Author: editor.udayarashmi@gmail.com

ನೂತನ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ರಾಜಣ್ಣ ನಾರಾಯಣಕರ ಅವಿರೋಧ ಆಯ್ಕೆ | ಸಿಂದಗಿ: ತೀವ್ರ ಕುತೂಹಲ ಕೆರಳಿದ್ದ ಸಿಂದಗಿ ಪುರಸಭೆಯ ಎರಡನೆಯ ಅವಧಿಗೆ ಒಟ್ಟು ೨೩ ಸದಸ್ಯರಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ಜರುಗಿತು. ಪುರಸಭೆಯ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ೧೪ನೇ ವಾರ್ಡ್ ಸದಸ್ಯ ಶಾಂತವೀರ ಸಿದ್ದಪ್ಪ ಬಿರಾದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮತ್ತು ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ೧೮ನೇ ವಾರ್ಡ್ ಸದಸ್ಯ ರಾಜಣ್ಣ ಧರ್ಮಣ್ಣ ನಾರಾಯಣಕರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು ೨೩ ಜನ ಸದಸ್ಯರು ಅದರಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಜನ ಸದಸ್ಯರು ಮಾತ್ರ ಹಾಜರಿದ್ದು, ೫ ಜನ ಸದಸ್ಯರು ಗೈರಾಗಿದ್ದರು. ಕೋರಂ ಭರ್ತಿಗೆ ೯ ಜನ ಸದಸ್ಯರು ಇರಬೇಕು ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಸದಸ್ಯರಿರುವ ಕಾರಣ ಚುನಾವಣೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ…

Read More

ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿದ ಸಂಸದ ರಮೇಶ ಜಿಗಜಿಣಗಿ ಮಾಹಿತಿ ಇಂಡಿ: ನಾನು ಪ್ರಚಾರಪ್ರೀಯನಲ್ಲ. ಸದ್ದಿಲ್ಲದೆ ಅಭಿವೃಧ್ಧಿ ಕೆಲಸ ಮಾಡಿ ಮುಗಿಸಿ ತೃಪ್ತಿಪಡುವುದು ನನ್ನ ಸ್ವಭಾವವಾಗಿದೆ. ಕಳೆದ ೧೦ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ೧ ಲಕ್ಷ ೧೦ ಸಾವಿರ ಕೋಟಿ ರೂ, ಗಳ ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಸೋಮವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ೯೮೪ ಕೋಟಿ ರೂ, ಗಳ ೫೪೮-ಬಿ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ನನ್ನ ೫೦ ವರ್ಷಗಳ ರಾಜಕೀಯ ಜೀವನಕ್ಕೆ ಇಂಡಿ ಜನತೆ ಜೀವ ತುಂಬಿದ್ದಾರೆ. ಅವರ ಋಣ ಮುಟ್ಟಿಸುವದಕ್ಕಾಗಿ ನನ್ನ ಜೀವ ಒತ್ತೇ ಇಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.ಇಂಡಿ ಕಾಲುವೆಯ ರಿಪೇರಿಗಾಗಿ ೨೭೦೦ ಕೋಟಿ ರೂ, ಗಳ ಅನುದಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.ಇಂದು ಭೂಮಿಪೂಜೆ ನಡೆದ ಈ ೯೮೪ ಕೋಟಿ ರೂ, ಗಳ…

Read More

ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ಇಂಡಿ: ಪಟ್ಟಣದ ಸ್ಟ್ರೀಟ್ ಲೈಟ್, ಯಜೆಡಿ, ಟ್ರಾಫಿಕ್, ಅರ್ಹ ಪಡಿತರ ಚೀಟಿ ಯೋಜನೆ, ಗ್ರಾಮೀಣ ಭಾಗದ ಕೆಟ್ಟ ರಸ್ತೆಗಳು, ಸರಕಾರಿ ಶಾಲೆಗಳ ಕಟ್ಟಡ ಸೋರಿಕೆ ಮತ್ತು ದುರಸ್ತಿ ಹಾಗೂ ತಾಲ್ಲೂಕಿನಲ್ಲಿ ಸಂಚರಿಸುವ ಸರಕಾರಿ ಬಸ್ಸುಗಳ ಸ್ಥಿತಿಗತಿ, ಅಕಾಲಿಕ ಮಳೆಯಿಂದ ಹಾನಿಯಾದ ಕೃಷಿ ತೋಟಗಾರಿಕೆ ಹಾಗೂ ಗ್ಯಾರೆಂಟಿ ಯೋಜನೆ ಸೇರಿದಂತೆ ಆಲಿಸಿ, ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಖಡಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಅಲ್ಲದೆ ರೈತರ ಆತ್ಮಹತ್ಯ, ಜಾನುವಾರುಗಳ ಮರಣ ಪ್ರಕರಣಗಳಿಗೆ ೧೫ ದಿನದಲ್ಲಿ ಪರಿಹಾರ ನೀಡಬೇಕು. ಆರು ತಿಂಗಳುಗಳ ಕಾಲ ಪರಿಹಾರ ನೀಡದಿದ್ದರೆ ಆ ಕುಟುಂಬದ ಪಾಡೇನಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.ತಾಲೂಕಿನಲ್ಲಿ ೭೧೮೭೬ ಮಹಿಳೆಯರು ಪ್ರತಿ ತಿಂಗಳು ರೂ ೨೦೦೦ ಹಣ ಪಡೆಯುತ್ತಿದ್ದು ಪ್ರತಿ ತಿಂಗಳು ಆ ಹಣ ಒಟ್ಟು ೧೪ ಕೋಟಿ ವಿತರಣೆಯಾಗುತ್ತಿದ್ದು ಈ…

Read More

ದೇವರಹಿಪ್ಪರಗಿ: ಕೋರವಾರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆಯಿಂದ ಸಾರ್ವಜನಿಕರು ಬೇಸತ್ತಿದ್ದು, ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಆದರೂ ನೀಡಿ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.ಸೋಮವಾರ ಕೋರವಾರ ಗ್ರಾಮದ ಹೆಸ್ಕಾಂ ಕಚೇರಿಗೆ ಆಗಮಿಸಿದ ನೂರಾರು ರೈತರು ಹೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಹಲವಾರು ದಿನಗಳಿಂದ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ಸಾಕಾಗಿ ಹೋಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಹಿಟ್ಟಿನ ಗಿರಣಿ ಸೇರಿದಂತೆ ಗುಡಿಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನಕ್ಕೆ ನೂರಾರು ಸಲ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಮನೆಯಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಹೋಗುತ್ತಿವೆ. ಇನ್ನು ಜಮೀನುಗಳಲ್ಲಿ ನೀರು ಹರಿಸಲು ಸಹ ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಮರಗುವಂತಾಗಿದೆ. ಹಲವಾರು ಬಾರಿ ಮನವಿ ಮಾಡಿದರೂ ಕೇವಲ ಹಾರಿಕೆ…

Read More

ಇಲ್ಲಿನ ಗಜಾನನ ಮಹಾಮಂಡಳಿಗೆ ಇಸ್ಲಾಂ ಧರ್ಮದ ಮಹಿಬೂಬ ಮಸಳಿ ಅಧ್ಯಕ್ಷರು! – ಗುರು ಹಿರೇಮಠ (ದೇವನಗಾಂವ)ಆಲಮೇಲ: ಪಟ್ಟಣದ ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ದತೆ ಭರ್ಜರಿಯಾಗಿ ನಡೆದಿದೆ.ಪುಣೆ ಮಾದರಿ, ಮೈಸೂರಿನ ದಸರಾ ಮಾದರಿಯಲ್ಲಿ ಭವ್ಯ ಮೆರವಣಿಗೆ, ಅಬ್ಬರದ ಡಿಜೆ ಸೌಂಡಗಳ ಸದ್ದು ಜೋರಾಗಲಿದೆ. ಕೋಲಾಟ ಝಾಂಜ್‌ಪತಾಕ ಹಲಗೆ ಮೇಳ, ಕೊಂಬು ವಾದನ ಹತ್ತಾರು ಜಾನಪದ ತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಲು ಅಣಿಯಾಗುತ್ತಿವೆ.ಇಲ್ಲಿಯ ಗಣೆಶ ವಿಸರ್ಜನೆ ಪ್ರಸಿದ್ದಿ ಪಡೆದಿದೆ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪದೇಶ, ರಾಜ್ಯದ ಕಲಬುರಗಿ ಬಾಗಲಕೋಟೆ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಮತ್ತು ಸುತ್ತ-ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಗಣೇಶೋತ್ಸವ ನೋಡಲು ಜನರು ಆಗಮಿಸುತ್ತಾರೆ. ಈಗಾಗಲೇ ಗಣೇಶ ವಿಸರ್ಜನೆಗೆ ಸಿದ್ದತೆಗಳು ನಡೆಯುತ್ತಿವೆ.ಇದೇ ಬುಧವಾರ ೫ನೇ ದಿನದ ಗಣಪತಿ ವಿಸರ್ಜನೆ ನಡೆಯುವುದರಿಂದ ಆಲಮೇಲದ ಅನೇಕ ಚೌಕ್ ದಿಂದ ಸ್ತಬ್ದ ಚಿತ್ರಗಳು ತಯಾರಿಯಾಗುತ್ತಿವೆ. ಸಂಜೆ ಹೊತ್ತಿಗೆ ಮೇರವಣಿಗೆ ಪ್ರಾರಂಭವಾಗಲಿದೆ.ಪಟ್ಟಣದ ೧೫ ಗಣೇಶ ಮಂಡಳಿಗಳಿಗೆ ಒಂದು ಗಜಾನನ ಮಹಾಮಂಡಳ ರಚನೆಯಾಗುತ್ತದೆ. ಈ…

Read More

ವಿವಿಧ ಬೇಡಿಕೆಗಳ ಈಡೇರಿಕೆಗೆ ಟಿಪಿಜೆಪಿ ಪದಾಧಿಕಾರಿಗಳ ಧರಣಿ ಸತ್ಯಾಗ್ರಹ ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ ೯ನೇ ದಿನಕ್ಕೆ ಕಾಲಿಟ್ಟಿದೆ.ಈ ಸಂದರ್ಭದಲ್ಲಿ ಟಿಪಿಜೆಪಿ ಸಂಘಟನೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ ಮಾತನಾಡಿ, ಪಿಎಸಿಎಲ್, ಘರೀಮಾ, ಸಾಯಿ ಪ್ರಸಾದ, ಅಗ್ರಿ ಗೋಲ್ಡ್, ಸಮೃದ್ಧಿ ಜೀವನ, ೭ ಹಿಲ್ಸ್ , ಮೈತ್ರಿ, ಪ್ಯಾನ್ ಕಾರ್ಡ್ ಕ್ಲಬ್ಸ್ , ಹಿಂದೂಸ್ತಾನ ಇನ್ಪಾಟೆಕ್ಷರ್ ಲಿಮಿಟೆಡ್, ಪ್ಯೂಚರ್ ಮೇಕರ್ ಚಿಟ್ ಪಂಡ್ ಕಂಪನಿಗಳು ಸೇರಿದಂತೆ ಏಕಕಾಲದಲ್ಲಿ ೨೦೧೪ ರಲ್ಲಿ ಕೇಂದ್ರ ಸರ್ಕಾರ ಬಂದ್‌ಗೊಳಿಸಿದೆ. ಆದರೂ ಕಳೆದ ೧೦ ವರ್ಷ ಗತಿಸಿದರೂ, ಗ್ರಾಹಕರಿಗೆ ಹಣ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸಾಕಷ್ಟು ಕಂಪನಿಗಳ ಮಾಲಿಕರು ಸಾಕಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಮಾಲಿಕರ ಆಸ್ತಿಗಳನ್ನು ಮುಟ್ಟುಗೋಲನ್ನು ಹಾಕಿಕೊಂಡು ಗ್ರಾಹಕರಿಗೆ ಹಣ ಮರಳಿಸಿ ನ್ಯಾಯ ಒದಗಿಸಿಕೊಡಬೇಕು. ಕೇಂದ್ರ ಸರ್ಕಾರ ಬಡ್ಸ್ ಆ್ಯಕ್ಟ್…

Read More

ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ೨೦೧೭ನೇ ಸಾಲಿನಿಂದ ೨೦೨೩ನೇ ಸಾಲಿನವರೆಗೆ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರು / ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ನೀಡಲು ೨೦೦೧ರಲ್ಲಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತು. ಅದರಂತೆ ೨೦೦೧ರಿಂದ ೨೦೧೬ರ ವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಹ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.೨೦೧೭ನೇ ಸಾಲಿನಿಂದ ೨೦೨೩ನೇ ಸಾಲಿನವರೆಗೆ ಅರ್ಹ ಪತ್ರಕರ್ತರಿಗೆ ಈ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.ಪರಿಸರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿರುವ ಹಾಗೂ ಪತ್ರಿಕೋದ್ಯಮದಲ್ಲಿ ಕನಿಷ್ಠ ೧೦ ವರ್ಷಗಳ…

Read More

ಜಯ ಕರ್ನಾಟಕ ಸಂಘಟನೆ ಆಗ್ರಹ | ಜಿಲ್ಲಾಧಿಕಾರಿಗೆ ಮನವಿ ವಿಜಯಪುರ: ನಗರದ ಅಭಿವೃದ್ದಿ ಹಾಗೂ ನಾಮಕರಣ ಮಾಡುವ ಬಗ್ಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನಗರವು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಲಿದ್ದು, ಜಿಲ್ಲೆಯು ಬಸವೇಶ್ವರರು ಜನಿಸಿದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ನಡದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ನಡೆದಾಡಿದ ನಾಡಾಗಿದೆ. ಈ ಎಲ್ಲ ದೃಷ್ಟಿಕೋನದಿಂದ ವಿಜಯಪುರ ನಗರದ ಅಭಿವೃದ್ದಿ ಹಾಗೂ ನಗರದ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರು ಮರುನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಮಹಾತ್ಮಾ ಬಸವೇಶ್ವರರ ಹೆಸರು ನಾಮಕರಣ ಮಾಡುವಂತಾಗಬೇಕು. ಮಹಾತ್ಮಗಾಂಧಿ ವೃತ್ತವನ್ನು ನವೀಕರಣಗೊಳಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಕಿತ್ತೂರ ರಾಣಿ ಚೆನ್ನಮ್ಮ ರಂಗಮಂದಿರವನ್ನು ಪುನಃ ಪ್ರಾರಂಭವಿಸಿ ಕಲಾವಿದರಿಗೆ ಅವಕಾಶ ಹಾಗೂ ನಾಟಕ ಪ್ರದರ್ಶನಗೊಳಿಸುವಂತೆ ಮಾಡಲು ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಮಾದರಿ ಜಿಲ್ಲೆಯನ್ನಾಗಿ ಮಾಡುವಂತಾಗಬೇಕು. ಹಾಗೂ ಈ ಅಭಿವೃದ್ದಿ ಕಾಮಗಾರಿಗಳನ್ನು ಒಂದು ತಿಂಗಳ ಒಳಗಡೆ ಕೈಗೊಳ್ಳಬೇಕು. ಕೈಗೊಳ್ಳದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ…

Read More

ವಿಜಯಪುರ: ಪಿಎಂಕಿಸಾನ್ ಯೋಜನೆಯಡಿ ನೋಂದಾಯಿತ ರೈತರು ಯೋಜನೆಯ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಈಗಾಗಲೇ ಜಿಲ್ಲೆಯ ನೋಂದಾಯಿತ ೨೪೮೬೯೪ ಅರ್ಹ ರೈತರ ಪೈಕಿ ೨೨೮೯೩೩ ರೈತರು ಇ-ಕೆವೈಸಿ ಮಾಡಿಸಿಕೊಂಡಿದ್ದು, ಉಳಿದ ೧೯೭೬೧ ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.ಇ-ಕೆವೈಸಿ ಮಾಡಿಸಿಕೊಳ್ಳದ ನೋಂದಾಯಿತ ರೈತರಿಗೆ ಮುಂದಿನ ಕಂತಿನ ಹಣ ಬಿಡುಗಡೆಯಾಗುವುದಿಲ್ಲ. ಇಕೆವೈಸಿ ಬಾಕಿ ಇರುವ ನೋಂದಾಯಿತ ರೈತರು ತಮ್ಮ ಗ್ರಾಮಕ್ಕೆ ಈಗಾಗಲೇ ನೇಮಿಸಲಾದ ಗ್ರಾಮ ಮಟ್ಟದ ನೋಡಲ್ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಇ-ಕೆವೈಸಿ ಮಾಡಿಕೊಳ್ಳಬೇಕು. ಒಂದೇ ಕುಟುಂಬ ಸದಸ್ಯರೆ ಎಂಬುದನ್ನು ಪರಿಶೀಲಿಸಿ ಅರ್ಹ – ಅನರ್ಹರೆಂದು ಘೋಷಿಸಬೇಕಾಗಿರುವ ೩೧೧೪೮ ಪ್ರಕರಣಗಳು ಬಾಕಿ ಇದ್ದು, ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇಬ್ಬರು ಸದಸ್ಯರು ಖುದ್ದಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಘೋಷಣೆಯನ್ನು ಸಲ್ಲಿಸಬೇಕು. ಘೋಷಣೆ ಸಲ್ಲಿಸದೇ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಮುಂದಿನ…

Read More

ವಿಜಯಪುರ: ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ ಕಾಂಬೋ ಹಾರ್ವೆಸ್ಟರ್ ಹಬ್ ಹಾಗೂ ಕಂಬೈನ್ಡ್ ಹಾರ್ವೆಸ್ಟರ್ ಹಬ್ಗಳನ್ನು ಸಹಾಯಧನದಡಿ ವಿತರಿಸಲು ಕೃಷಿ ಯಂತ್ರಧಾರೆ ಕೇಂದ್ರಗಳೊಂದಿಗೆ ಇತರೆ ಸಂಘ ಸಂಸ್ಥೆಗಳು (ಎಫ್‌ಪಿಓ ಗಳನ್ನೊಳಗೊಂಡಂತೆ) ಹಾಗೂ ವೈಯಕ್ತಿಕ ಫಲಾನುಭವಿಗಳಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಕೃಷಿ ಯಂತ್ರಧಾರೆ ಕೇಂದ್ರಗಳೊಂದಿಗೆ ಇತರೆ ಸಂಘ ಸಂಸ್ಥೆಗಳಿಗೆ (ಎಫ್‌ಪಿಓ ಗಳನ್ನೊಳಗೊಂಡಂತೆ) ಒಂದು ಕಾಂಬೋ ಹಾರ್ವೆಸ್ಟರ್ ಹಬ್ ಹಾಗೂ ಒಂದು ಕಂಬೈನ್ಡ್ ಹಾರ್ವೆಸ್ಟರ್ ಹಬ್ಗಳನ್ನು ಸಹಾಯಧನದಡಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಯಂತ್ರೋಪಕರಣಗಳನ್ನು ಖರೀದಿಸಲು ಸಹಾಯಧನವನ್ನು ಆದ್ಯತೆ ಹಾಗೂ ಅನುದಾನ ಲಭ್ಯತೆ ಮೇರೆಗೆ ವಿತರಿಸಲಾಗುವುದು.ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More