Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಭವ್ಯ ಪಥಸಂಚಲನ ಆಕರ್ಷಣೀಯವಾಗಿತ್ತು.ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಕ್ರೀಡಾ ಮೈದಾನದಿಂದ ಶುರುವಾದ ಪಥಸಂಚಲನ ನ್ಯಾಯಾಲಯದ ಹಿಂದಿನ ಈಶ್ವರ ದೇವಸ್ಥಾನ, ಎಸ್‌ಬಿಐ ಬ್ಯಾಂಕ್ ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರ ಗಲ್ಲಿ, ಸರಾಫ್ ಬಜಾರ, ದ್ಯಾಮವ್ವ ದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಿಬಿಸಿ ಹೈಸ್ಕೂಲ್ ಮೈದಾನದವರೆಗೆ ಘೋಷದೊಂದಿದೆ ಸಂಘದ ಕಾರ್ಯರ್ತರು ಅತ್ಯಂತ ಶಿಸ್ತಿನಿಂದ ಭಗವಾಧ್ವಜಕ್ಕೆ ಗೌರವ ಸಲ್ಲಿಸುತ್ತ ಸಾಗಿದರು.ಹಿಂದೂ ಭಗಿನಿಯರು ಗಲ್ಲಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಪವಿತ್ರ ಭಗವಾಧ್ವಜಕ್ಕೆ ಗೌರವ ಸಲ್ಲಿಸಿದರೆ ಹಿಂದೂ ಬಾಂಧವರು ತಳಿರು ತೋರಣಗಳಿಂದ ರಸ್ತೆಗಳನ್ನು ಅಲಂಕರಿಸಿದ್ದರು. ಪಥಸಂಚಲನ ಗಲ್ಲಿಗಳಲ್ಲಿ ಆಗಮಿಸುತ್ತಿದ್ದಂತೆಗಣವೇಶಧಾರಿ ಸಂಘದ ಕಾರ್ಯಕರ್ತರಿಗೂ ಸೇರಿದಂತೆ ಭಗವಾಧ್ವಜಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಹಲವರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಅಡ್ವಾನ್ಸ್ ಡಿಪ್ಲೋಮಾ ಮತ್ತು ಸರ್ಟಿಫೀಕೇಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಇದೇ ಅಕ್ಟೋಬರ್ ೨೮ರಂದು ಬೆಳಿಗ್ಗೆ ೧೦.೩೦ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ತಿಳಿಸಿದ್ದಾರೆ.ಮಹಿಳಾ ವಿವಿಯ ವಿವಿಧ ಕೋರ್ಸ್ಗಳಿಗೆ ಈಗಾಗಲೇ ಯುಯುಸಿಎಂಎಸ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ದಿನಾಂಕ ೨೮ರಂದು ಅಗತ್ಯ ಮೂಲ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಿದ್ದು ಪ್ರವೇಶ ಪಡೆದುಕೊಳ್ಳಬಹುದಾಗಿದೆ. ದಿನಾಂಕ ೨೯ ರಂದು ಸೂಪರ್ ನ್ಯೂಮರಿ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದುಕೊಳ್ಳಬಹುದಾಗಿದ್ದು ದಿನಾಂಕ ೩೦ರಂದು ಸೆಲ್ಪ್ ಸಪೋರ್ಟಿಂಗ್ ಯೋಜನೆ ಅನ್ವಯ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಶಂಕರಗೌಡ ಸೋಮನಾಳ, ಕುಲಸಚಿವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರÀ- ೫೮೬೧೦೮. ದೂರವಾಣಿ ಸಂಖ್ಯೆ: ೦೮೩೫೨-೨೯೭೦೬೨, ೭೭೯೫೧೨೨೯೬೦, ೭೨೦೪೮೮೯೮೫೫ ಮತ್ತು ೯೯೦೧೮೨೭೬೯೬; ತಿebsiಣe: ತಿತಿತಿ.ಞsತಿu.ಚಿಛಿ.iಟಿ ಸಂಪರ್ಕಿಸಬಹುದಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಬಹುತೇಕ ರಸ್ತೆ ಹಾಗೂ ಫುಟ್ ಪಾತ್ ಗಳ ಮೇಲೆ ಅಕ್ರಮವಾಗಿ ನಿರ್ಮಿಸಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಅವರ ನೇತೃತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಮಾತನಾಡಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ವ್ಯಾಪಾರಸ್ಥರು ರಸ್ತೆ ಹಾಗೂ ಪುಟ್ ಪಾತ್ ಗಳನ್ನು ಆಕ್ರಮಿಸಿಕೊಂಡಿರುವ ಕಾರಣ ವಾಹನಗಳ ನಿಲುಗಡೆಗೆ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನಕೂಲ ಕಲ್ಪಿಸುವ ದೃಷ್ಟಿಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಈ ವೇಳೆ ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ, ಅಜರ್ ನಾಟಿಕಾರ್, ನಬಿರಸೂಲ್ ಉಸ್ತಾದ್, ಇಂದುಮತಿ ಮಣೂರ, ದಯಾನಂದ ಇವಣಿ ಸೇರಿದಂತೆ ಇನ್ನಿತರ ಸಿಬ್ಬಂದಿ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಸೌಂದರ್ಯೀಕರಣಕ್ಕೆ ಮುನ್ನುಡಿ ಬರೆದಿರುವ ಪುರಸಭೆ ಅಧ್ಯಕ್ಷರಿಗೂ ಸರ್ವ ಸದಸ್ಯರಿಗೂ, ಆಡಳಿತ ವರ್ಗಕ್ಕೂ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಗಳಿಗೂ ಸಿಂದಗಿ ಯೋಜನಾ ಅಭಿವೃದ್ಧಿ ಪ್ರಾಧಿಕಾರವು ಅಭಿನಂದಿಸುತ್ತದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ ತಿಳಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಕ್ರಮವಾಗಿ ನೆಲೆಯೂರಿದ ಗೂಡಂಗಡಿಗಳ ತೆರವುಗೊಳಿಸಿದ ಪುರಸಭೆ ಕಾರ್ಯ ಅತ್ಯಂತ ಯೋಗ್ಯವಾದ ನಿರ್ಣಯ. ವಿಜಯಪುರ ಜಿಲ್ಲೆಯಯಲ್ಲಿಯೇ ಶಿಕ್ಷಣ, ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿ ನಗರವೆಚಿದರೆ ಸಿಂದಗಿ. ಪಟ್ಟಣದ ರಸ್ತೆಗಳು ಅಕ್ರಮ ಒತ್ತುವರಿಯಿಂದ ನಗರ ಸೌಂದರ್ಯ ಮಾಸಿಹೊಗಿತ್ತು. ಅಭಿವೃದ್ಧಿ ಮತ್ತು ಸೌಂದರ್ಯದಿAದ ಹಿಂದುಳಿದಿತ್ತು. ಎಲ್ಲ ರಂಗಗಳಲ್ಲೂ ಮುಂದುವರೆದರು ಅಕ್ರಮ ಒತ್ತುವರಿಯ ಗೂಡಂಗಡಿಗಳ ಕಪ್ಪು ಚುಕ್ಕೆಯಾಗಿತ್ತು. ಆದರೆ ಈಗಿನ ಸಂದರ್ಭದಲ್ಲಿ ಮಾನ್ಯ ಪುರಸಭೆ ಅಧ್ಯಕ್ಷರು, ಸದಸ್ಯರು ಆಡಳಿತ ನಡೆಸಿದ ಕಾರ್ಯಾಚರಣೆಯ ಫಲದಿಂದ ರಸ್ತೆಗಳ ಅಗಲೀಕರಣಗೊಂಡು ಸುಂದರವಾದ ಫುಟ್ಪಾತ್ ಹಾಗೂ ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರಗಳು ನೆಡುವ ಮುಖಾಂತರ ಮಿನಿ ಬಸ್ ನಿಲ್ದಾಣಗಳು ಸ್ಥಾಪಿಸುವ ಸಲುವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ ಅನಧಿಕೃತವಾಗಿ ಬರೋಬ್ಬರಿ ೫೪ ಜನರನ್ನು ನೇರವಾಗಿ ನಮೂನೆ-೪ಬಿಯಲ್ಲಿ ಹೆಸರು ಸೇರ್ಪಡೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಸಂಬಂಧ ವಸತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಖ್ಯಾತಪ್ಪ ಎಂ.ಕುಂಬಾರ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಫಲಾನುಭವಿಗಳ ಬದಲಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೨(ಎ) ಸೇರ್ಪಡೆ ಮಾಡಿರುವ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಲಿಖಿತ ರೂಪದ ಹೇಳಿಕೆಗೆ ಯಾವುದೇ ರೀತಿಯ ಸೂಕ್ತ ದಾಖಲೆಗಳನ್ನು ಒದಗಿಸಿದ ಕಾರಣ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಮಾನತ್ತುಗೊಳಿಸಿದ್ದಾರೆ. ಪತ್ರಕರ್ತ ಶಿವಾನಂದ ಬಿ.ಆಲಮೇಲ ಅವರು ಈ ಪ್ರಕರಣದ ಕುರಿತು ದೂರು ಸಲ್ಲಿಸಿದ್ದರು. ಈ ಸಂಬಂಧ ಜಿಲ್ಲಾ ನಗರಾಭಿವೃದ್ಧಿ ಕೋಶದ ವಸತಿ ವಿಭಾಗದ ನಗರ ಮಟ್ಟದ ತಾಂತ್ರಿಕಕೋಶದ ತಜ್ಞರು ಸಿಂದಗಿ ಪುರಸಭೆಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ೨೦೨೧-೨೨ನೇ ಸಾಲಿಗೆ ಸಿಂದಗಿ ಪುರಸಭೆಗೆ ಹೆಚ್ಚುವರಿಯಾಗಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಸ್ತೆಯ ಮೇಲೆ ಅನಧಿಕೃತವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಳ್ಳುವ್ಯದರಿಂದ ನಗರ ಸೌಂದರ್ಯೀಕರಣಕ್ಕೂ ಮಾರಕ, ಸರಾಗ ಸಂಚಾರಕ್ಕೂ ಅಡ್ಡಿ. ಅಲ್ಲದೇ ಪುರಸಭೆಯ ಬೋಕ್ಕಸಕ್ಕೂ ಅಪಾರ ಹಾನಿಯಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರು ಅತಿಕ್ರಮಣದಿಂದ ತೆರವಾದ ಅಂಗಡಿಕಾರರಿಗೆ ಪರಿಹಾರ ಹಾಗೂ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈ ಹಿಂದೆ ತಾಲೂಕು ಸಾರ್ವಜನಿಕ ಕ್ರೀಡಾಂಗಣವನ್ನು ನಿರ್ಮಿಸುವಾಗ ಅಲ್ಲಿ ವಾಸವಿದ್ದ ಸಾಕಷ್ಟು ಬಡ ಕುಟುಂಬಗಳ ವಸತಿಗಳನ್ನು ತೆರವುಗೊಳಿಸಲಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಭಿವೃದ್ಧಿ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಲಿಲ್ಲ. ಆಗ ನೀವೆಷ್ಟು ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಹಾಗೂ ವಾಸಕ್ಕೆ ಸೂರುಗಳನ್ನು ಒದಗಿಸಿಕೊಟ್ಟಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರುಮಾಜಿ ಶಾಸಕರ ಕಳೆದ ೧೩ವರ್ಷಗಳ ಆಡಳಿತ ಅವಧಿಯಲ್ಲಿ ಮತಕ್ಷೇತ್ರದ್ಲಲಿ ಎಷ್ಟು ಅನುದಾನ ತಂದಿದ್ದಾರೆ, ಎಷ್ಟು ಅಭಿವೃದ್ಧಿ ಕಾರ್ಯಮಾಡಿದ್ದಾರೆ ಎನ್ನುವುದನ್ನು ಪುರಾವೆ ಸಹಿತ ಕೊಡಬೇಕು. ಈಗಿನ…

Read More

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ | ಒಟ್ಟು 44 ಕೋಟಿ ರೂ. ದಂಡ | ಶಾಸಕ ಸ್ಥಾನಕ್ಕೆ ಕುತ್ತು | ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಬೆಂಗಳೂರು: 2009-10ರ ಅವಧಿಯಲ್ಲಿ ಬೇಲೆಕೇರಿ ಬಂದರಿನಿಂದ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಮೊತ್ತದ ದಂಡವನ್ನು ವಿಧಿಸಿದೆ.ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಕಾರವಾರದ 58 ವರ್ಷದ ಶಾಸಕ ಮತ್ತು ಇತರ ಆರು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು.ಎರಡು ಬಾರಿ ಎಂಎಲ್ಎ ಆಗಿರುವ ಸೈಲ್ ಶಿಕ್ಷೆಗೆ ಗುರಿಯಾಗಿರುವುದರಿಂದ ವಿಧಾನಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಇದೆ.ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸೈಲ್ ಕಳ್ಳತನ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪದ ಮೇಲೆ ಶಿಕ್ಷೆಗೊಳಗಾದರು.ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312…

Read More

ತಪ್ಪು ಮಾಹಿತಿ ರವಾನೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಕ್ಫ್ ಆಸ್ತಿ ಇಂದಿಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಯಾವುದೇ ತಪ್ಪು ವದಂತಿಗಳಿಗೆ ರೈತರು-ಆಸ್ತಿ ಮಾಲೀಕರು ಕಿವಿಗೊಡದಂತೆ ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು ಯಾವುದೇ ವ್ಯಕ್ತಿಯ, ಖಾಸಗಿ ಆಸ್ತಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸ್ಪಷ್ಠನೆ ನೀಡಿದ್ದಾರೆ.೧೯೭೪ರಲ್ಲಿ ವಕ್ಫ್ ಮಂಡಳಿಯಿಂದ ಹೊರಡಿಸಿದ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಇರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಇಂದೀಕರಣಕ್ಕಾಗಿ ಪಟ್ಟಿ ಒದಗಿಸಲಾಗಿದ್ದು, ಇದರನ್ವಯ ಖಾತೆ ಬದಲಾವಣೆಗೆ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಸಾಮಾನ್ಯವಾಗಿ ಯಾವುದೇ ಒಂದು ಆಸ್ತಿಯ ಹಕ್ಕು ಬದಲಾವಣೆಯಲ್ಲಿ ಕೈಗೊಳ್ಳುವ ಕ್ರಮಗಳ ಪ್ರಕಾರವೇ ಈ ವಕ್ಪ್ ಆಸ್ತಿ ಇಂದೀಕರಣಕ್ಕಾಗಿ ಸಂಬಂಧಪಟ್ಟ ರೈತರು ಅಥವಾ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಆಸ್ತಿ ಮಾಲೀಕರು- ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಹೊಂದಿರುವುದಿಲ್ಲ. ಯಾವುದೇ ಖಾಸಗಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ೧೯೮೮-೮೯ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಪಟ್ಟಣದ ೧೦೦೮ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ(ಇಂದು) ಬೆಳಿಗ್ಗೆ ೧೧ ಘಂಟೆಗೆ ಜರುಗಲಿದೆ.ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ನಿವೃತ್ತ ಶಿಕ್ಷಕ ಪಿ.ಎಸ್.ಮಿಂಚನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಎಸ್.ಬಿ..ಮಿರ್ಜಿ ಉದ್ಘಾಟಕರಾಗಿ ಆಗಮಿಸಲಿದ್ದು, ನಿವೃತ್ತ ಶಿಕ್ಷಕರಾದ ಬಿ.ಜಿ.ಅರಳಿಮಟ್ಟಿ, ಬಿ.ಸಿ.ಹಿರೇಮಠ, ಅತಿಥಿಗಳಾಗಿ ವ್ಹಿ.ಎಂ.ಪಾಟೀಲ, ಗಿರೀಶ ಕುಲಕರ್ಣಿ, ಪಿ.ಸಿ.ತಳಕೇರಿ, ಮಾನಂದಾ ಕುಂಬಾರ ಹಾಗೂ ಸ್ನೇಹಿತರ ಬಳಗದ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸುಧೀರ ಈಳಗೇರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ದೇವರಹಿಪ್ಪರಗಿ ತಾಲ್ಲೂನಿಂದ ಶಿಕ್ಷಕರ ಕ್ಷೇತ್ರದಿಂದ ಸಿ.ಬಿ.ಗಡಗಿ ಹಾಗೂ ನಾಗೇಶ ನಾಗೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲ್ಲೂಕು ಶಿಕ್ಷಕರ ಸಂಘ ಹಾಗೂ ಐವರು ಹಿರಿಯ ಶಿಕ್ಷಕರ ಸಮಿತಿಯು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆಮಾಡಿತು. ಒಬ್ಬರಿಗೆ ಒಂದು ಹುದ್ದೆ ಎನ್ನುವ ಅಲಿಖಿತ ನಿಯಮದಂತೆ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ ಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಹುದ್ದೆ ಹಾಗೂ ನಿರ್ದೇಶಕ ಸ್ಥಾನಕ್ಕೆ ಸಿ.ಬಿ.ಗಡಗಿ ರಾಜೀನಾಮೆ ನೀಡಿದರು. ಅದರಂತೆ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ನಿರ್ದೇಶಕ ಸ್ಥಾನಕ್ಕೆ ನಾಗೇಶ ನಾಗೂರ ರಾಜೀನಾಮೆ ನೀಡಿ ನೌಕರರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆಗೆ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ ಸಹಕರಿಸುವುದರ ಜೊತೆಗೆ ಇಬ್ಬರು ಪದಾಧಿಕಾರಿಗಳು ನೀಡಿದ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದರು.ನಿವೃತ್ತ ಶಿಕ್ಷಕರಾದ ಪಿ.ಎಸ್.ಮಿಂಚನಾಳ, ಎಂ.ಎಚ್.ಪಟೇಲ, ಎಸ್.ಜಿ.ತಾವರಖೇಡ, ಕೆ.ಕೆ.ಭಾವಿಮನಿ, ಶಿಕ್ಷಕರಾದ ಎ.ವೈ.ನಾಯ್ಕೋಡಿ, ಪಿ.ಸಿ.ತಳಕೇರಿ, ದಾನು ರಾಠೋಡ, ಕೆ.ವ್ಹಿ.ಬಿರಾದಾರ, ರವೀಂದ್ರ ಕೋಟಿನ ಇದ್ದರು.

Read More