ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ದೇವರಹಿಪ್ಪರಗಿ ತಾಲ್ಲೂನಿಂದ ಶಿಕ್ಷಕರ ಕ್ಷೇತ್ರದಿಂದ ಸಿ.ಬಿ.ಗಡಗಿ ಹಾಗೂ ನಾಗೇಶ ನಾಗೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಶಿಕ್ಷಕರ ಸಂಘ ಹಾಗೂ ಐವರು ಹಿರಿಯ ಶಿಕ್ಷಕರ ಸಮಿತಿಯು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆಮಾಡಿತು. ಒಬ್ಬರಿಗೆ ಒಂದು ಹುದ್ದೆ ಎನ್ನುವ ಅಲಿಖಿತ ನಿಯಮದಂತೆ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ ಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಹುದ್ದೆ ಹಾಗೂ ನಿರ್ದೇಶಕ ಸ್ಥಾನಕ್ಕೆ ಸಿ.ಬಿ.ಗಡಗಿ ರಾಜೀನಾಮೆ ನೀಡಿದರು. ಅದರಂತೆ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ನಿರ್ದೇಶಕ ಸ್ಥಾನಕ್ಕೆ ನಾಗೇಶ ನಾಗೂರ ರಾಜೀನಾಮೆ ನೀಡಿ ನೌಕರರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆಗೆ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ ಸಹಕರಿಸುವುದರ ಜೊತೆಗೆ ಇಬ್ಬರು ಪದಾಧಿಕಾರಿಗಳು ನೀಡಿದ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದರು.
ನಿವೃತ್ತ ಶಿಕ್ಷಕರಾದ ಪಿ.ಎಸ್.ಮಿಂಚನಾಳ, ಎಂ.ಎಚ್.ಪಟೇಲ, ಎಸ್.ಜಿ.ತಾವರಖೇಡ, ಕೆ.ಕೆ.ಭಾವಿಮನಿ, ಶಿಕ್ಷಕರಾದ ಎ.ವೈ.ನಾಯ್ಕೋಡಿ, ಪಿ.ಸಿ.ತಳಕೇರಿ, ದಾನು ರಾಠೋಡ, ಕೆ.ವ್ಹಿ.ಬಿರಾದಾರ, ರವೀಂದ್ರ ಕೋಟಿನ ಇದ್ದರು.

