ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಶಾಲೆ, ಕಾಲೇಜು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್
ಕನ್ನಡ ರಾಜ್ಯೋತ್ಸವದ ನಿಮಿತ್ತ ನಾಡದೇವಿಯ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿಸಲಾಯಿತು.
ಮೊಹರೆ ಹಣಮಂತ್ರಾಯ ವೃತ್ತದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪ ತಲುಪಿತು. ನಾಡದೇವಿಯ ಭಾವಚಿತ್ರದೊಂದಿಗೆ ಮಕ್ಕಳು ಧರಿಸಿದ್ದ ವೇಷಭೂಷಣಗಳು ಜನತೆಯ ಗಮನ ಸೆಳೆದವು.
ನಂತರ ಜರುಗಿದ ಕಾರ್ಯಕ್ರಮಕ್ಕೆ ತಹಶೀಲ್ದಾರ ಪ್ರಕಾಶ ಸಿಂದಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಕೆ.ಬಿರಾದಾರ, ವಿಜಯಲಕ್ಷ್ಮಿ ನವಲಿ, ರಹಿಮಾನ್ ಕಣಕಾಲ, ಶಿವರಾಜ ತಳವಾರ, ಅರುಣ ಕೋರವಾರ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ತಾಲ್ಲೂಕು ನಿವೃತ್ತ ನೌಕರರ ಸಂಘ
ಕನ್ನಡ ರಾಜ್ಯೋತ್ಸವ ಅಂಗವಾಗಿ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಕೆ.ಕುದರಿ, ಎಸ್.ವ್ಹಿ.ಆಲಾಳಮಠ, ಪಿ.ಜಿ.ಹಿರೇಮಠ, ಎಂ.ಆರ್.ಶಿರಸಂಗಿಮಠ, ಬಸವರಾಜ ಬಬಲೇಶ್ವರ, ಬಿ.ಎಸ್.ಉತ್ನಾಳ, ಎಸ್.ಎನ್.ಬಸವರೆಡ್ಡಿ, ಕೆ.ಕೆ.ಭಾವಿಮನಿ ಹಾಗೂ ಇತರರು ಇದ್ದರು.
ಸಿದ್ಧೇಶ್ವರ ಸ್ವಾಮೀಜಿ ಕಾಲೇಜು
ಕಾಲೇಜು ಆವರಣದಲ್ಲಿ ಯೋಗ ಹಾಗೂ ಆಧ್ಯಾತ್ಮಿಕ ಗುರು ನಿರಂಜನ ಸ್ವಾಮೀಜಿ ನಾಡದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಕಾಲೇಜು ಸಂಸ್ಥಾಪಕ ವಿ.ಕೆ.ಪಾಟೀಲ, ಎಂ.ಆರ್.ಮಠ, ಕಾಶೀನಾಥ ಯಂಭತ್ನಾಳ, ಮಹಾಂತೇಶ ಬೀಳಗಿಮಠ, ಆನಂದ ಎ.ಕೆ. ಎಮ್.ಎಸ್.ಪಾಟೀಲ, ವಿನೋದ ಉತ್ನಾಳ ಸಹಿತ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು
ಚಿಕ್ಕರೂಗಿ ಕರ್ನಾಟಕ ರಕ್ಷಣಾ ವೇದಿಕೆ ವೃತ್ತ
ಗ್ರಾಮದ ಕ.ರ.ವೇ ವೃತ್ತದಲ್ಲಿ ನಾಡಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ, ಗ್ರಾಮ ಘಟಕದ ಅಧ್ಯಕ್ಷ ಜಾವೀದ್ ಕೊಲ್ಹಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ರತ್ನಾಕರ, ರವಿ ಬಿರಾದಾರ, ಅಶೋಕ ಚಂಡಕಿ, ವ್ಹಿ.ಕೆ.ಕುಲಕರ್ಣಿ ಸಹಿತ ಗ್ರಾಮಸ್ಥರು ಭಾಗವಹಿಸಿದ್ದರು.

