ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಕೊಡೆಕಲ್ಲ ಬಸವೇಶ್ವರ ದೇವಸ್ಥಾನದ ಕೊಡೆಕಲ್ ಬಸವೇಶ್ವರ ಜಾತ್ರಾಮಹೋತ್ಸವ ಶುಕ್ರವಾರ, ಶನಿವಾರ ಸಂಭ್ರಮದಿಂದ ಜರುಗಿತು. ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ದೇವರಿಗೆ ಗಂಧ ಏರಿಸುವ ಕಾರ್ಯಕ್ರಮ ಜರುಗಿತು. ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕೊಡೆಕಲ್ ಬಸವೇಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ನಂತರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವವು ಪ್ರಮುಖ ಬೀದಿಗಳ ಮೂಲಕ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವು ಮರಳಿ ಆಗಮಿಸಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಜನರು ದೇವಸ್ಥಾನಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿ ಕಾಯಿ-ಕರ್ಪೂರ, ನೈವೇದ್ಯ ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಪಲಕ್ಕಿ ಉತ್ಸವದಲ್ಲಿ ಈರಯ್ಯ ಕೊಡೆಕಲ್ಲಮಠ ಅವರು ಕಾಲ ಜ್ಞಾನ ವಚನ ಪಠಣ ಮಾಡಿದರು.
ಮೆರವಣಿಗೆಯಲ್ಲಿ ಸಂಗಯ್ಯ ಕೊಡೆಕಲ್ಲಮಠ, ಚಂದ್ರಶೇಖರ ಮುರಾಳ, ಸುಭಾಸ ನಾಶಿ, ಸಂಗಮೇಶ ಮುರಾಳ, ಗುರುನಗೌಡ ಪಾಟೀಲ, ರಮೇಶ ಚಿಕ್ಕೊಂಡ, ಪ್ರಕಾಶ ಮುರಾಳ, ಸಂಗಮೇಶ ಹಾರಿವಾಳ, ಮಲ್ಲಯ್ಯ ನರಸಲಗಿಮಠ, ನಾಗಪ್ಪ ರಾಯಗೊಂಡ, ರಾಜು ಹಾರಿವಾಳ, ಭೀಮಣ್ಣ ಮುರಾಳ, ಆನಂದ ನಾಲತವಾಡ, ಬಸವರಾಜ ಮುರಾಳ, ಮಲ್ಲು ಹಾರಿವಾಳ, ಅಶೋಕ ಗೌರವಣ್ಣನವರ, ಶ್ರೀಶೈಲ ಮುರಾಳ, ಬಸವರಾಜ ರಾಯಗೊಂಡ, ಇಂದುಮತಿ ಮಣ್ಣೂರ, ಲಲಿತಾ ಮುರಾಳ ಸೇರಿದಂತೆ ಇತರರು ಭಾಗವಹಿಸಿದ್ದರು.

