Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯ ಹಂತ ಅತ್ಯಂತ ಪ್ರಮುಖವಾದದ್ದು, ಕಾಲೇಜುಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಹೇಳಿದರು.ನಗರದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಕಾಲ ಬದಲಾಗಿದೆ ಎನ್ನುತ್ತೇವೆ, ಆದರೆ ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ. ಕಾಲೇಜುಗಳು ಸಾಧಕರ ಛಾವಣಿಗಳಾಗಬೇಕು. ಕೇವಲ ೧೧ ವರ್ಷದ ಅವಧಿಯಲ್ಲಿ ಈ ಮಹಾವಿದ್ಯಾಲಯವು ಅಗಾಧ ಸಾಧನೆ ಮಾಡುವ ಮೂಲಕ, ನುರಿತ ಉಪನ್ಯಾಸಕರನ್ನು ಹೊಂದಿರುವ ಕಾಲೇಜು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವುದು ಶ್ಲಾಘನೀಯ ಎಂದರು.ಅತಿಥಿಗಳಾದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಪಾಲಕರ ಪ್ರೋತ್ಸಾಹ ಇದ್ದರೆ ಏನು ಬೆಕಾದರೂ ಸಾಧಿಸಬಹುದು. ಈಗಿನ ವಿದ್ಯಾರ್ಥಿಗಳು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ೬೯ನೆಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಧರೆಗೆ ದೊಡ್ಡವರು ವಿಶೇಷ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರನ್ನು ಧರೆಗೆ ದೊಡ್ಡವರು ಎಂದು ಗುರುತಿಸಿ ಸತ್ಕರಿಸಲಾಯಿತು.ಮಕ್ಕಳ ಸಾಹಿತಿಗಳಾದ ಶಂಕರ ಹಲಗತ್ತಿ, ಶಾಂತಿ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫ.ಗು.ಸಿದ್ದಾಪೂರ, ಎಸ್.ಎಸ್.ಸಾತಿಹಾಳ ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಶ್ರೀ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾಮಹೋತ್ಸವ ರಥೋತ್ಸವ ಹಾಗೂ ಜಲ-ರಥೋತ್ಸವವು ಬುಧವಾರ ರಾತ್ರಿ ಸಡಗರ ಸಂಭ್ರಮದೊಂದಿಗೆ ವಿಜ್ರಂಭಣೆಯಿಂದ ಜರುಗಿತು.ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ವಿಶೇಷ ಆರಾಧನೆ, ವಿವಿಧ ಕಾರ್ಯಕ್ರಮಗಳಲ್ಲಿ ಬಿಜಾಪೂರ ಬಾಗಲಕೋಟ ಬೇಳಗಾವಿ ಜಿಲ್ಲೆಗಳಲ್ಲದೇ ನೆರೆಯ ಮಹಾರಾಷ್ಟçದಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವದಿಂದ ಪಾರಾಯಣ ಪಠಿಸಿದರು, ಮಹಾರಾಷ್ಟçದಿಂದ ಆಗಮಿಸಿದ ತಂಡ ಗ್ರಾಮದ ಪ್ರಮುಖ ಬೀದಿಯ ಹಲವಾರು ಸ್ಥಳಗಳಲ್ಲಿ ಬ್ರಹತ್ ರಂಗೋಲಿ ಬಿಡಿಸುವ ಮೂಲಕ ಜಾತ್ರೆಗೆ ವಿಶೇಷ ಕಳೆ ನೀಡಿದರು ಶ್ರೀಮಠದ ಬಾವಿಯಲ್ಲಿ ನಡೆಯುವ ಶ್ರೀರಘುನಾಥ ಪ್ರೀಯ ಸಾಧು ಮಹಾರಾಜರ “ಜಲ ರಥೋತ್ಸವ” ವೀಕ್ಷಿಸಿದ ಸಾವಿರಾರು ಜನ ಭಕ್ತಾಧಿಗಳು ತಮ್ಮ ಹರಕೆಯಂತೆ ದೀಪ ಬೆಳಗಿಸುವ ಮೂಲಕ ಭಕ್ತಿಪರವಶರಾದರು.ಪ್ರಭುಲಿಂಗೇಶ್ವರ ಯುವಕರ ಕಬ್ಬಡ್ಡಿ ಕ್ರೀಢಾ ಸಂಘದಿಂದ ಕಬ್ಬಡ್ಡಿ ವೈಭವ ೨೦೨೫ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ ಹಮ್ಮಿಕೊಳ್ಳಲಾಗಿತ್ತು,ಅಲ್ಲದೇ ಸಾಂಸ್ಕೃತಿಕ ಸ್ಪರ್ದಾ ಕಾರ್ಯಕ್ರಮಗಳಾದ ಸಂಗ್ರಾಮ ಕಲ್ಲು ಮೇಲೆ ನೆಟ್ಟಗೆ…
ತಲೆಯ ಮೇಲೆ ತುಳಸಿ | ಕೈಯಲ್ಲಿ ತಾಳ ತಂಬೂರಿ | ಮನದಲ್ಲಿ ವಿಠಲ ಸ್ಮರಣೆ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ತಾಳ ಹಾಕುತ್ತಾ, ತಂಬೂರಿ ಬಾರಿಸುತ್ತಾ, ವಿಠ್ಠಲನ ಭಜಿಸುತ್ತಾ, ಹಣೆಯ ಮೇಲೆ ಅಷ್ಟಗಂಧ, ಕೈಯಲ್ಲಿ ವಿಠ್ಠಲನ ಧ್ವಜ, ತಲೆಯ ಮೇಲೆ ತುಳಸಿ ಹೊತ್ತು ಪ್ರಮುಖ ಯಾತ್ರಾ ಸ್ಥಳ ಪಂಢರಪುರಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ ಭಕ್ತರ ದಂಡನ್ನು ಈಗ ಕರ್ನಾಟಕ-ಮಹಾರಾಷ್ಟçದ ಗಡಿಯಲ್ಲಿ ಕಾಣಬಹುದಾಗಿದೆ.ಪ್ರತಿವರ್ಷ ಕಾರ್ತಿಕ ಏಕಾದಶಿ ಬಂತೆಂದರೆ ಸಾಕು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರಾಂತಗಳಿಂದ ಲಕ್ಷಾಂತರ ಯಾತ್ರಾರ್ಥಿಗಳು ವಿಠಲನ ಕಾಣಲು ಪಂಢರಪುರದತ್ತ ಹೆಜ್ಜೆ ಹಾಕುವುದು ಸಂಪ್ರದಾಯ.ನೂರಾರು ಕಿ.ಮೀ. ದೂರವನ್ನು ಬರಿಗಾಲಲ್ಲೇ ನಡೆದು ಸಾಗುವ ಭಕ್ತರ ಸಾಹಸ ಅಚ್ಚರಿ ಮೂಡಿಸುವಂತಹದು. ಹೆಣ್ಣು, ಗಂಡು, ಹಿರಿಯ, ಕಿರಿಯ, ಬಡವ, ಶ್ರೀಮಂತ ಎಂಬ ಬೇಧಬಾವವಿಲ್ಲದೇ ಊರಿಗೆ ಊರೇ ಒಂದಾಗಿ ವಿಠಲನ ದರ್ಶನಕ್ಕೆ ತೆರಳವುದು ಪರಂಪರಾಗತ ರೂಢಿಯಾಗಿದೆ.ಸುಖಃ, ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ, ಸಿರಿತನ ಬಯಸಿ ಹರಕೆ ಹೊತ್ತ ಭಕ್ತರು ವಿಠಲ-ರುಕ್ಮಿಣಿಯ ಸನ್ನಿಧಿಗೆ ಹತ್ತಾರು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಜನಪದ ಗಾಯಕ ಬಸವರಾಜ ಹಾರಿವಾಳ ಅವರ ನಿವಾಸದಲ್ಲಿ ಶುಕ್ರವಾರ ಬಸವೇಶ್ವರ ತಾಲೂಕು ವಿಕಲಚೇತನರ ಸಂಘದಿಂದ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಜನಪದ ಗಾಯಕ ಬಸವರಾಜ ಸಂಗಪ್ಪ ಹಾರಿವಾಳ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿತಾಲೂಕು ವಿಕಲಚೇತನರ ಸಂಘದ ಆದ್ಯಕ್ಷ ಚನ್ನಯ್ಯ ಸಾರಂಗಮಠ, ಸದಸ್ಯರಾದ ಅಪ್ಪು ಸುಂಕದ, ಶಿವರಾಜಕುಮಾರ ಪಾತ್ರೋಟಿ , ಮಹ್ಮದ ಮುಲ್ಲಾ, ರಾಜು ಹಾರಿವಾಳ ರುಕೀಯಾ ಲೋಗಾಂವಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಕೊಡೆಕಲ್ಲ ಬಸವೇಶ್ವರ ದೇವಸ್ಥಾನದ ಕೊಡೆಕಲ್ ಬಸವೇಶ್ವರ ಜಾತ್ರಾಮಹೋತ್ಸವ ಶುಕ್ರವಾರ, ಶನಿವಾರ ಸಂಭ್ರಮದಿಂದ ಜರುಗಿತು. ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ದೇವರಿಗೆ ಗಂಧ ಏರಿಸುವ ಕಾರ್ಯಕ್ರಮ ಜರುಗಿತು. ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕೊಡೆಕಲ್ ಬಸವೇಶ್ವರರಿಗೆ ವಿಶೇಷ ಪೂಜೆ ನೆರವೇರಿತು.ನಂತರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವವು ಪ್ರಮುಖ ಬೀದಿಗಳ ಮೂಲಕ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವು ಮರಳಿ ಆಗಮಿಸಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಜನರು ದೇವಸ್ಥಾನಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿ ಕಾಯಿ-ಕರ್ಪೂರ, ನೈವೇದ್ಯ ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಪಲಕ್ಕಿ ಉತ್ಸವದಲ್ಲಿ ಈರಯ್ಯ ಕೊಡೆಕಲ್ಲಮಠ ಅವರು ಕಾಲ ಜ್ಞಾನ ವಚನ ಪಠಣ ಮಾಡಿದರು.ಮೆರವಣಿಗೆಯಲ್ಲಿ ಸಂಗಯ್ಯ ಕೊಡೆಕಲ್ಲಮಠ, ಚಂದ್ರಶೇಖರ ಮುರಾಳ, ಸುಭಾಸ ನಾಶಿ, ಸಂಗಮೇಶ ಮುರಾಳ, ಗುರುನಗೌಡ ಪಾಟೀಲ, ರಮೇಶ ಚಿಕ್ಕೊಂಡ, ಪ್ರಕಾಶ ಮುರಾಳ, ಸಂಗಮೇಶ ಹಾರಿವಾಳ, ಮಲ್ಲಯ್ಯ ನರಸಲಗಿಮಠ, ನಾಗಪ್ಪ ರಾಯಗೊಂಡ, ರಾಜು ಹಾರಿವಾಳ, ಭೀಮಣ್ಣ ಮುರಾಳ, ಆನಂದ ನಾಲತವಾಡ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣ ಮುಂಭಾಗವಿರುವ ಅಟೋ ನಿಲ್ದಾಣದಲ್ಲಿ ಬಸವೇಶ್ವರ ಅಟೋ ಚಾಲಕರ ಸಂಘದಿಂದ ನಟ ದಿ.ಶಂಕರನಾಗ ಅವರ ಜನ್ಮದಿನವನ್ನು ಶನಿವಾರ ಆಚರಿಸಲಾಯಿತು. ನಟ ದಿ.ಶಂಕರನಾಗ ಅವರ ಜನ್ಮದಿನದಂಗವಾಗಿ ಅವರ ಭಾವಚಿತ್ರಕ್ಕೆ ಅಟೋ ಚಾಲಕರು ಪೂಜೆ ಸಲ್ಲಿಸುವ ಮೂಲಕ ನಟನಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು. ಜನ್ಮದಿನಾಚರಣೆಯಂಗವಾಗಿ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಸಂಗಮೇಶ ಗೊಳಸಂಗಿ ಅವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ದಿ.ಶಂಕರನಾಗ ಅವರೊಬ್ಬ ಅದ್ಭುತ ನಟರಾಗಿದ್ದರು. ಅವರು ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಶಂಕರನಾಗ ಅವರು ಅಟೋ ಚಾಲಕನ ಪಾತ್ರ ಮಾಡುವ ಮೂಲಕ ಎಲ್ಲ ಅಟೋ ಚಾಲಕರ ಪ್ರೀತಿಗೆ ಪಾತ್ರರಾಗುವ ಮೂಲಕ ಇಂದಿಗೂ ಅವರನ್ನು ಅಟೋ ಚಾಲಕರು ಸದಾ ಸ್ಮರಿಸುತ್ತಾರೆ. ಕನ್ನಡ ಚಿತ್ರರಂಗ ಕಂಡ ಧೀಮಂತ ನಟರಲ್ಲಿ ಶಂಕರನಾಗ ಅವರು ಒಬ್ಬರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಅಟೋ ಚಾಲಕರ ಸಂಘದ ಅಧ್ಯಕ್ಷ ಕೆಂಚಪ್ಪ ಬೆನ್ನೂರ, ಬಸವರಾಜ ಭಜಂತ್ರಿ, ರವಿಕುಮಾರ ಕೊಕಟನೂರ, ಶಿವು ಜಾಧವ, ಲಕ್ಷ್ಮಣ ಹಾದಿಮನಿ, ಮಲ್ಲು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೀರಶೈವ ಲಿಂಗಾಯತ ಎಲ್ಲಾ ಉಪಪಂಗಡಗಳ ವಧು-ವರರ ಸಮಾವೇಶವನ್ನು ರವಿವಾರ ದಿನಾಂಕ ೨೯-೧೨-೨೦೨೪ ರಂದು ಮುಂಜಾನೆ ೧೦-೩೦ ಗಂಟೆಗೆ ವಿಜಯಪುರ ನಗರದ ಬಂಜಾರಾ ಕಾಲೇಜ ಎದುರುಗಡೆ ಇರುವ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.ಭಾಗವಹಿಸಲು ಇಚ್ಚಿಸುವವರು ವಧು-ವರರೊಂದಿಗೆ (ಕಡ್ಡಾಯವಾಗಿ) ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೊರುತ್ತೇವೆ. ಭಾಗವಹಿಸುವವರು ನಮ್ಮ ಆಫೀಸಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ವ್ಹಿ.ಸಿ. ನಾಗಠಾಣ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ಡೇ-ನಲ್ಮ ಪ್ರಧಾನಮಂತ್ರಿ ಆತ್ಮ ನಿರ್ಭರ ನಿಧಿ ಯೋಜನೆಯಡಿ ಬ್ಯಾಂಕುಗಳಿಂದ ಹೊಸದಾಗಿ ಸಾಲ-ಸೌಲಭ್ಯಕ್ಕಾಗಿ ಬೀದಿ ಬದಿ ವ್ಯಾಪಾರಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.ಸಾಲ-ಸೌಲಭ್ಯ ಪಡೆಯಲಿಚ್ಛಿಸುವ ಅರ್ಹ ಬೀದಿ ಬದಿ ವ್ಯಾಪಾರಸ್ಥರು ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ ಮತ್ತು ಭಾವಚಿತ್ರದೊಂದಿಗೆ ಮಹಾನಗರ ಪಾಲಿಕೆ ಡೇ-ನಲ್ಮ ವಿಭಾಗಕ್ಕೆ ದಿನಾಂಕ : ೩೦-೧೧-೨೦೨೪ರೊಳಗಾಗಿ ಅರ್ಜಿ ಸಲ್ಲಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಗೆ ಅಧಿಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಸರ್ಕಾರಿ ಜಾರಿಗೊಳಿಸಿ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.ಬೆಳೆವಾರು ನೊಂದಣಿಗೆ ಕೊನೆಯ ದಿನಾಂಕ ವಿವರ: ಮುಂಗಾರು ಹಂಗಾಮಿನ ಕಡಲೆ (ಮ.ಆ) ಹಾಗೂ ಕಡಲೆ (ನೀ) ಬೆಳೆಗೆ ದಿನಾಂಕ: ೩೦-೧೨-೨೦೨೪, ಜೋಳ (ಮ.ಆ) ಹಾಗೂ (ನೀ) ಬೆಳೆಗೆ ದಿನಾಂಕ: ೧೫-೧೧-೨೦೨೪ ಕೊನೆಯ ದಿನಾಂಕವಾಗಿದೆ. ಮುಸುಕಿನ ಜೋಳ (ನೀ) ಬೆಳೆಗೆ ೩೦-೧೧-೨೦೨೪ ಹಾಗೂ ಗೋಧಿ (ನೀ) ಬೆಳೆಗೆ ೧೬-೧೨-೨೦೨೪, ಗೋಧಿ (ಮ.ಆ), ಸೂರ್ಯಕಾಂತಿ (ನೀ) ಹಾಗೂ (ಮ.ಆ), ಕುಸುಬೆ (ಮ.ಆ) ಬೆಳೆಗೆ ದಿನಾಂಕ : ೧೫-೧೧-೨೦೨೪ ಕೊನೆಯ ದಿನಾಂಕವಾಗಿದೆ.ಬೇಸಿಗೆ ಹಂಗಾಮಿನ ಶೇಂಗಾ (ನೀ), ಸೂರ್ಯಕಾಂತಿ (ನೀ) ಮತ್ತು ಈರುಳ್ಳಿ (ನೀ) ಬೆಳೆಗೆ ೨೮-೦೨-೨೦೨೫…
