ಅ.೧೪ರಿಂದ ೧೬ರವರೆಗೆ ಕರ್ನಾಟಕ ವಿಧಾನಮಂಡಲದ ಸಮಿತಿಯಿಂದ ಅಧ್ಯಯನ ಪ್ರವಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಇದೇ ನ.೧೪ ರಿಂದ ೧೬ರವರೆಗೆ ಬೆಳಗಾವಿ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಈ ಜಿಲ್ಲೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯದವರ ಅಭಿವೃದ್ದಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆ-ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಿದೆ.
ಪಿ.ಎಂ.ನರೇಂದ್ರಸ್ವಾಮಿಯವರ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲಿ ಸದಸ್ಯರುಗಳಾದ ರಮೇಶ ಜಾರಕಿಹೊಳಿ, ಡಾ.ಎಂ.ಚಂದ್ರಪ್ಪ, ದುರ್ಯೋಧನ ಐಹೊಳೆ, ಜಿ.ಹಂಪಯ್ಯ ನಾಯಕ್ ಬಲ್ಲಟಗಿ, ಎಸ್.ಎಸ್.ಸುಬ್ಬಾರೆಡ್ಡಿ, ಬಸನಗೌಡ ತುರುವಿಹಾಳ್, ಅಬ್ಬಯ್ಯ ಪ್ರಸಾದ್, ಬಸವರಾಜ್ ಮತ್ತಿಮುಡ, ನೇಮಿರಾಜ್ ನಾಯ್ಕೆ, ಎನ್.ಶ್ರೀನಿವಾಸಯ್ಯ, ಬಿ.ದೇವೆಂದ್ರಪ್ಪ, ಕೆ.ಸಿ.ವಿರೇಂದ್ರ ಪಪ್ಪಿ, ಕೃಷ್ಣಾ ನಾಯ್ಕ ಕೆ., ಕೆ.ಎಸ್.ಬಸವಂತಪ್ಪ, ಎನ್.ರವಿಕುಮಾರ, ಡಾ.ಡಿ.ತಿಮ್ಮಯ್ಯ, ರಾಜೇಂದ್ರ ರಾಜಣ್ಣ, ಸಿ.ಎನ್.ಮಂಜೇಗೌಡ, ಶ್ರೀಮತಿ ಹೇಮಲತಾ ನಾಯಕ್ ಸೇರಿದಂತೆ ಅಧಿಕಾರಿಗಳನ್ನೊಳಗೊಂಡ ತಂಡ, ನ.೧೪ರಂದು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಅಂದು ಬೆಳಿಗ್ಗೆ ೧೦-೩೦ಕ್ಕೆ ಗದಗ ಜಿಲ್ಲೆಯ ಹಾಗೂ ಮಧ್ಯಾಹ್ನ ೨-೩೦ ಗಂಟೆಗೆ ಧಾರವಾಡ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದೆ.
ನ.೧೫ರಂದು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಿಗ್ಗೆ ೧೦-೩೦ಕ್ಕೆ ವಿಜಯಪುರ ಜಿಲ್ಲೆಯ ಹಾಗೂ ಮಧ್ಯಾಹ್ನ ೨-೩೦ಕ್ಕೆ ಬಾಗಲಕೋಟೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದೆ.
ನ.೧೬ರಂದು ಬೆಳಗಾವಿಗೆ ಭೇಟಿ ನೀಡಲಿರುವ ತಂಡ, ಬೆಳಿಗ್ಗೆ ೧೦-೩೦ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ಗಂಟೆ ಸುವರ್ಣ ವಿಧಾನಸೌಧದ ೩ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದೆ.
ಸಮಿತಿಯು ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಮಾನ್ಯ ಕಾರ್ಯಕ್ರಮಗಳು ಹಾಗೂ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಳಡಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳು ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಲಿದೆ.
