Author: editor.udayarashmi@gmail.com

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ ೧೭ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ವಿಶ್ವಕರ್ಮ ಜಯಂತಿಯ ಅಂಗವಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಸೆ.೧೭ರಂದು ಬೆಳಗ್ಗೆ ೯.೩೦ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ವಿಶ್ವಕರ್ಮ ಅವರ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯೂ ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತ, ಕನಕದಾಸ ವೃತ್ತದ ಮಾರ್ಗವಾಗಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರವರೆಗೆ ನಡೆಯಲಿದೆ. ಬೆಳಗ್ಗೆ ೧೦.೩೦ಕ್ಕೆ ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಉಪನ್ಯಾಸ, ಸುಗಮಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.ಅಂದು ನಗರದ ವಿವಿಧ ವೃತ್ತಗಳಿಗೆ ಸ್ವಚ್ಚತೆ ಹಾಗೂ ದೀಪಾಲಂಕಾರಗೊಳಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸುವುದು, ವೇದಿಕೆ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.ಸಭೆಯಲ್ಲಿ ವಿಜಯಪುರ ಗ್ರೇಡ್-೨ ತಹಶೀಲ್ದಾರ ಐ.ಎಚ್. ತುಂಬಗಿ, ಮಹಾನಗರಪಾಲಿಕೆ ಉಪ ಆಯುಕ್ತ…

Read More

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ೨೦೨೩-೨೪ರ ಶೈಕ್ಷಣಿಕ ವರ್ಷದ ಜುಲೈ ೨೦೨೪ ರಲ್ಲಿ ಜರುಗಿದ ಬಿ.ಎಡ್ ಕೋರ್ಸಿನ ತೃತೀಯ ಸೆಮಿಸ್ಟರ್ (ರೆಗ್ಯುಲರ್ ಮತ್ತು ಪುನರಾವರ್ತಿತ) ಫಲಿತಾಂಶವನ್ನು ದಿನಾಂಕ : ೧೦-೦೯-೨೦೨೪ ರಂದು ಪ್ರಕಟಿಸಲಾಗಿದೆ.ಸದರಿ ಫಲಿತಾಂಶವನ್ನು uucms.karnataka.gov.in ವೆಬ್ ಸೈಟ್ ನಲ್ಲಿ ನೋಡಬಹುದು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಹೆಚ್. ಎಂ. ಚಂದ್ರಶೇಖರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದ ಹೇಳಿಕೆ | ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆಂಗಳೂರು: ಕೈ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಪಕ್ಷದ ಹಿರಿಯರು ಹಾಗೂ ಅನುಭವಸ್ಥರ ನಡುವೆ ಪೈಪೋಟಿ ಶುರುವಾಗಿದೆ. ಎಂಬಿ.ಪಾಟೀಲ್, ಪರಮೇಶ್ವರ್ ಬಳಿಕ ಇದೀಗ ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿಯವರ ಹೆಸರು ಕೂಡ ಕೇಳಿ ಬರುತ್ತಿದೆ.ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಬಂದರೆ ಮುಂದಿನ ಸಿಎಂ ಯಾರು ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಬೆನ್ನಲ್ಲೆ ಸತೀಶ್ ಜಾರಕಿಹೊಳಿ ಹೆಸರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡುತ್ತಿದ್ದಾರೆ.ಇದೇ ವೇಳೆ ಸತೀಶ್ ಜಾರಕಿಹೊಳಿಯವರು ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು, ಸಿಎಂ ಕುರ್ಚಿ ಲಾಬಿ ಕುರಿತ ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿಯವರು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇದಕ್ಕಾಗಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ. ಅನೇಕರು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಿಎಂ…

Read More

ತಿಕೋಟಾ: ತಾಲೂಕಿನ ಹೊನವಾಡದ ಜವಳಿ ವ್ಯಾಪಾರಸ್ಥ ಗೌರಿಶಂಕರ( ಮುತ್ತು) ಹಿರೇಮಠ ಇವರನ್ನು ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾದ್ಯಕ್ಷರನ್ನಾಗಿ ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿ ಮಠ ನೇಮಕ ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕನ್ನಡದ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

Read More

ಗೋಲಗೇರಿ: ಸಿಂದಗಿ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಗೋಲಗೇರಿ KBMPS ಶಾಲೆಯ ಮಕ್ಕಳು ಗುಂಪು ಆಟಗಳಾದ ಕಬಡ್ಡಿ ಆಟದಲ್ಲಿ ಪ್ರಥಮ ಹಾಗೂ ರಿಲೇ ಓಟದಲ್ಲಿ ಪ್ರಥಮ ಹಾಗೂ ವೈಯಕ್ತಿಕ ಆಟಗಳಾದ ಚಕ್ರ ಎಸೆತದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೋಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ, ಮುಖ್ಯ ಗುರು ಪಿ.ಎಮ್.ಶೇಖ್, ಗುರುಬಸಯ್ಯ ಮಠ, ಯಮನಪ್ಪ ಗುಡಿಮನಿ, ಗ್ರಾಮಸ್ಥರು ಹಾಗೂ ಶಿಕ್ಷಣ ಪ್ರೇಮಿಗಳಾದ ಮಲ್ಕಣ್ಣ ಗಡೆಗೆನ್ನವರ, ರುಕುಮ್ಮುದ್ದಿನ ಪಟೇಲ ಹಳಿಮನಿ, ಮಡಿವಾಳ ನಾಯ್ಕೋಡಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Read More

ವಿಜಯಪುರ: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್ ಪ್ರಾಯೋಜಕತ್ವ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಇವರ ಸಹಯೋಗದೊಂದಿಗೆ ‘ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ’ ಎಂಬ ವಿಷಯದ ಕುರಿತು ಮಾಧ್ಯಮ ಕಾರ್ಯಗಾರವನ್ನು ದಿ. ೧೧ ಮತ್ತು ೧೨ ರಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೈದರಾಬಾದ್ ಯುನಿಸೆಫ್‌ನ ಪ್ರಸೂನ್ ಸೇನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಲಿದ್ದು, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ.ತಾಂತ್ರಿಕ ಗೋಷ್ಠಿಗಳು:ಕಾರ್ಯಾಗಾರದ ಮೊದಲ ತಾಂತ್ರಿಕ ಗೋಷ್ಠಿಯಲ್ಲಿ ‘ಮಕ್ಕಳ ಹಕ್ಕುಗಳು: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚೌಕಟ್ಟು ಮತ್ತು ಕಾನೂನುಗಳ’ ಎಂಬ ವಿಷಯದ ಕುರಿತು ಕರ್ನಾಟಕ ಮಕ್ಕಳ ಹಕ್ಕುಗಳ ಸಂಯೋಜಕ ಡಾ. ವಾಸುದೇವ ಶರ್ಮಾ…

Read More

ವಿಜಯಪುರ: ತಾಳ್ಮೆಯ ಕೊರತೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಮನೊರೋಗ ತಜ್ಞ ಡಾ. ಸಂತೋಷ ರಾಮದುರ್ಗ ಹೇಳಿದ್ದಾರೆ.ಮಂಗಳವಾರ ವಿಶ್ವ ಆತ್ಮಹತ್ಯೆ ತಡೆ ದಿನ ಮತ್ತು ಅದರ ಉಪಚಾರ ದಿನದ ಅಂಗವಾಗಿ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಕಾಲೇಜಿನ ಯುವಕ ಮತ್ತು ಯುವತಿಯರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಳ್ಮೆಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಯಾವ ವ್ಯಕ್ತಿ ಆತ್ಮಹತ್ಯೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುತ್ತಾನೋ ಅಂಥವರ ಬಗ್ಗೆ ನಾವು ತೀವ್ರ ನಿಗಾ ವಹಿಸಬೇಕು. ಅಲ್ಲದೇ, ಅವರಿಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು,ಡಾ. ಗೌತಮಿ ಮಾತನಾಡಿ, ವಿಶ್ವಾದ್ಯಂತ ಪ್ರತಿವರ್ಷ ಸುಮಾರು ಏಳು ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರಲ್ಲಿ 1.60 ಲಕ್ಷ ಜನ ಭಾರತದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.…

Read More

ದೇವರಹಿಪ್ಪರಗಿ: ಎತ್ತಿನಗಾಡಿ (ಚಕ್ಕಡಿ)ಗೆ ಕಟ್ಟಿದ್ದ ಎತ್ತುಗಳು ಬೆದರಿ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಪಡಗಾನೂರ ಗ್ರಾಮದಲ್ಲಿ ಜರುಗಿದೆ.ತಾಲ್ಲೂಕಿನ ಪಡಗಾನೂರ ಗ್ರಾಮದ ಯಮನಪ್ಪ ವಡ್ಡೋಡಗಿ ಎಂಬುವವರಿಗೆ ಸೇರಿದ ಅಂದಾಜು ೧.೫೦ ಲಕ್ಷ.ರೂ ಮೌಲ್ಯದ ಎರಡು ಎತ್ತುಗಳನ್ನು ಎತ್ತಿನಗಾಡಿಗೆ ಕಟ್ಟಿ ಅವುಗಳಿಗೆ ಮೇವು ತರಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ಬೆದರಿದ ಎತ್ತುಗಳು ಕಟ್ಟಿದ್ದ ಗಾಡಿಯ ಸಮೇತ ಸಮೀಪದ ಭಾವಿಗೆ ಬಿದ್ದಿವೆ.ಬಹುತೇಕ ತುಂಬಿದ್ದ ಭಾವಿಯಲ್ಲಿ ಎತ್ತುಗಳು ಈಜಬಹುದಾಗಿದ್ದರೂ ಗಾಡಿಗೆ ಕಟ್ಟಿದ್ದ ಕಾರಣ ಈಜಲಾಗದೇ ಅಸುನೀಗಿವೆ.ಘಟನಾ ಸ್ಥಳಕ್ಕೆ ಪಶು ವೈದ್ಯಕೀಯ ಆಸ್ಪತ್ರೆಯ ತಾಲ್ಲೂಕು ಸಹಾಯಕ ನಿರ್ದೇಶಕ ಭೀಮಾಶಂಕರ ಕನ್ನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಸಿಂದಗಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ಬಾಲಕಿಯರ ಖೋಖೋ ದ್ವಿತೀಯ, ಬಾಲಕರ ಹಾಗೂ ಬಾಲಕಿಯರ ಟೆನಿಕ್ವಾಯಿಟ್ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ೩೦ ಜನ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಸಾಧನೆಗೆ ಮಾರ್ಗದರ್ಶನ ನೀಡಿದ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಸುನೀಲ ಪಾಟೀಲ, ಎನ್.ಬಿ.ಪೂಜಾರಿ, ಪ್ರಸನ್ನ ಜೋಗೂರ, ಎಸ್.ಎಸ್.ತಾಳಿಕೋಟಿ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಶಿವರಾಜ ಕುಂದಗೋಳ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ಸ್ನೇಹಾ ಕುಲಕರ್ಣಿ, ಸ್ನೇಹಾ ಧರಿ, ಲಕ್ಷ್ಮೀ ಕನ್ನೊಳ್ಳಿ, ಎಸ್.ಎಸ್.ಹೂಗಾರ, ರಾಹುಲ…

Read More