ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಸಂಘದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣ ಪತ್ರವನ್ನು ಭಾರತೀಯ ಸ್ಟೇಟ್ ಬ್ಯಾಂಕಿಗೆ ಸಲ್ಲಿಸುವದು. ಸೈಬರ್ ಕಳ್ಳರ ಬಗ್ಗೆ ಎಚ್ಚರಿಕೆ ವಹಿಸುವದು. ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘದ ಕೇಂದ್ರ ಅಧ್ಯಕ್ಷರು ಭೇಟಿ ಮಾಡಿರುವ ಕುರಿತು, ಈಚೆಗೆ ವಿಜಯಪುರದಲ್ಲಿ ಜರುಗಿದ ಜಿಲ್ಲಾ ನಿವೃತ್ತ ನೌಕರರ ಸಮಾವೇಶ ಕುರಿತು ಮಾಹಿತಿ ನೀಡಲಾಯಿತು. ಸಭೆಯಲ್ಲಿ ಇತರೇ ವಿಷಯಗಳನ್ನು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸ್ಥಳೀಯ ಜನಪದ ಗಾಯಕ ಬಸವರಾಜ ಹಾರಿವಾಳ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಇವರ ಕುರಿತು ಎಂ.ಜಿ.ಆದಿಗೊಂಡ,ಸುರೇಶಗೌಡ ಪಾಟೀಲ, ಎಸ್.ಎಸ್.ಝಳಕಿ, ಎಸ್.ಕೆ.ಸೋಮನಕಟ್ಟಿ, ಎಫ್.ಡಿ.ಮೇಟಿ ಮಾತನಾಡಿದರು.
ಸಭೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಸ್ಥಳೀಯ ಶಾಖೆಯ ಆರ್ಥಿಕ ಸಲಹೆಗಾರ ಚಿಮ್ಮಲಿಗ ಅವರು ಬ್ಯಾಂಕಿನ ಕುರಿತು ಮಾಹಿತಿ ನೀಡಿದರು. ಇದೇ ತಿಂಗಳು ಇವಣಗಿ ಗ್ರಾಮದಲ್ಲಿ ನಡೆಯುವ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿವೃತ್ತ ನೌಕರರ ಬಾಂಧವರು ಆಗಮಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಗೌರವ ಕಾರ್ಯದರ್ಶಿ ಯಮನಪ್ಪ ಮಿಣಜಗಿ ಮನವಿ ಮಾಡಿಕೊಂಡರು. ಎಂ.ಜಿ.ಆದಿಗೊಂಡ ಸ್ವಾಗತಿಸಿದರು. ಎಸ್.ಕೆ.ಸೋಮನಕಟ್ಟಿ ನಿರೂಪಿಸಿ, ವಂದಿಸಿದರು.

