ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಭವ್ಯ ಪಥಸಂಚಲನ ಆಕರ್ಷಣೀಯವಾಗಿತ್ತು.
ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಕ್ರೀಡಾ ಮೈದಾನದಿಂದ ಶುರುವಾದ ಪಥಸಂಚಲನ ನ್ಯಾಯಾಲಯದ ಹಿಂದಿನ ಈಶ್ವರ ದೇವಸ್ಥಾನ, ಎಸ್‌ಬಿಐ ಬ್ಯಾಂಕ್ ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರ ಗಲ್ಲಿ, ಸರಾಫ್ ಬಜಾರ, ದ್ಯಾಮವ್ವ ದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಿಬಿಸಿ ಹೈಸ್ಕೂಲ್ ಮೈದಾನದವರೆಗೆ ಘೋಷದೊಂದಿದೆ ಸಂಘದ ಕಾರ್ಯರ್ತರು ಅತ್ಯಂತ ಶಿಸ್ತಿನಿಂದ ಭಗವಾಧ್ವಜಕ್ಕೆ ಗೌರವ ಸಲ್ಲಿಸುತ್ತ ಸಾಗಿದರು.
ಹಿಂದೂ ಭಗಿನಿಯರು ಗಲ್ಲಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಪವಿತ್ರ ಭಗವಾಧ್ವಜಕ್ಕೆ ಗೌರವ ಸಲ್ಲಿಸಿದರೆ ಹಿಂದೂ ಬಾಂಧವರು ತಳಿರು ತೋರಣಗಳಿಂದ ರಸ್ತೆಗಳನ್ನು ಅಲಂಕರಿಸಿದ್ದರು. ಪಥಸಂಚಲನ ಗಲ್ಲಿಗಳಲ್ಲಿ ಆಗಮಿಸುತ್ತಿದ್ದಂತೆ
ಗಣವೇಶಧಾರಿ ಸಂಘದ ಕಾರ್ಯಕರ್ತರಿಗೂ ಸೇರಿದಂತೆ ಭಗವಾಧ್ವಜಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಹಲವರು ತಮ್ಮ ಮಕ್ಕಳಿಗೆ ವೀರ ಪುರುಷರ ವೇಷ ತೊಡಿಸಿ ರಾಷ್ಟ್ರಪ್ರೇಮ ಮೆರೆಯುವ ಮೂಲಕ ಸ್ವಾಗತಿಸಿದರು. ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಳಿಕೋಟೆ ಪಿಎಸ್‌ಐ ರಾಮನಗೌಡ ಸಂಕನಾಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ವಹಿಸಿದ್ದರು.

