Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಅಭಿನವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಅಭಿನವ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ದಳವಾಯಿ, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕರು ಹಾಗೂ ತಂಡದ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕ ಸಾಗರ ಕೊಡಗರೆ, ಬಸವರಾಜ ಬೇನೂರ, ಮಕಾನದಾರ ಸರ್, ರಮೇಶ ಪಾಟೀಲ್, ಒಡೆಯರ್ ಸರ್, ಇನ್ನಿತರರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾಡಳಿತ ಹಾಗೂ ಕಪಿಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜಯಪುರ ನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ೧೭ ವರ್ಷದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಆದರ್ಶ ನಗರ, ವಿಜಯಪುರ ಈ ಶಾಲೆಯು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಈ ಸಮಯದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ಗ್ರಾಮೀಣ ವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಅಧಿಕಾರಿ ಪರಶುರಾಮ ಸಿದ್ದಾಪೂರ, ದೈಹಿಕ ಶಿಕ್ಷಕ ಒಡೆಯರ್, ತಂಡ ತರಬೇತಿದಾರ ಚನ್ನಪ್ಪ ಸೈದಾಪೂರ, ತಂಡದ ನಾಯಕಿ ರಕ್ಷಿತಾ ಅಂಬಿಗೇರ, ಬಸವರಾಜ ಬೇನೂರ, ಬಂಗಾರೆಪ್ಪ ಒಡೆಯರ್, ಮಕಾನದಾರ ಸರ್, ರಮೇಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

– ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿ – ಗದಗ ಕುರುವಂಶದ ಧೃತರಾಷ್ಟ್ರನ ಮಕ್ಕಳು 100 ಜನ ಕೌರವರು ಮತ್ತು ಪಾಂಡು ಮಹಾರಾಜನ ಐದು ಜನ ಮಕ್ಕಳಾದ ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧ, ಮಹಾಭಾರತದ ಕಥೆ ನಮಗೆಲ್ಲಾ ಗೊತ್ತಿದೆಯಷ್ಟೇ. ಇದರಲ್ಲಿ ಬರುವ ಹಲವಾರು ಪಾತ್ರಗಳು ನಮ್ಮಲ್ಲಿಯೂ ಮನೆ ಮಾಡಿವೆ ಎಂದರೆ ನಾವು ನಂಬಲೇಬೇಕು. ಅದು ಹೇಗೆ ಅಂತೀರಾ?ನೂರು ಜನ ಕೌರವ ಪುತ್ರರು ನಮ್ಮಲ್ಲಿರುವ ನೂರಾರು ಋಣಾತ್ಮಕ ವಿಷಯಗಳ ಚಿಂತನೆಗಳು. ಸಿಟ್ಟು, ಸೆಡವು, ಕಷ್ಟ,ಅಸಹನೆ, ಅಸಮಾಧಾನ, ಅತೃಪ್ತಿ, ಅವಿಶ್ವಾಸ, ಅಸಂತೋಷ, ಕುಹಕತೆ ವಿದ್ರೋಹ ಹೀಗೆ ಹತ್ತು ಹಲವು ಋಣಾತ್ಮಕ ವಿಷಯಗಳನ್ನು ನಾವು ಹೊಂದಿರುತ್ತೇವೆ.ನಮ್ಮ ದೇಹದಲ್ಲಿರುವ ಮೆದುಳು ಅಂಧ ಕುರು ಮಹಾರಾಜ ದೃತರಾಷ್ಟ್ರನಿದ್ದಂತೆ.ಅದಕ್ಕೆ ಕಣ್ಣು ಕಿವಿ ಸ್ಪರ್ಶ ಯಾವುದು ಇರುವುದಿಲ್ಲ… ಕೇವಲ ಗ್ರಹಿಕೆಯನ್ನು ಮಾತ್ರ ಹೊಂದಿರುವ ದೃತರಾಷ್ಟ್ರ ನಂತಹ ಮೆದುಳನ್ನು ಈ ನೂರಾರು ಋಣಾತ್ಮಕ ವಿಷಯಗಳು ನಮ್ಮಲ್ಲಿನ ಶಕ್ತಿಯನ್ನು ಬಸಿದು ಹೋಗುವಂತೆ ಹಿಂಡಿ ಹಿಪ್ಪೆ ಮಾಡುತ್ತವೆ, ಮಾನಸಿಕವಾಗಿ ದೈಹಿಕವಾಗಿ ನಮ್ಮನ್ನು ಕುಗ್ಗಿಸುತ್ತವೆ. ಋಣಾತ್ಮಕ ವಿಷಯಗಳ…

Read More

ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ. ವಿಜಯಪುರ: ಸ್ಲಂ ಘೋಷಣೆ, ಮನೆಗಳ ಹಕ್ಕು ಪತ್ರ ವಿತರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ಲಂ ನಿವಾಸಿಗಳು ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ (ಸಿ.ಸಿ.ಎಫ್.ಎಫ್) ನೇತೃತ್ವದಲ್ಲಿ ಗುರುವಾರ ಇಲ್ಲಿನ ಮನಗೂಳಿ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.ನಗರದ ಕೊಳಗೇರಿ ಪ್ರದೇಶದಲ್ಲಿ ಸ್ಲಂ ಅಭಿವೃದ್ಧಿ ಕಾರ್ಯಗಳು ಬಹಳ ವಿಳಂಬವಾಗಿ ನಡೆಯುತ್ತಿವೆ. ಈ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು. ಸ್ಲಂ ನಿವಾಸಿಗಳಿಗೆ ಆದಷ್ಟು ಬೇಗ ಮನೆಗಳ ಹಕ್ಕುಪತ್ರ ನೀಡಬೇಕು ಎಂದು ಧರಣಿನಿರತರು ಒಕ್ಕೊರಲಿನಿಂದ ಆಗ್ರಹಿಸಿದರು.ಕೆಲಹೊತ್ತಿನ ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಜಯಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಾನಂದ ರಾಠೋಡ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಧರಣಿ ನಿರತ ಸ್ಲಂ ನಿವಾಸಿಗಳ ಸಮಸ್ಯೆಗಳ ಸಮಸ್ಯೆಗಳನ್ನು ಶಾಂತಚಿತ್ತದಿಂದ…

Read More

ಕಲಬುರಗಿ ಮನೀಷ ಮ್ಯಾನ್ ಪವರ್ ಏಜೆನ್ಸಿ ಮೇಲೆ ಕ್ರಮಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಕಿ ವೇತನ ಪಾವತಿಸಲು, ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸು ಪಡೆಯಲು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸಲಾರದ ಮನೀಷ ಮ್ಯಾನ್ ಪಾವರ್, ಕಲಬುರಗಿ ಇವರ ಮೇಲೆ ಶಿಸ್ತಿನಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರಿಗೆ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಭೀಮಶೆಟ್ಟಿ ಯಂಪಳ್ಳಿ ರಾಜ್ಯಾಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಕ್ರೈಸ್ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸದೆ ಇರುವದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ಸಿಬ್ಬಂದಿ ಕಡಿತ ಮಾಡಿರುವದರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ನೌಕರರು ಬಳಲುವಂತಾಗಿದೆ. ಅಲ್ಲದೆ ಕ್ರೈಸ್ ವಸತಿನಿಲಯಗಳ ವೇತನಕ್ಕಾಗಿ ಅನುದಾನವಿದ್ದರು ಕೂಡಾ ಮನೀಷ ಮ್ಯಾನ್ ಪಾವರ್ ನಿರ್ಲಕ್ಷತನದಿಂದ ವೇತನ…

Read More

ಪ್ರಾಸಿಕ್ಯೂಷನ್ ಗೆ ಅನುಮತಿ ಪ್ರಶ್ನಿಸಿ ಸಿಎಂ ಅರ್ಜಿ | ಸಿಎಂ ಪರ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡನೆ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್​ ಅರ್ಜಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ಹೈಕೋರ್ಟ್, ತೀರ್ಪ ಕಾಯ್ದಿರಿಸಿದೆ.ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿಸಲಾಗಿದೆ ಮತ್ತು ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದೆ.ಈಗಾಗಲೇ ರಾಜ್ಯಪಾಲರ ಪರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ರಾಜ್ಯ ಸರ್ಕಾರದ ಪರವಾಗಿ ಶಶಿಕಿರಣ್​ ಶೆಟ್ಟಿ ವಾದ ಮಂಡಿಸಿದ್ದಾರೆ. ಮುಖ್ಯಮಂತ್ರಿಗಳ ಪರ ಹಿರಿಯ ವಕೀಲರಾದ ಅಭಿಷೇಕ್​ ಮನು ಸಿಂಘ್ವಿ ಅವರು ವಾದ ಮಂಡಿಸಿದರು.ರಾಜ್ಯಪಾಲರು 23 ವರ್ಷದ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ರಾಷ್ಟ್ರಪತಿ ಆಳ್ವಿಕೆಗಿಂತ ಹೆಚ್ಚು ರಾಜಕೀಯಪ್ರೇರಿತ. ಸೆಕ್ಷೆನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು.…

Read More

ವಿಜಯಪುರ: ಇತ್ತಿಚೆಗೆ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಗೂ ಡೋಣಿ ನದಿಗಳ ಪ್ರವಾಹದಿಂದಾಗಿ ತೊಗರಿ, ಹತ್ತಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತು ಹಾನಿ ಉಂಟಾಗಿ ರೈತರಿಗೆ ಸಾಕಷ್ಟು ಪ್ರಮಾಣದ ನಷ್ಟವನ್ನು ಉಂಟು ಮಾಡಿದೆ, ಈ ಕುರಿತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿ ಸರಕಾರದಿಂದ ಹಾಗೂ ವಿಮಾ ಕಂಪನಿಯಿಂದ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಟಿ.ಬೂಬಾಲನ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.ಈ ವೇಲೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿ, ಕಳೆದ ೨-೩ ವರ್ಷದ ಬರಗಾಲದ ನಷ್ಟದಿಂದ ಆಚೆ ಬರದೇ ಸಾಲದ ಸುಳಿಯಲ್ಲಿ ಒದ್ದಾಡುತ್ತಿರುವ ರೈತ ಕುಲಕ್ಕೆ ಈ ವರ್ಷವಾದರೂ ಅನುಕೂಲವಾದೀತು ಎಂಬ ಆಶಾಭಾವನೆಯೊಂದಿಗೆ ಸಾಲಸೋಲ ಮಾಡಿ ಜಮೀನು ಹದ ಮಾಡಿ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟ ನಾಶಕ ತಂದು ಬಿತ್ತನೆ ಮಾಡಿರುವ ರೈತರಿಗೆ ಈ ಮಳೆ ಸಾಕಷ್ಟು ನಷ್ಟ…

Read More

ಗ್ರಾಮಸ್ಥರ ಪರದಾಟ | ರಸ್ತೆಗಿಳಿಯದ ವೃದ್ಧರು | ಕ್ಯಾರೆ ಎನ್ನದ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ಮಲ್ಲಿಕಾಜು೯ನ ಎನ್.ಕೆಂಭಾವಿಬ್ರಹ್ಮದೇವನಮಡು: ರಸ್ತೆ ತುಂಬ ಕೆಸರು, ಗ್ರಾಮಸ್ಥರು, ಶಾಲೆಗೆ ತೆರಳುವ ಮಕ್ಕಳ ಪರದಾಟ, ವೃದ್ಧರಿಗೆ ಪ್ರಾಣಸಂಕಟ, ಹಳ್ಳಿ ತುಂಬ ಆವರಿಸಿದ ರೋಗಗಳ ಭೀತಿ..ಇದು ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸದ್ಯದ ಚಿತ್ರಣ. ವಿಜಯಪುರ ಜಿಲ್ಲೆಯ ಗಡಿಯಲ್ಲಿರುವ, ಸಿಂದಗಿ ತಾಲೂಕು ವ್ಯಾಪ್ತಿಯ ಈ ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಮನೆಗಳಿವೆ. ೩ ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಎಲ್ಲ ಪ್ರಮುಖ ರಸ್ತೆಗಳು ಕೆಸರು ಗದ್ದೆಗಳಾಗಿ ಗ್ರಾಮಸ್ಥರು ಮನೆಯಿಂದ ಹೊರ ಬರುವುದೇ ದುಸ್ತರವಾಗಿದೆ. ವೃದ್ಧರಂತೂ ಮನೆಯಿಂದ ಹೊರಗೆ ಕಾಲಿಡದ ಸ್ಥಿತಿ ನಿರ್ಮಾಣವಾಗಿದೆ.ಪಂಚಾಯಿತಿಯಿಂದ ಯುಕೆಪಿ ಕಚೇರಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ರಸ್ತೆಯಲ್ಲಿ ರಾಜೀವಗಾಂಧಿ ಸ್ಮಾರಕ ಪ್ರೌಢಶಾಲೆ ಹಾಗೂ ಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ನಿತ್ಯ ೩೦೦ಕ್ಕೂ ಹೆಚ್ಚು ಮಕ್ಕಳು ಕೆಸರುಮಯ ರಸ್ತೆ ದಾಟಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಈ ರಸ್ತೆಯಲ್ಲಿ ನಿತ್ಯ ಮಕ್ಕಳು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಪ್ರತಿ ಮನೆಗೂ ನೀರು…

Read More

ಎಸ್‌ಎಸ್‌ಎಲ್‌ಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವರ್ಷದೊಳಗಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದಿಂದ ಮತ್ತು ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಉತ್ತೇಜಿಸುವುದು, ಅವರ ವಿಶೇಷ ಪ್ರತಿಭೆಯನ್ನು ಗುರುತಿಸುವುದು, ಜಾತಿ, ವರ್ಣ, ಪಂಥದ ಭೇದವಿಲ್ಲದೆ ಎಲ್ಲ ವರ್ಗದವರಿಗಾಗಿ ಕಾರ್ಯಕ್ರಮಗಳನ್ನು ರಚಿಸುವುದೆ ಬಾಲ ವಿಕಾಸ ಅಕಾಡೆಮಿಯ ಉದ್ದೇಶವಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ನಗರ ಹಾಗೂ ಶಾಂತಿನಿಕೇತನ ಶಾಲೆಯ ಸಂಯುಕ್ತಾಶ್ರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸುಧಾರಣೆಗಾಗಿ ‘ಎಸ್‌ಎಸ್‌ಎಲ್‌ಸಿ ಸಾಹಿತ್ಯ ಪರಿಚಯಾತ್ಮಕ ಕಾರ್ಯಾಗಾರ’ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣದಲ್ಲಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ವಿನೂತನ ಪ್ರಯೋಗಕ್ಕೂ ಮುಂದಾಗಿದ್ದಾರೆ. ಶಿಕ್ಷಣ ಕ್ಷೇತ್ರ ಸದಾ ಜಾಗೃತವಾಗಿರಬೇಕು. ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನದ ಪ್ರಜ್ಞೆಯನ್ನು ಬೆಳೆಸಲು ವಾತಾವರಣವನ್ನು…

Read More