ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೀಪಾವಳಿ ಹಬ್ಬ ಸನಿಹದಲ್ಲಿ ಅವರಿಗೆ ಒಂದು ಮಾತು ಕೇಳದೆ ಅವರ ಗೂಡಂಗಡಿಗಳನ್ನು ಏಕಾಏಕಿ ಜೆಸಿಬಿ ಹಚ್ಚಿ ತೆರವುಗೊಳಿಸುತ್ತಿರುವುದು ಖಂಡನೀಯ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಮಾಜಿ ಶಾಸಕ ರಮೇಶ ಭೂಸನೂರ ಆಗ್ರಹಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಬೀದಿಬದಿಯ ವ್ಯಾಪಾರಸ್ಥರ ಹಿತರಕ್ಷಣೆ ವೇದಿಕೆಯ ವತಿಯಿಂದ ಬೀದಿಬದಿ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರು ಗೂಡಂಗಡಿಗಳನ್ನು ತೆರವುಗೊಳಿದಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ತಹಶೀಲ್ದಾರ್ ಅವರು ಗೂಡಂಗಡಿಕಾರನ್ನು ಹಾಗೂ ಪುರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಂದು ಸಭೆಯನ್ನು ಮಾಡಿ ನ್ಯಾಯ ಒದಗಿಸಿ ಅವರ ನೋವುಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಸರಿಯಲ್ಲ. ಈ ದುಸ್ಸಾಹಾಸಕ್ಕೆ ಇಳಿದ ಕಾಂಗ್ರೆಸ್ ಪಕ್ಷದ ನಡೆ ನಾಚಿಕೆಗೇಡು ಸಂಗತಿ ಎಂದು ಹರಿಹಾಯ್ದರು.
ಪೀರು ಕೆರೂರ್, ಶಿವಕುಮಾರ ಬಿರಾದಾರ, ಕಾಶಿಮ್ ಬೇಕಿನಾಳ,
ಈ ವೇಳೆ ಶ್ರೀಶೈಲ ಚಳ್ಳಗಿ, ಪೀರು ಕೆರೂರ ಹಾಗೂ ಶಿವಕುಮಾರ್ ಬಿರಾದಾರ ಮಾತನಾಡಿದರು.
ಶಿವಪುತ್ರ ಮಲ್ಲೇದ, ಸೋಮು ಕೊಪ್ಪ, ಸತೀಶ ದೇವರನಾವದಗಿ, ಪೈಜನ್ ಮಾಲಗಾಂವಕರ ದತ್ತು ನಾಲ್ಕಮಾನ, ಪ್ರಭು ಕಂಬಾರ, ಶಕೀಲ್ ವಾಲೀಕಾರ, ತಾರಾಬೀ ಗುಂದಗಿ, ಸಾಹೇರಾ ಗೋಳಸಾರ, ಬಿಸ್ಮೀಲ್ಲಾ ಭಾಗವಾನ್, ಅಂಜುಮಾ ಭಾಗವಾನ ಕಾಶೀಮ ಬೆಕಿನಾಳ ಸೇರಿದಂತೆ ಅನೇಕರಿದ್ದರು.
“ಬಡವರ ಅಂಗಡಿಗಳನ್ನು ತೆರವುಗೊಳಿಸುವುದು ಅನ್ಯಾಯ. ಒಂದು ವೇಳೆ ನೀವು ತೆರವು ಕಾರ್ಯಾಚರಣೆ ಮುಂದುವರಿದರೆ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ ಮಾಡಬೇಕಾತ್ತದೆ. ಕೂಡಲೇ ತೆರವು ಕಾರ್ಯಾಚರಣೆ ನಿಲ್ಲಿಸಬೇಕು.”
– ಸಂತೋಷ ಪಾಟೀಲ, ಡಂಬಳ
ಬಿಜೆಪಿ ಮಂಡಲ ಅಧ್ಯಕ್ಷರು, ಸಿಂದಗಿ

