ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಶ್ರೀ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾಮಹೋತ್ಸವ ರಥೋತ್ಸವ ಹಾಗೂ ಜಲ-ರಥೋತ್ಸವವು ಬುಧವಾರ ರಾತ್ರಿ ಸಡಗರ ಸಂಭ್ರಮದೊಂದಿಗೆ ವಿಜ್ರಂಭಣೆಯಿಂದ ಜರುಗಿತು.
ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ವಿಶೇಷ ಆರಾಧನೆ, ವಿವಿಧ ಕಾರ್ಯಕ್ರಮಗಳಲ್ಲಿ ಬಿಜಾಪೂರ ಬಾಗಲಕೋಟ ಬೇಳಗಾವಿ ಜಿಲ್ಲೆಗಳಲ್ಲದೇ ನೆರೆಯ ಮಹಾರಾಷ್ಟçದಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವದಿಂದ ಪಾರಾಯಣ ಪಠಿಸಿದರು, ಮಹಾರಾಷ್ಟçದಿಂದ ಆಗಮಿಸಿದ ತಂಡ ಗ್ರಾಮದ ಪ್ರಮುಖ ಬೀದಿಯ ಹಲವಾರು ಸ್ಥಳಗಳಲ್ಲಿ ಬ್ರಹತ್ ರಂಗೋಲಿ ಬಿಡಿಸುವ ಮೂಲಕ ಜಾತ್ರೆಗೆ ವಿಶೇಷ ಕಳೆ ನೀಡಿದರು ಶ್ರೀಮಠದ ಬಾವಿಯಲ್ಲಿ ನಡೆಯುವ ಶ್ರೀರಘುನಾಥ ಪ್ರೀಯ ಸಾಧು ಮಹಾರಾಜರ “ಜಲ ರಥೋತ್ಸವ” ವೀಕ್ಷಿಸಿದ ಸಾವಿರಾರು ಜನ ಭಕ್ತಾಧಿಗಳು ತಮ್ಮ ಹರಕೆಯಂತೆ ದೀಪ ಬೆಳಗಿಸುವ ಮೂಲಕ ಭಕ್ತಿಪರವಶರಾದರು.
ಪ್ರಭುಲಿಂಗೇಶ್ವರ ಯುವಕರ ಕಬ್ಬಡ್ಡಿ ಕ್ರೀಢಾ ಸಂಘದಿಂದ ಕಬ್ಬಡ್ಡಿ ವೈಭವ ೨೦೨೫ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ ಹಮ್ಮಿಕೊಳ್ಳಲಾಗಿತ್ತು,
ಅಲ್ಲದೇ ಸಾಂಸ್ಕೃತಿಕ ಸ್ಪರ್ದಾ ಕಾರ್ಯಕ್ರಮಗಳಾದ ಸಂಗ್ರಾಮ ಕಲ್ಲು ಮೇಲೆ ನೆಟ್ಟಗೆ ಎತ್ತುವ ಸ್ಪರ್ದೆ ಹಾಗೂ ಅಂರ‍್ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಸಾನಿಧ್ಯ ವಹಿಸಿದ್ದರು, ಬಂಡಿಗಣಿ ನೀಲಮಾನಿಕ ಮಠದ ಶ್ರೀ ಅನ್ನದಾನೇಶ್ವರರು, ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಸೇರಿದಂತೆ ವಿವಿಧ ರಾಜಕೀಯ ಧುರೀಣರು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಜನ ಗಣ್ಯರು ಆಗಮಿಸಿದ್ದರು.
ಬನಹಟ್ಟಿ ಠಾಣಾಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ಸೂಕ್ತ ಬಂದೋಬಸ್ತ ಎರ್ಪಡಿಸಿದ್ದರು.
ಸರ್ವ ಧರ್ಮಿಯರು ಪಾಲ್ಗೊಂಡು ಸಂಭ್ರಮಿಸಿದ ಜಾತ್ರಾ ಮಹೋತ್ಸವದಲ್ಲಿ ದೀಪೋತ್ಸವ ಹಾಗೂ ವಿವಿಧ ಮಾದರಿಯ ಆಧುನಿಕ ಪಟಾಕಿಸಿಡಿಸುವುದು ಹಾಗೂ ಆಕಾಶಬುಟ್ಟಿ ಗಾಳಿಯಲ್ಲಿ ತೇಲಿಬಿಡುವುದು ಆಕರ್ಷಣೀಯವಾಗಿತ್ತು.
ಜನಪದ ಸಂಗೀತ ರಸಮಂಜರಿ
ರಾತ್ರಿ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಅರುಣೋದಯ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ “ಅರುಣೋತ್ಸವ” ಕಾರ್ಯಕ್ರಮದಲ್ಲಿ ಝೀ ಕನ್ನಡವಾಹಿನಿಯ ಕಾಮಿಡಿ ಕಿಆಡಿಗಳು ವಿಜೇತ ಹರೀಶ ಹಿರಿಯೂರು, ಜಗ್ಗಪ್ಪ ಬೆಂಗಳೂರು ಜನಪ್ರೀಯ ಕಿರುತೆರೆ ಹಾಗೂ ಯೂಟ್ಯುಬ್ ಸ್ಟಾರ ಜನಪದ ಕಲಾವಿದರಾದ ಬಾಳು ಬೆಳಗುಂದಿ, ಮ್ಯುಸಿಕ್ ಮೈಲಾರಿ, ಜನಪದ ಗಾಯಕಿ ತ್ರೃಪ್ತಿ ಧಾರವಾಡ, ಸುಶ್ಮಿತಾ ಬೆಂಗಳೂರು, ವಿಕೆ ಡಾನ್ಸ ಗ್ರುಪ್, ಮತ್ತು ಶಿವಾ ಡಾನ್ಸ ಗ್ರುಪ್‌ನಿಂದ ನೆರೆದ ಅಭಿಮಾನಿಗಳು ಜನಪದ ಹಾಡು, ವಿವಿದ ನೃತ್ಯ ನೀರೂಪಕ ಕಾಮಿಡಿ ಸ್ಕಿಟ್ಗಳ ಮೂಲಕ ಮನರಂಜನೆಯ ರಸದೌತಣ ಸವಿದರು.
ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡಿದ್ದ ರಾಜ್ಯದ ಪ್ರಸಿದ್ದ ಯೂಟ್ಯುಬ್ ಕಲಾವಿದರಿಂದ ಜನಪದ ಸಂಗೀತ ರಸಮಂಜರಿ ಹಾಗೂ ನಗೆ ಚಟಾಕಿ ಕಾರ್ಯಕ್ರಮ ನೆರೆದ ಜನರನ್ನು ಮಸೂರೆಗೊಳಿಸಿತು.

