ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ತಂಗಡಗಿಯ ಕೃಷ್ಣಾ ನದಿಯ ದಡದಲ್ಲಿ ಅಪರಿಚಿತ ಮಹಿಳೆಯ ಶವವೊಂದು ಶುಕ್ರವಾರ ಪತ್ತೆಯಾಗಿದೆ.
ಅಂದಾಜು ೪೫ ರ ವಯಸ್ಕ ಮಹಿಳೆ ಹಳದಿ ಬಣ್ಣದ ಸೀರೆ, ಕಡುಕೆಂಪು (ಮೆರುನ್) ಬಣ್ಣದ ಜಂಪರ್ ತೊಟ್ಟಿದ್ದು ಯಾರದಾದರೂ ಮನೆಯಲ್ಲಿ ಕಾಣೆಯಾಗಿದ್ದರೆ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

