ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂಗವಿಕಲ ನೌಕರರ ವಿವಿಧ ಬೇಡಿಕೆ ಈಡೆರಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಅಂಗವಿಕಲ ನೌಕರ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮಾತನಾಡಿ, ರಾಜ್ಯದ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ. 6ರಷ್ಟು (ರಾಜ್ಯ ಸರ್ಕಾರಿ ಅಂಗವಿಕಲ ನೌಕರರಿಗೆ) ಪ್ರಯಾಣ ಭತ್ಯೆಯ ಆದೇಶವನ್ನು ಸರ್ಕಾರವು ಕೂಡಲೇ ಹೊರಡಿಸುವುದು. ಅಂಗವಿಕಲ ಸರ್ಕಾರಿ ನೌಕರರಿಗೆ ವೇತನ ಆಯೋಗ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವುದು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಅಂಗವಿಕಲ ನೌಕರರಿಗೆ ಕೇಂದ್ರ ಸರ್ಕಾರವು ಡಿಸೆಂಬರ್ 28, 2023ರಂದು ಎ, ಬಿ, ಸಿ, ಮತ್ತು ಡಿ ವೃಂದದ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕ ಸರ್ಕಾರವು ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಮಾತ್ರ ಬಡ್ತಿಯಲ್ಲಿ ಮೀಸಲಾತಿ ನೀಡಿರುತ್ತದೆ. ಅದೇ ರೀತಿಯಾಗಿ ಎ ಮತ್ತು ಬಿ ವೃಂದದ ಹುದ್ದೆಗಳಿಗೂ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿ ಶೀಘ್ರವಾಗಿ ಆದೇಶವನ್ನು ಹೊರಡಿಸುವುದು, ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಅಂಗವಿಕಲ ನೌಕರರ ಸೇವಾವಧಿಯಲ್ಲಿ ಒಂದು ಬಾರಿ ನೀಡುವ ವರ್ಗಾವಣೆ ಪ್ರಕ್ರಿಯೆ ನಿಯಮವನ್ನು ಕೈಬಿಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಮಾರುತಿ ವಡ್ಡರ, ಕಾರ್ಯದರ್ಶಿ ಬಸವರಾಜ ಗಿರಿನಿವಾಸ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶಡಶ್ಯಾಳ, ಖಜಾಂಚಿ ಜುಬೇರ ಕೆರೂರ, ಲಿಂಗದಳ್ಲಿ, ಕೂಡಗಿ, ಅರವತ್ತು, ಸಾಬು ಲಿಂಗದಳ್ಳಿ, ಆರ್. ಬಿ. ಗೌಡರ, ಹಳಕೇರಿ, ಹೊಸಮನಿ, ಶೀಳಿನ ಉಣ್ಣಿಬಾವಿ, ಮಾನಪ್ಪ ಪತ್ತಾರ, ವಿಜಯಕುಮಾರ ಪತ್ತಾರ, ಸಂಜೀವ ಗಾಯಕವಾಡ, ಆನಂದ ಉಣ್ಣಿಬಾವಿ, ಪೂರ್ಣಿಮಾ ರೆಡ್ಡಿ, ಗುಲಗಂಜಿ ರಿಯಾಝ, ಹಕೀಮ, ಮಾನಪ್ಪ ಪತ್ತಾರ, ಸಾಬು ಹೊಸಮನಿ ಮುಳ್ಳಾಮಠ, ಮಂಜಣ್ಣಿ ಅಲಬಾಳಮಠ ಸೊನ್ನಗಿ ಉಮರಾಣಿ ಇದ್ದರು.

