ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಗೆ ಅಧಿಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಕರ್ನಾಟಕ ರೈತ ಸುರಕ್ಷಾ- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಸರ್ಕಾರಿ ಜಾರಿಗೊಳಿಸಿ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.
ಬೆಳೆವಾರು ನೊಂದಣಿಗೆ ಕೊನೆಯ ದಿನಾಂಕ ವಿವರ: ಮುಂಗಾರು ಹಂಗಾಮಿನ ಕಡಲೆ (ಮ.ಆ) ಹಾಗೂ ಕಡಲೆ (ನೀ) ಬೆಳೆಗೆ ದಿನಾಂಕ: ೩೦-೧೨-೨೦೨೪, ಜೋಳ (ಮ.ಆ) ಹಾಗೂ (ನೀ) ಬೆಳೆಗೆ ದಿನಾಂಕ: ೧೫-೧೧-೨೦೨೪ ಕೊನೆಯ ದಿನಾಂಕವಾಗಿದೆ. ಮುಸುಕಿನ ಜೋಳ (ನೀ) ಬೆಳೆಗೆ ೩೦-೧೧-೨೦೨೪ ಹಾಗೂ ಗೋಧಿ (ನೀ) ಬೆಳೆಗೆ ೧೬-೧೨-೨೦೨೪, ಗೋಧಿ (ಮ.ಆ), ಸೂರ್ಯಕಾಂತಿ (ನೀ) ಹಾಗೂ (ಮ.ಆ), ಕುಸುಬೆ (ಮ.ಆ) ಬೆಳೆಗೆ ದಿನಾಂಕ : ೧೫-೧೧-೨೦೨೪ ಕೊನೆಯ ದಿನಾಂಕವಾಗಿದೆ.
ಬೇಸಿಗೆ ಹಂಗಾಮಿನ ಶೇಂಗಾ (ನೀ), ಸೂರ್ಯಕಾಂತಿ (ನೀ) ಮತ್ತು ಈರುಳ್ಳಿ (ನೀ) ಬೆಳೆಗೆ ೨೮-೦೨-೨೦೨೫ ಕೊನೆಯ ದಿನಾಂಕವಾಗಿದೆ.
ತಾಲೂಕಾವಾರು ಹಾಗೂ ಗ್ರಾಮ ಪಂಚಾಯತಿವಾರು ಅಧಿಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ, ವಿಮಾ ಕಂತು ಮತ್ತು ನೊಂದಣಿಯ ಅಂತಿಮ ದಿನಾಂಕದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ.
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ, ಬೆಳೆ ಸಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಅನ್ವಯಿಸುತ್ತಾರೆ. ಬೆಳೆ ಸಾಲ ಪಡೆಯದ ರೈತರು ನೊಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಡಿಸಿಸಿ-ಇತರೆ ಬ್ಯಾಂಕ್, ಗ್ರಾಮ ಒನ್ ಮತ್ತು ಸಿಎಸ್‌ಸಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
