Author: editor.udayarashmi@gmail.com

ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಾಡಿಗೆ ಸರಳ ಬದುಕು ನಡೆಸುವುದು, ಪರೋಪಕಾರ, ಒಳ್ಳೆಯ ಕಾರ್ಯ ಮಾಡುವ ಕುರಿತು ಸರಳ ವಾಕ್ಯಗಳ ಮೂಲಕ ನಮಗೆ ನೀಡಿದ್ದಾರೆ. ಬಸವಾದಿ ಶರಣರ ವಚನಗಳಲ್ಲಿರುವ ತತ್ವಗಳನ್ನು ಅರಿತುಕೊಂಡು ಜೀವನವನ್ನು ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡ-ಜಿಡಗಾಮಠದ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಗಣೇಶ ನಗರದಲ್ಲಿರುವ ಯಲ್ಲಾಲಿಂಗ ಪುಣ್ಯಾಶ್ರಮದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸುಕ್ಷೇತ್ರ ಮುಗಳಖೋಡ-ಜಿಡಗಾಮಠದ ಪೂಜ್ಯರ ಪಾದಪೂಜೆ ಮತ್ತು ಬಸವನಬಾಗೇವಾಡಿಯ ಸದ್ಭಕ್ತರಿಂದ ತುಲಾಭಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತಿ ಪ್ರಾಧ್ಯಾನ್ಯತೆಯನ್ನು ೧೨ ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಭಕ್ತಿಯಿಂದ ಗುರು-ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ.ನಾಡಿನಲ್ಲಿ ಗುರುಪರಂಪರೆ, ಬಸವತತ್ವ ಬೆಳಗಬೇಕು. ಬಸವ ತತ್ವದಡಿಯಲ್ಲಿ ಮುಗಳಖೋಡ-ಜಿಡಗಾಮಠದ ಪರಂಪರೆ ನಡೆಯುತ್ತಿದೆ ಎಂದರು.ಒಂದೊಂದು ಸ್ಥಳವನ್ನು ನೆನಪಿಸಿಕೊಂಡರೆ ಅಲ್ಲಿನ ಮಹಾನ್ ಚೇತನರ ಸ್ಮರಣೆಯಾಗುತ್ತದೆ. ಬಸವನಬಾಗೇವಾಡಿಯ ನೆನಪಾದರೆ ಇಡೀ ವಿಶ್ವಕ್ಕೆ ಬೆಳಕಾಗಿರುವ ಬಸವೇಶ್ವರರು ನೆನಪಿಗೆ…

Read More

ಬಸವನಬಾಗೇವಾಡಿ: ಪಟ್ಟಣದ ಹಂಜಗಿ ಮಿಲ್ದಿಂದ ಜೈನಾಪುರ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಕೂಡುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಅನುದಾನದಡಿ ೨.೩೫ ಕಿಮೀ ದಿಂದ ೬ ಕಿಮೀ ರವರೆಗೆ ರಸ್ತೆಯ ಅಭಿವೃದ್ಧಿಗೆ ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ೨೦೨೩-೨೪ ನೇ ಸಾಲಿನ ೫೦೫೪ ಅಪೆಂಡಿಕ್ಸ್ ಇ ಯೋಜನೆಯಡಿ ಅಂದಾಜು ರೂ. ೨ ಕೋಟಿ ವೆಚ್ಚದಲ್ಲಿ ಪಟ್ಟಣದ ಹಂಜಗಿ ಮಿಲ್ದಿಂದ ಜೈನಾಪುರ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಕೂಡುವ ರಸ್ತೆಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಸವಜನ್ಮ ಸ್ಥಳ ಬಸವನಬಾಗೇವಾಡಿ ಪಟ್ಟಣಕ್ಕೆ ಯಾವುದೇ ದಿಕ್ಕಿನಿಂದಲೂ ಬರುವ ಹಾಗೇ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಮತಕ್ಷೇತ್ರದ ಎಲ್ಲ ಗ್ರಾಮಗಳ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ದಿಂಡವಾರ ಕ್ರಾಸ್ದಿಂದ ಬಸವನಬಾಗೇವಾಡಿ ಇರುವ ರಸ್ತೆಯನ್ನು ರೂ.೨೬ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮತಕ್ಷೇತ್ರದಲ್ಲಿ ಎಲ್ಲ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ…

Read More

ವಿಜಯಪುರ: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ಗೆ ೨೦೨೪ನೇ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.ಸಾರ್ವಜನಿಕ ಜೀವನದಲ್ಲಿ ಮಹಾತ್ಮಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ ೬೦ ವರ್ಷಗಳಾಗಿರುವ ವ್ಯಕ್ತಿಗಳು ಅಥವಾ ೨೫ ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗುವುದು. ೨೦೨೪ ರ ಅಕ್ಟೋಬರ್ ೦೨ ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.ಮಹಾತ್ಮಗಾಂಧೀಜಿಯವರು ಪ್ರಚುರಪಡಿಸಿದ ಜನಪರ ಕಾರ್ಯಕ್ರಮಗಳಾದ ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿ ವಸ್ತು ಬಳಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಾರ, ಈ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಅಥವಾ ಸಂಘ…

Read More

ವಿಜಯಪುರ: ಅಲ್ಪಸಂಖ್ಯಾತ ಸಮುದಾಯದ ೧ ರಿಂದ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ರಾಜ್ಯ ವಿದ್ಯಾರ್ಥಿವೇತನ ಪೊರ್ಟಲ್ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನಾಂಕವಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ಆನ್‌ಲೈನ್https://ssp.postmatric.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ವೆಬ್‌ಸೈಟ್ https://ssp.postmatric.karnataka.gov.inಹಾಗೂ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸೆ.೫ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ವಿಜಯಪುರ: ೨೦೨೪-೨೫ನೇ ಸಾಲಿನ ವಿಜಯಪುರ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್ ೫ರಂದು ನಗರದ ಕಂದಗಲ್ಲ ಶ್ರೀ ಹನಂತರಾಯ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮುದ್ದೇಬಿಹಾಳ ತಾಲೂಕಿನ ಎಲ್.ಪಿ.ಎಸ್ ಗಡಿಸೋಮನಾಳ ಎಲ್.ಟಿ-೧ ಶಾಲೆಯ ಸಹ ಶಿಕ್ಷಕ ಹುಲಿಗೆಪ್ಪ ಎಸ್, ವಿಜಯಪುರ ಜಲನಗರದ ಯು.ಬಿ.ಎಲ್.ಪಿ.ಎಸ್ ನಂ.೨೦ನೇ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಯಾಸ್ಮೀನಬಾನು ಜಿ ಇನಾಮದಾರ, ಬಸವನ ಬಾಗೇವಾಡಿ ತಾಲೂಕಿನ ದಿಂಡವಾರದ ಎಲ್.ಪಿ.ಎಸ್ ತಿಮ್ಮಾಪೂರ ಬಡಾವಣೆ ಶಾಲೆಯ ಮುಖ್ಯಗುರುಗಳಾದ ಮೈಹಿಬುಬ ನದಾಫ್, ಚಡಚಣ ತಾಲೂಕಿನ ಎಲ್.ಪಿ.ಎಸ್ ಹೊರ್ತಿ ಎಚ್.ಕೆ ಶಾಲೆಯ ಸಹ ಶಿಕ್ಷಕ ಸತೀಶ ಕುಲಕರ್ಣಿ,…

Read More

ವಿಜಯಪುರ: ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ : ೨೫-೦೯-೨೦೨೪ರೊಳಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:೦೮೩೫೨-೨೫೧೦೮೫, ಮೊಬೈಲ್ ೮೭೯೨೧೮೫೧೪೧ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂದ ಸಿಎಂ ಬೆಂಗಳೂರು: ಕಳೆದ ಶನಿವಾರ ನಗರದ ಪ್ಯಾಲೆಸ್ ಮೈದಾನದಲ್ಲಿ ಜಿಂದಾಲ್ ಕಂಪನಿಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿಧಾನಸಭೆ ವಿರೋಧ ಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, “ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ” ಎಂದು ಪದ ಬಳಕೆ ಮಾಡಿದ ನಂತರ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ‘ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಕೂಡಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅರವಿಂದ ಬೆಲ್ಲದ, “ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ ಎಂದು ವೇಗವಾಗಿ ಹೇಳಿರುತ್ತೇನೆ. ಆ ಸಂದರ್ಭದಲ್ಲಿ ಮಾತ್ರ ಬಳಸಿದ ಈ ಪದದ ಬಳಕೆಯು ನನಗೆ ಶೋಭೆ ತಂದಿರುವುದಿಲ್ಲ. ತಮಗೆ ನಾನು ಈ ಪತ್ರದ ಮುಖಾಂತರ ಕ್ಷಮೆಯಾಚಿಸುತ್ತಿದ್ದೇನೆ” ಎಂದು ಕೋರಿದ್ದಾರೆ.ಈ ಬಗ್ಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜಕೀಯದಲ್ಲಿ ಟೀಕೆ,…

Read More

ಕೊಲ್ಹಾರ: ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಿಂದ ಪುಕ್ಕಟೆಯಾಗಿ ನಿವೇಶನ ದೊರಕಿಸಿಕೊಂಡು ಕೊಲ್ಹಾರ ಪಟ್ಟಣದಲ್ಲಿ ನಿರ್ಮಿಸಿರುವ ಎರಡು ಬಸ್ ನಿಲ್ದಾಣಗಳು ಈಗಾಗಲೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಇಲಾಖೆಗೆ ಹಸ್ತಾಂತರಗೊಂಡು ಐದಾರು ವರ್ಷಗಳಾದರೂ KKRTC ಅವರು ತಾಲೂಕು ಕೇಂದ್ರದ ಸ್ಥಾನವನ್ನು ಹೊಂದಿದ ಕೊಲ್ಹಾರ ಬಸ್ ನಿಲ್ದಾಣಗಳ ದುಸ್ಥಿತಿಯ ಬಗ್ಗೆ ಯೋಚಿಸದಿರುವುದು ದುರ್ದೈವದ ಸಂಗತಿ.ವಿಶಾಲವಾದ ಜಾಗವನ್ನು ಹೊಂದಿರುವ ಬಸ್ ನಿಲ್ದಾಣದಲ್ಲಿ ವಾಹನಗಳು ಸುಲಭವಾಗಿ ಸಂಚರಿಸಲು ಆವರಣದ ತುಂಬಾ ಡಾಂಬರಿಕರಣ ಮಾಡದೆಯಿರುವುದರಿಂದ ತಗ್ಗು- ದಿನ್ನೆಗಳ ಆಗರವಾಗಿದೆ. ಇದರಿಂದ ಮಳೆ ನೀರು ತಗ್ಗು ಪ್ರದೇಶದಲ್ಲಿ ನಿಂತು ವಾಹನಗಳು ಬಂದರೆ ಪ್ರಯಾಣಿಕರಿಗೆ ನೀರು ಸಿಡಿಯುವದರಿಂದ ಚಾಲಕರ ಮತ್ತು ಪ್ರಯಾಣಿಕರ ಮದ್ಯ ಮಾತಿನ ಚಕಮಕಿ ಕೂಡ ನಡೆದಿದೆ.ಬಸ್ ನಿಲ್ದಾಣದ ಮುಂಭಾಗದ ರಸ್ತೆ ಮೇಲೆತ್ತರದಲ್ಲಿರುವುದರಿಂದ ಬಸ್ಸುಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ನೃತ್ಯ ಮಾಡುತ್ತ ಸಾಗುವಂತಾಗಿದೆರಾಜ್ಯದ ಪ್ರಭಾವಿ ಸಚಿವ ಶಿವಾನಂದ ಪಾಟೀಲರು ತಮ್ಮ ಮತಕ್ಷೇತ್ರದ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣಗಳ ದುಸ್ಥಿತಿ ಕುರಿತು ಗಮನ ಹರಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.ಕೊಲ್ಹಾರ ಪಟ್ಟಣದಿಂದ ನಿತ್ಯ…

Read More

ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಈ ಸಲ ಸುಮಾರು 65 ಸಾವಿರಕ್ಕಿಂತಲೂ ಅಧಿಕ ಹೊಸದಾಗಿ ಬಿಜೆಪಿ ಪಕ್ಷದ ಸದ್ಯಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.ಪಟ್ಟಣದ 12ಮತ್ತು 13ನೆ ವಾರ್ಡಿನ ಮದ್ಯಬಾಗದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಸದ್ಯಸ್ಯತ್ವ ನೊಂದಣಿ ಮಾಡುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಜ್ಯ ಮತ್ತು ರಾಷ್ಟ್ರ ನಾಯಕರ ಸೂಚನೆ ಮೇರೆಗೆ ಹಳೆ ಸದಸ್ಯರ ಜೊತೆ ಹೊಸ ಸದಸ್ಯರನ್ನು ನೊಂದಣಿ ಮಾಡುವ ಕೆಲಸದಲ್ಲಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸಲು ಸಿದ್ದರಾಗಿ ಮತ್ತೊಮ್ಮೆ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸದ್ಯಸ್ಯರನ್ನು ಹೊಂದಿದ ರಾಜಕೀಯ ಪಕ್ಷವಾಗಿ ಗುರುತಿಸುವಂತಾಗಲಿ ಎಂದು ಆಶಿಸಿದರು.ಪಕ್ಷದ ಜವಾಬ್ದಾರಿಯನ್ನು ಹೊಂದಿರುವ ಕಾರ್ಯಕರ್ತರು ಇನ್ನು ಕೆಲವು ದಿನಗಳಲ್ಲಿ ತಮಗೆ ಒಪ್ಪಿಸಿರುವ ಕಾರ್ಯ ಪೂರ್ಣಗೊಳಿಸಿ ಜಿಲ್ಹಾ ಕಛೇರಿ ಮೂಲಕ ರಾಜ್ಯ ಕಛೇರಿಗೆ ಬಸವನ ಬಾಗೇವಾಡಿ ಮಂಡಲದಲ್ಲಿ ಬಿಜೆಪಿ ಪಕ್ಷವು ಗಟ್ಟಿಯಾಗಿ ಕಾರ್ಯನಿರ್ವಸುತ್ತಿದೆ ಎನ್ನುವುದನ್ನು ಸಾಕ್ಷೀಕರಿಸಲು ಸನ್ನದ್ದರಾಗಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.ಈ ಸಂದರ್ಭದಲ್ಲಿ…

Read More

ಸಿಂದಗಿ: ಪ್ರತಿಯೊಬ್ಬ ನಾಗರಿಕರಿಗೂ ಎಚ್‌ಐವಿ ಸೋಂಕಿನ ಕುರಿತಾಗಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಐಸಿಟಿಸಿ ಆಪ್ತ ಸಮಾಲೋಚಕ ಎಂ.ಪಿ.ಸಾಗರ ಹೇಳಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರದಾನ ಹಾಗೂ ಹೆಚ್‌ಐವಿ ಕುರಿತಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು ಎಂದರೆ ಅದು ಎಚ್‌ಐವಿ. ಈ ಸೋಂಕನ್ನು ತಡೆಗಟ್ಟಲು ಸರಕಾರ ಹಲವಾರು ಯೋಜನೆ ಹಾಕಿಕೊಂಡಿದೆ. ಅದರಲ್ಲಿ ಎಚ್‌ಐವಿ ಸೋಂಕಿನ ಜಾಗೃತಿ ಕಾರ್ಯಕ್ರಮವು ಒಂದಾಗಿದೆ. ರೋಗವನ್ನು ಮರೆಯಬೇಕೆ ವಿನಃ ರೋಗಿಯನಲ್ಲ. ಸಮಾಜದಲ್ಲಿ ಇತರರಂತೆಯೇ ಎಚ್‌ಐವಿ ಸೋಂಕಿತರನ್ನು ಕಾಣಬೇಕು. ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಎಚ್‌ಐವಿ, ಟಿಬಿ ಸೇರಿದಂತೆ ವಿವಿಧ ಕಾಯಿಲೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಈ ವೇಳೆ ಡಾ.ವಿಜಯಮಹಾಂತೇಶ ಹಾಗೂ ನೇತ್ರಾಧಿಕಾರಿ ರಾಜಶೇಖರ ನರಗೋದಿ ಮಾತನಾಡಿ, ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರದಾನವೂ ಒಂದು. ಹುಟ್ಟಿನಿಂದಲೋ, ಅಪಘಾತದಿಂದಲೋ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ಮಾಡುವ…

Read More