾಷಾಂತರಗೊಂಡ ಕೆಲವೇ ಗ್ರಂಥಗಳಲ್ಲಿ ಭಗವದ್ಗೀತೆ ಪ್ರಥಮ ಸಾಲಿನಲ್ಲಿ ನಿಲ್ಲುತ್ತದೆ. ಸಿಂದಗಿಯ ಭೀಮಾಶಂಕರ ಮಹಾರಾಜರು ೩೦೦ ವರ್ಷಗಳ ಹಿಂದೆಯೇ ಆದಿಲ್ ಶಾಹಿ ಕಾಲದಲ್ಲಿ ತಮ್ಮ ದಿವ್ಯ ಶಕ್ತಿಯ ತಪ್ಪಿಸಿನ ಮೂಲಕ ಪರಿಕಿಯರ…

Read More

ಚನ್ನಪಟ್ಟಣ ಉಪ ಚುನಾವಣೆ | ಯೋಗೇಶ್ವರ್ ಹರಕೆಯ ಕುರಿ | ನಿಖಿಲ್ ಗೆಲುವು ಸ್ಪಷ್ಟ | ಕಾರ್ಯಕರ್ತರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಬೆಂಗಳೂರು: ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಿ. ಪಿ. ಯೋಗೇಶ್ವರ್ ಹರಕೆಯ ಕುರಿಯಾಗಲಿದ್ದು, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಒಮ್ಮತದಿಂದ ಘೋಷಿಸಿದ್ದೇವೆ. ಜೆಡಿಎಸ್ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಕಾರ್ಯಕರ್ತರ ಸಭೆ ನಡೆಸಿದೆ. ಆದರೆ ಕಾಂಗ್ರೆಸ್ ತನ್ನ ಕಾರ್ಯಕರ್ತರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಸಿ.ಪಿ. ಯೋಗೇಶ್ವರ ಅವರನ್ನು ಆಯ್ಕೆ ಮಾಡಿದೆ. ಪಕ್ಷದ ಬಂಡಾಯವನ್ನು ಪರಿಹರಿಸುತ್ತೇನೆ ಎಂದು ಡಿಸಿಎ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.ಎಸ್‌ಸಿ/ಎಸ್‌ಟಿ…

Read More

ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ.ತೊಂಟದ ಸಿದ್ದರಾಮ ಮಹಾಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸದಾ ಶಿಕ್ಷಣಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ಕೊಟ್ಟವರು ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ.ತೊಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಊರಿನ ಹಿರಿಯಮಠದಲ್ಲಿ ಭಾವೈಕ್ಯತೆ ವೇದಿಕೆಯಲ್ಲಿ ಶುಕ್ರವಾರ ಗದಗ-ಡಂಬಳದ ನಿರಂಜನ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ೬ನೆಯ ಪುಣ್ಯ ಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಪ್ರೊ. ಬಿ.ಆರ್.ಪೊಲೀಸಪಾಟೀಲ ರಚಿತ ಉರಿಯ ಗದ್ದುಗೆ ಪುಸ್ತಕ ಲೋಕಾರ್ಪಣೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿ, ಲಿಂಗೈಕ್ಯೆ ಶ್ರೀಗಳು ಸಾಮಾನ್ಯರಲ್ಲೂ ಓದಿನ ಅಭಿರುಚಿ ಬೆಳೆಸಿದವರು. ಅನ್ನ, ಅಕ್ಷರ ಮತ್ತು ಪುಸ್ತಕ ದಾಸೋಹಿ ಮೂರ್ತಿಯಾಗಿ ನಿರಂತರ ಸಮಾಜ ಸೇವೆ ಮಾಡಿದವರು. ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಕಾಯಕಗಳನ್ನು ತಮ್ಮ ಬದುಕಿನುದ್ದಕ್ಕೂ ನಡೆಸಿಕೊಂಡು ಬಂದವರು.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಯಾವುದೇ ಕಾಲಕ್ಕೂ ನಿಲ್ಲಿಸುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರವನ್ನು ಸುಂದರಗೊಳಿಸಲು ಪಣತೊಟ್ಟಿರುವೆ. ಇದರಲ್ಲಿ ಯಾವುದೇ ಗೂಡಂಗಡಿಗಳನ್ನು ತೆರವುಗೊಳಿಸಲು ಯಾರಿಗೂ ಒತ್ತಾಯ ಮಾಡಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಆದರೆ ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಸಂತೋಷ ಪಾಟೀಲ್ ಅವರು ತಿಳುವಳಿಕೆ ಉಳ್ಳವರು, ಅವರ ಈ ರೀತಿಯ ವರ್ತನೆ ಸರಿಯಲ್ಲ. ಜಿಲ್ಲಾಧಿಕಾರಿಗಳು ತೆರವುಗೊಳಿಸಲು ಅನುಮತಿ ನೀಡಿಲ್ಲ ಎಂದು ಹೇಳುವ ಅವರು ಡಿಸಿ ಅವರು ತೆರವುಗೊಳಿಸಬಾರದೆಂದು ಹೇಳಿದ್ದು ಪುರಾವೆ ಏನಾದರೂ ಇದ್ದರೆ ತೋರಿಸಬೇಕು. ನಾನು ಜಿಲ್ಲಾಧಿಕಾರಿಗಳ ಬಳಿ ಪರವಾನಿಗೆ ಕೇಳಲು ಹೋದಾಗ ಸ್ಥಳೀಯವಾಗಿ ಅಭಿವೃದ್ಧಿಪರ ಚಟುವಟಿಕೆಗಳಿಗೆ ನಮ್ಮ ಅನುಮತಿ ಬೇಕಾಗಿಲ್ಲ, ಸ್ಥಳೀಯವಾಗಿ ಇಲ್ಲಿಯ ವ್ಯವಸ್ಥೆಯನ್ನು ಸುಧಾರಣೆ ಮಾಡಲು ನೀವು ಸ್ವನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎಂದರು.೨೦ವರ್ಷದಿಂದ ಬಸ್ ನಿಲ್ದಾಣದ ಎದುರಿರುವ ಚರಂಡಿ ತುಂಬಿಹೋಗಿತ್ತು. ಅದನ್ನು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೀಪಾವಳಿ ಹಬ್ಬ ಸನಿಹದಲ್ಲಿ ಅವರಿಗೆ ಒಂದು ಮಾತು ಕೇಳದೆ ಅವರ ಗೂಡಂಗಡಿಗಳನ್ನು ಏಕಾಏಕಿ ಜೆಸಿಬಿ ಹಚ್ಚಿ ತೆರವುಗೊಳಿಸುತ್ತಿರುವುದು ಖಂಡನೀಯ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಮಾಜಿ ಶಾಸಕ ರಮೇಶ ಭೂಸನೂರ ಆಗ್ರಹಿಸಿದರು.ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಬೀದಿಬದಿಯ ವ್ಯಾಪಾರಸ್ಥರ ಹಿತರಕ್ಷಣೆ ವೇದಿಕೆಯ ವತಿಯಿಂದ ಬೀದಿಬದಿ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರು ಗೂಡಂಗಡಿಗಳನ್ನು ತೆರವುಗೊಳಿದಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ತಹಶೀಲ್ದಾರ್ ಅವರು ಗೂಡಂಗಡಿಕಾರನ್ನು ಹಾಗೂ ಪುರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಂದು ಸಭೆಯನ್ನು ಮಾಡಿ ನ್ಯಾಯ ಒದಗಿಸಿ ಅವರ ನೋವುಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.ಈ ವೇಳೆ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಸರಿಯಲ್ಲ. ಈ ದುಸ್ಸಾಹಾಸಕ್ಕೆ ಇಳಿದ ಕಾಂಗ್ರೆಸ್ ಪಕ್ಷದ ನಡೆ ನಾಚಿಕೆಗೇಡು ಸಂಗತಿ ಎಂದು ಹರಿಹಾಯ್ದರು.ಪೀರು ಕೆರೂರ್, ಶಿವಕುಮಾರ ಬಿರಾದಾರ, ಕಾಶಿಮ್ ಬೇಕಿನಾಳ,ಈ ವೇಳೆ ಶ್ರೀಶೈಲ ಚಳ್ಳಗಿ, ಪೀರು ಕೆರೂರ ಹಾಗೂ…

Read More

ಮೇಳಾದಲ್ಲಾದ ಅಫಘಾತಕ್ಕೆ ಜಿಲ್ಲಾಡಳಿತ ಹೊಣೆ :ಭೀಮ್ ಸರ್ಕಾರ ಉದಯರಶ್ಮಿ ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಡಿಯಾ ಬಿಗ್ಗೇಷ್ಟ್ ಅಂಡರ್ ವಾಟರ್ ಫಿಶ್ ಟ್ಯುನಲ್ ಎಕ್ಸಪೊ ಎಕ್ಸಬೀಷನ್ ಕಂಪನಿ ನಡೆಸುವ ಮೇಳಾದಲ್ಲಿ ಆದ ಅಫಘಾತಕ್ಕೆ ಜಿಲ್ಲಾಡಳತವೇ ಹೊಣೆ ಎಂದು ಭೀಮ್ ಸರಕಾರ ಸಂಘಟನೆಯು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು,ಮನವಿಯಲ್ಲಿ ಮೇಳಾದಲ್ಲಿ ಅ.೨೦ ರವಿವಾರದಂದು ನಡೆದ ಅಪಘಾತದಲ್ಲಿ ಬಸವನ ಬಾಗೇವಾಡಿ ತಾಲೂಕಾ ಇಂಗಳೇಶ್ವರ ಗ್ರಾಮದ ಹಾಲಿ ವಸ್ತಿ ನಿಡಗುಂದಿ ಪಟ್ಟಣದ ನಿಖಿತಾ ಅರವಿಂದ ಬಿರಾದಾರ (೧೮) ಸಾವಿಗೀಡಾಗಿದ್ದು, ಜಿಲ್ಲಾಡಳಿತವೇ ನೇರ ಹೊಣೆಗಾರಿಯಾಗಿರುತ್ತದೆ. ಏಕೆಂದರೆ, ಇದಕ್ಕೆ ಅಧಿಕೃತವಾದ ಪರವಾನಿಗೆಯನ್ನು ಜಿಲ್ಲಾಡಳಿತ ನೀಡದಿರುವುದು, ಏಕೆಂದರೆ, ಈ ಸದರ ಕಂಪನಿ ನಡೆಸುವ ಮೇಳಾಕ್ಕೆ ಪೂರ್ವದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿರುವ ಕುರಿತು ನಮ್ಮ ಸಂಘಟನೆಯು ಲಿಖಿತ ಮನವಿ ಮೂಲಕ ಕೇಳಿಕೊಂಡಿತ್ತು, ನಿರಾಕ್ಷೇಪಣಾ ಪತ್ರ ಹಾಗೂ ಪರವಾನಿಗೆ ನೀಡಿದರ ಬಗ್ಗೆ ಅಧಿಕಾರಿಗಳು ನಮ್ಮ ಗಮನಕ್ಕೆ ತರದೆ ಇರುವದು ಸಂಶಯಕ್ಕೆ ಕಾರಣವಾಗಿದ್ದು, ಸದರ ಕಂಪನಿಯು ಅಧಿಕೃತ…

Read More