ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು, ವಕ್ಫ್ ಕಾಯ್ದೆಯನ್ನೇ ದೇಶದಿಂದ ಕಿತ್ತಿ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಮಂಗಳವಾರ ಧರಣಿ ಸ್ಥಳಕ್ಕೆ ಆಗಮಿಸಿ ಶಂಕರಲಿಂಗ ಬಣಗಾರ (ನಾಗಲೀಕ) ಸಮಾಜ ಸೇವಾ ಸಂಘದವರು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹೇಶ ಹೆರಲಗಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ವಿರುಪಾಕ್ಷಪ್ಪ ಶಾಬಾದಿ, ಈರಪ್ಪ ಕುರ್ಲೆ, ಸಿದ್ರಾಮಪ್ಪ ಉಪ್ಪನಗಿ, ಶಂಕರ ಹೆರಲಗಿ, ಪಾವಡೆಪ್ಪ ಗಿಡವೀರ, ಶಶಿ ಜವಳಿ, ಉಮಾಕಾಂತ ಹೆರಲಗಿ, ಹುಚ್ಚಪ್ಪ ಕೇಶಟ್ಟಿ, ಸುವರ್ಣ ಕುರ್ಲೆ, ಜಯಶ್ರೀ ಗುರುಬಸಣ್ಣವರ, ಈರಣ್ಣ ಹೆರಲಗಿ, ಮಲ್ಲಿಕಾರ್ಜುನ ಹೆರಲಗಿ, ಅಮೀತ್ ಕುರ್ಲೆ, ಪ್ರಶಾಂತ ಕರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

