ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೀರಶೈವ ಲಿಂಗಾಯತ ಎಲ್ಲಾ ಉಪಪಂಗಡಗಳ ವಧು-ವರರ ಸಮಾವೇಶವನ್ನು ರವಿವಾರ ದಿನಾಂಕ ೨೯-೧೨-೨೦೨೪ ರಂದು ಮುಂಜಾನೆ ೧೦-೩೦ ಗಂಟೆಗೆ ವಿಜಯಪುರ ನಗರದ ಬಂಜಾರಾ ಕಾಲೇಜ ಎದುರುಗಡೆ ಇರುವ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಭಾಗವಹಿಸಲು ಇಚ್ಚಿಸುವವರು ವಧು-ವರರೊಂದಿಗೆ (ಕಡ್ಡಾಯವಾಗಿ) ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೊರುತ್ತೇವೆ. ಭಾಗವಹಿಸುವವರು ನಮ್ಮ ಆಫೀಸಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ವ್ಹಿ.ಸಿ. ನಾಗಠಾಣ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
