ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಕಂದಗಲ್ ಹಣಮಂತ್ರಾಯ ರಂಗ ಮಂದಿರದಲ್ಲಿ ದಿನಾಂಕ : ೧೦-೧೧-೨೦೨೪ ರಂದು ಸಾಯಂಕಾಲ ೫.೩೦ ಗಂಟೆಗೆ ಖ್ಯಾತ ಚಲನಚಿತ್ರನಟಿ, ಹಿನ್ನೆಲೆ ಗಾಯಕ ಹಾಗೂ ಹಿರಿಯ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಬಿ.ಜಯಶ್ರೀ ಹಾಗೂ ಅವರ ತಂಡದ ಕರಿಮಾಯಿ ರಂಗಭೂಮಿ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.
ಈ ಕರಿಮಾಯಿ ರಂಗಭೂಮಿ ನಾಟಕವನ್ನು ವಿಜಯಪುರದಲ್ಲಿ ಜಿಲ್ಲಾ ಯುವ ಪರಿಷತ್, ಎಸ್.ಪಿ. ಎಂಟರಪ್ರೈಜಿಸ್, ಮತ್ತು ಇವೆಂಟ್ರ ಇಂಟರನ್ಯಾಷನಲ್ ಇವರ ಆಶ್ರಯದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಗರದ ರಂಗಾಸಕ್ತರು, ಸಾರ್ವಜನಿಕರು, ಸಾಹಿತಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಂಗಭೂಮಿ ನಾಟಕವನ್ನು ಆಶ್ವಾಧೀಸಬೇಕೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾದ ಶರಣು ಸಬರದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶರಣು ಸಬರದ ನಂ. ೯೪೮೮೩೪೫೧೨೩ ಮೋಹನ ಕಟ್ಟಿಮನಿ ನಂ. ೮೯೭೧೩೧೦೦೦೮ ಹಾಗೂ ಪ್ರಕಾಶ ಮಠ ನಂ. ೯೭೪೦೫೮೨೦೦೯ ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

