ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಸೌಂದರ್ಯೀಕರಣಕ್ಕೆ ಮುನ್ನುಡಿ ಬರೆದಿರುವ ಪುರಸಭೆ ಅಧ್ಯಕ್ಷರಿಗೂ ಸರ್ವ ಸದಸ್ಯರಿಗೂ, ಆಡಳಿತ ವರ್ಗಕ್ಕೂ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಗಳಿಗೂ ಸಿಂದಗಿ ಯೋಜನಾ ಅಭಿವೃದ್ಧಿ ಪ್ರಾಧಿಕಾರವು ಅಭಿನಂದಿಸುತ್ತದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಕ್ರಮವಾಗಿ ನೆಲೆಯೂರಿದ ಗೂಡಂಗಡಿಗಳ ತೆರವುಗೊಳಿಸಿದ ಪುರಸಭೆ ಕಾರ್ಯ ಅತ್ಯಂತ ಯೋಗ್ಯವಾದ ನಿರ್ಣಯ. ವಿಜಯಪುರ ಜಿಲ್ಲೆಯಯಲ್ಲಿಯೇ ಶಿಕ್ಷಣ, ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿ ನಗರವೆಚಿದರೆ ಸಿಂದಗಿ. ಪಟ್ಟಣದ ರಸ್ತೆಗಳು ಅಕ್ರಮ ಒತ್ತುವರಿಯಿಂದ ನಗರ ಸೌಂದರ್ಯ ಮಾಸಿಹೊಗಿತ್ತು. ಅಭಿವೃದ್ಧಿ ಮತ್ತು ಸೌಂದರ್ಯದಿAದ ಹಿಂದುಳಿದಿತ್ತು. ಎಲ್ಲ ರಂಗಗಳಲ್ಲೂ ಮುಂದುವರೆದರು ಅಕ್ರಮ ಒತ್ತುವರಿಯ ಗೂಡಂಗಡಿಗಳ ಕಪ್ಪು ಚುಕ್ಕೆಯಾಗಿತ್ತು.
ಆದರೆ ಈಗಿನ ಸಂದರ್ಭದಲ್ಲಿ ಮಾನ್ಯ ಪುರಸಭೆ ಅಧ್ಯಕ್ಷರು, ಸದಸ್ಯರು ಆಡಳಿತ ನಡೆಸಿದ ಕಾರ್ಯಾಚರಣೆಯ ಫಲದಿಂದ ರಸ್ತೆಗಳ ಅಗಲೀಕರಣಗೊಂಡು ಸುಂದರವಾದ ಫುಟ್ಪಾತ್ ಹಾಗೂ ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರಗಳು ನೆಡುವ ಮುಖಾಂತರ ಮಿನಿ ಬಸ್ ನಿಲ್ದಾಣಗಳು ಸ್ಥಾಪಿಸುವ ಸಲುವಾಗಿ ಇಟ್ಟ ಈ ದಿಟ್ಟ ಹೆಜ್ಜೆಯನ್ನು ನಗರ ಯೋಜನಾ ಪ್ರಾಧಿಕಾರ ವತಿಯಿಂದ ಸ್ವಾಗತಿಸುತ್ತೇನೆ. ಆದ್ದರಿಂದ ವ್ಯಾಪಾರಸ್ಥರಾರು ಧೃತಿಗೆಡಬೆಕಾಗಿಲ್ಲ. ಶಾಸಕ ಅಶೋಕ ಮನಗೂಳಿ ಅವರು ನಿಮ್ಮ ಜೊತೆ ಇದ್ದಾರೆ. ಮುಂಬರುವ ದಿನಮಾನಗಳಲ್ಲಿ ಸಿಂದಗಿ ನಗರದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡುವಂತಾ ಯೋಜನೆ ಇದೆ ಮತ್ತು ಪುರಸಭೆ ವ್ಯಾಪ್ತಿಯ ಸ್ಥಳಗಳಲ್ಲಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ವ್ಯಾಪಾರಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ ನಗರದ ಅಭಿವೃದ್ಧಿಯಲ್ಲಿ ಸಹಕಾರ ನೀಡಿ ತಾವು ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

