ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೧೯೮೮-೮೯ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಪಟ್ಟಣದ ೧೦೦೮ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ(ಇಂದು) ಬೆಳಿಗ್ಗೆ ೧೧ ಘಂಟೆಗೆ ಜರುಗಲಿದೆ.
ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ನಿವೃತ್ತ ಶಿಕ್ಷಕ ಪಿ.ಎಸ್.ಮಿಂಚನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಎಸ್.ಬಿ..ಮಿರ್ಜಿ ಉದ್ಘಾಟಕರಾಗಿ ಆಗಮಿಸಲಿದ್ದು, ನಿವೃತ್ತ ಶಿಕ್ಷಕರಾದ ಬಿ.ಜಿ.ಅರಳಿಮಟ್ಟಿ, ಬಿ.ಸಿ.ಹಿರೇಮಠ, ಅತಿಥಿಗಳಾಗಿ ವ್ಹಿ.ಎಂ.ಪಾಟೀಲ, ಗಿರೀಶ ಕುಲಕರ್ಣಿ, ಪಿ.ಸಿ.ತಳಕೇರಿ, ಮಾನಂದಾ ಕುಂಬಾರ ಹಾಗೂ ಸ್ನೇಹಿತರ ಬಳಗದ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸುಧೀರ ಈಳಗೇರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
