ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣ ಮುಂಭಾಗವಿರುವ ಅಟೋ ನಿಲ್ದಾಣದಲ್ಲಿ ಬಸವೇಶ್ವರ ಅಟೋ ಚಾಲಕರ ಸಂಘದಿಂದ ನಟ ದಿ.ಶಂಕರನಾಗ ಅವರ ಜನ್ಮದಿನವನ್ನು ಶನಿವಾರ ಆಚರಿಸಲಾಯಿತು. ನಟ ದಿ.ಶಂಕರನಾಗ ಅವರ ಜನ್ಮದಿನದಂಗವಾಗಿ ಅವರ ಭಾವಚಿತ್ರಕ್ಕೆ ಅಟೋ ಚಾಲಕರು ಪೂಜೆ ಸಲ್ಲಿಸುವ ಮೂಲಕ ನಟನಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು. ಜನ್ಮದಿನಾಚರಣೆಯಂಗವಾಗಿ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಂಗಮೇಶ ಗೊಳಸಂಗಿ ಅವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ದಿ.ಶಂಕರನಾಗ ಅವರೊಬ್ಬ ಅದ್ಭುತ ನಟರಾಗಿದ್ದರು. ಅವರು ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಶಂಕರನಾಗ ಅವರು ಅಟೋ ಚಾಲಕನ ಪಾತ್ರ ಮಾಡುವ ಮೂಲಕ ಎಲ್ಲ ಅಟೋ ಚಾಲಕರ ಪ್ರೀತಿಗೆ ಪಾತ್ರರಾಗುವ ಮೂಲಕ ಇಂದಿಗೂ ಅವರನ್ನು ಅಟೋ ಚಾಲಕರು ಸದಾ ಸ್ಮರಿಸುತ್ತಾರೆ. ಕನ್ನಡ ಚಿತ್ರರಂಗ ಕಂಡ ಧೀಮಂತ ನಟರಲ್ಲಿ ಶಂಕರನಾಗ ಅವರು ಒಬ್ಬರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಟೋ ಚಾಲಕರ ಸಂಘದ ಅಧ್ಯಕ್ಷ ಕೆಂಚಪ್ಪ ಬೆನ್ನೂರ, ಬಸವರಾಜ ಭಜಂತ್ರಿ, ರವಿಕುಮಾರ ಕೊಕಟನೂರ, ಶಿವು ಜಾಧವ, ಲಕ್ಷ್ಮಣ ಹಾದಿಮನಿ, ಮಲ್ಲು ಹಡಪದ, ಕಲ್ಲು ಜಾಡರ, ಸದ್ದಾಂ ಕೂಡಗಿ, ಸಿದ್ದು ಸುಂಕದ, ಬಲ್ಲು ಲಮಾಣಿ, ಮಂಜುನಾಥ ಚಿಕ್ಕೊಂಡ, ಗಣಪತಿ ಗುತ್ತಿಗೆದಾರ, ರಮೇಶ ಕಲ್ಯಾಣಿ, ಮುದಕಣ್ಣ ಯರನಾಳ, ಅರುಣ ಚವ್ಹಾಣ ಇತರರು ಇದ್ದರು.

