Author: editor.udayarashmi@gmail.com

ಲೇಖನ- ಸಂತೋಷ್ ರಾವ್ ಪೆರ್ಮುಡ.ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಮನುಷ್ಯನು ಜೀವನದಲ್ಲಿ ಸದಾ ಖುಷಿಯಾಗಿರುವುದನ್ನೇ ಇಷ್ಟಪಡುತ್ತಾನೆ. ಅಚಾನಕ್ಕಾಗಿ ಏನಾದರೂ ಸಹಿಸಲು ಸಾಧ್ಯವಾಗದಂತಹ ತೊಂದರೆ ಯಾ ಸಮಸ್ಯೆ ಬಂದಲ್ಲಿ ತಕ್ಷಣ ಅದರಿಂದ ವಿಚಲಿತನಾಗುತ್ತಾನೆ ಮತ್ತು ಅದರಿಂದ ಹೊರಬರಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಸ್ಯೆಯು ತೀರಾ ನಿಧಾನ ಗತಿಯಲ್ಲಿ ಬಂದಾಗ ಮನುಷ್ಯನು ಆ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸದೇ ಆ ಸಮಸ್ಯೆಗೆ ನಿಧಾನವಾಗಿ ಹೊಂದಿಕೊಂಡು ಹೋಗಿ ಕೊನೆಗೊಂದು ದಿನ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಅದರಲ್ಲೇ ತನ್ನ ಪ್ರಾಣವನ್ನು ಬಿಡುತ್ತಾನೆ. ಇದು ಒಂದು ಕಪ್ಪೆಯನ್ನು ನಿಧಾನವಾಗಿ ಜೀವಂತವಾಗಿ ಕುದಿಸುವುದನ್ನು ವಿವರಿಸುವಂತಹ ಕಥೆಯಾಗಿದೆ. ‘ಒಂದು ಜೀವಂತವಾಗಿರುವ ಕಪ್ಪೆಯನ್ನು ಇದ್ದಕ್ಕಿದ್ದಂತೆ ಕುದಿಯುತ್ತಿರುವ ನೀರಿನೊಳಗೆ ಹಾಕಿದರೆ ಅದು ತಕ್ಷಣವೇ ಅದರಿಂದ ಹಾರಿ ಹೊರಗೆ ಹೋಗುತ್ತದೆ. ಆದರೆ ಅದೇ ಕಪ್ಪೆಯನ್ನು ಶುದ್ಧವಾದ ಮತ್ತು ತಣ್ಣನೆಯ ನೀರಿನಲ್ಲಿ ಹಾಕಿದರೆ ಅದು ಅದರೊಳಗಡೆಯೇ ಹಾಯಾಗಿರುತ್ತದೆ, ಅದು ಸಹಜವೂ ಹೌದು. ಈಗ ಅದೇ ನೀರಿನ ಪಾತ್ರೆಗೆ ಬೆಂಕಿಯನ್ನು ಹಚ್ಚಿ ನೀರನ್ನು…

Read More

ಲೇಖನ- ಸಾವಿತ್ರಿ ಸಿದ್ದರಾಮುತುಮಕೂರು ಉದಯರಶ್ಮಿ ದಿನಪತ್ರಿಕೆ “ಮಾನವನ ಜೀವನಕ್ಕೆ ದೇವರು ನೀಡಿದ ಅತ್ಯಮೂಲ್ಯ ಕೊಡುಗೆ ಈ ಪ್ರಕೃತಿ. ಮನುಷ್ಯನ ಬದುಕಿಗೆ ಪರಿಸರವೇ ಜೀವಾಳ. ಮನುಜನಿಗೆ ಉಸಿರಾಡಲು ಗಾಳಿ ಕೊಟ್ಟುಸಲಹುತ್ತಲೇ ಬರುತ್ತಿದೆ. ಆದರೆ ಮಾನವ ಈಗೀಗ ಪರಿಸರವನ್ನೇ ಹಣದ ಆಸೆ ಹೀನ ಕೃತ್ಯಗಳಿಂದ ದುರುಪಯೋಗ ಪಡಿಸಿಕೊಂಡು ಪ್ರಕೃತಿಯನ್ನೇ ನಾಶ ಪಡಿಸುತ್ತಾ ತನ್ನ ಅಳಿವಿಗೆ ತಾನೇ ಕಾರಣವಾಗುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಅತೀ ಕಷ್ಟ ಎದುರಾಗುವ ಸಂದರ್ಭ ಒದಗುತ್ತದೆ.ಮಾನವನ ದುರಾಸೆಯ ಚಟುವಟಿಕೆಗಳಿಂದಾಗಿ ಭೂಮಿಯು ಮಲಿನಗೊಳ್ಳುತ್ತಾ ಜಾಗತಿಕ ತಾಪಮಾನವು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂಧನಗಳ ಬಳಕೆ, ಕೈಗಾರೀಕರಣ, ಅರಣ್ಯನಾಶಇಂಧನಗಳ ಬಳಕೆ, ಕೈಗಾರೀಕರಣ, ಅರಣ್ಯನಾಶ ಇವುಗಳೇ ಜಾಗತಿಕ ತಾಪಮಾನಕ್ಕೆ ಮುಖ್ಯ ಕಾರಣಗಳಾಗಿವೆ. ಎಣಿಸುತ್ತಾ ಹೋದರೆ ಇನ್ನು ಬಹಳಷ್ಚಿವೆ.ಇವುಗಳನ್ನು ತಡೆಯ ಬೇಕಾದದ್ದು ಮಾನವರಾದ ನಮ್ಮ ಕರ್ತವ್ಯವೇ ಆಗಿದೆ. ಪರಿಸರದ ಮೌಲ್ಯವನ್ನು ಅರಿತು, ಈಗಲಾದರೂ ಜಾಗೃತಗೊಳ್ಳಬೇಕಿದೆ.ಜಾಗತಿಕ ತಾಪಮಾನವನ್ನು ಇನ್ನು ಮುಂದೆಯಾದರೂ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ. ಅವುಗಳೇನೆಂದರೆಪ್ಲಾಸ್ಟಿಕ್ ಬಳಕೆಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ ಹೋಗಬಹುದು, ಅವುಗಳ ಬದಲಾಗಿ…

Read More

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಕಾಶ ಬೆಣ್ಣೂರ ಪತ್ರಿಕಾ ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ), ವಿಜಯಪುರ ಜಿಲ್ಲಾ ಘಟಕದಿಂದ ಇದೇ ಜುಲೈ 19 ರಂದು ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರಲ್ಲಿ ಬೆಳಿಗ್ಗೆ 11ಗಂಟೆಗೆಪತ್ರಿಕಾ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ.ಜುಲೈ 19 ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯಾಭಿವೃದ್ದಿ ಸಚಿವ ಎಂ ಬಿ ಪಾಟೀಲ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ಧಾರೆ. ಇನ್ನು ಕಾನಿಪ ವಿಜಯಪುರ ಘಟಕದಿಂದ ಕೊಡಮಾಡುವ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರದಾನ ಮಾಡಲಿದ್ದಾರೆ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಜಿಲ್ಲಾ ಮಟ್ಟದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನಾಗಠಾಣ ಶಾಸಕ ವಿಠಲ ಕಟಕದೊಂಡ ನೆರವೇರಿಸಲಿದ್ದಾರೆ.ಕಾರ್ಯಕ್ರಮದ…

Read More

ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಜಗನ್ನಾಥ್ ಹಲಮಡಗಿ ಅವರು ಜುಲೈ ೧೬ ಮತ್ತು ೧೭ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.​ಜುಲೈ ೧೬ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದಲ್ಲಿರುವ ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ, ವಸತಿ ನಿಲಯ, ಅಂಗನವಾಡಿ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಸಂಜೆ ೪ ಗಂಟೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ.​ಜುಲೈ ೧೭ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ರವರೆಗೆ ಜಿಲ್ಲೆಯ ವಿವಿಧ ಶಾಲೆ, ಆಸ್ಪತ್ರೆ, ಅಂಗನವಾಡಿ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಪರಿಶೀಲನೆ ನಡೆಸಿ, ನಂತರ ಬಾಗಲಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಮಾಜಿ ಪ್ರಧಾನಿ ದೇವೇಗೌಡರ ನಿಲುವಿಗೆ ನನ್ನ ಸಂಪೂರ್ಣ ಬೆಂಬಲ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮಣ್ಣಿನ ಮಗ ಮಾಜಿ ಪ್ರಧಾನಿಗಳಾದ ದೇವೇಗೌಡರು ವಿಧಾನ ಸೌಧದಲ್ಲಿ ಧರಣಿ ಕೂರುವುದಾಗಿ ಘೋಷಿಸಿದ್ದು, ಅವರ ಈ ನಿಲುವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಟೌನ್ ಶಿಪ್ ಯೋಜನೆ ರದ್ದುಗೊಳಿಸುವವರೆಗೂ ನಾನೂ ಸಹ ವಿಧಾನಸೌಧದೊಳಗೆ ಧರಣಿ ಕೂರುವುದಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಘೋಷಿಸಿದ್ದಾರೆ.ಸಮೃದ್ಧವಾದ ಬಾಳೆ, ತೆಂಗು, ಅಡಕೆ, ತರಕಾರಿ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಬೆಳೆಯುವ ಜೊತೆಗೆ ಪ್ರತಿ ತಿಂಗಳು 6 ಲಕ್ಷಕ್ಕಿಂತ ಹೆಚ್ಚು ಲೀಟರ್ ಹಾಲು ನೀಡುವ ಹಚ್ಚ ಹಸಿರಾದ ಸಂಪತ್ಬರಿತ ಸಾವಿರಾರು ಎಕರೆ ಭೂಮಿಯನ್ನು ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಬಲವಂತದಿಂದ ರೈತರಿಂದ ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇಂತಹ ಭೂಮಿಯಲ್ಲಿ ಟೌನ್ ಶಿಫ್ ಮಾಡುವುದು ಸರಿಯಲ್ಲ.ಆದ್ದರಿಂದ ಕೂಡಲೇ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಬೇಕು ಹಾಗೂ ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರ…

Read More

ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ `ಕೋಟಿ’ ಮೌಲ್ಯದ ಮಾದಕ ದ್ರವ್ಯ ಜಪ್ತಿ | ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಆರಕ್ಷಕರು ಸಂಕಲ್ಪ ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಾದಕ ದ್ರವ್ಯ ವಸ್ತುಗಳ ಮಾರಾಟ ಜಾಲಗಳನ್ನು ಮಟ್ಟ ಹಾಕಲು ಶ್ರಮಿಸಲಾಗುತ್ತಿದ್ದು, ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಜೂನ್ ಮಾಸಾಂತ್ಯದವರೆಗೆ ೯೮,೭೬,೭೨೦ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತು ಮಾಡಿ ೭೩ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಳಗಾವಿ ವಿಭಾಗದಲ್ಲಿ ಡ್ರಗ್ಸ್ ಭೇದಿಸುವ ಪ್ರಕರಣದಲ್ಲಿ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಮಾಹಿತಿ ನೀಡಿದರು.ವಿಜಯಪುರದಲ್ಲಿ ಡ್ರಗ್ ಫ್ರೀ ಕರ್ನಾಟಕ ಅಂಗವಾಗಿ ಕೈಗೊಳ್ಳಲಾಗುತ್ತಿರುವ ಅಭಿಯಾನ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ಮಾದಕ ದ್ರವ್ಯ ಮಾರಾಟ ಜಾಲವನ್ನು ಬೇಧಿಸಲು ಪ್ರಯತ್ನಿಸಲಾಗುತ್ತಿದೆ, ಹೀಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರ್ವಕಾಲಕ್ಕೂ ವಿಶ್ವ ಸಂಗೀತ ಇತಿಹಾಸದಲ್ಲಿ ಅಜರಾಮರವಾಗಿ ನಿಲ್ಲುವಂತಹ ಗಾಯಕಿ ಗಾನಕೋಗಿಲೆ ಎಸ್.ಜಾನಕಿ ಕಂಠ ಮಾಧುರ್ಯಕ್ಕೆ ಎಂತಹವರನ್ನು ಮಂತ್ರಮುಗ್ಧರನ್ನಾಗಿ ಮಾಡುವಂತಹ ಶಕ್ತಿ ಇದೆ. ಅವರು ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರ ಗಾಯನ ಪ್ರತಿನಿತ್ಯ ಎಲ್ಲರ ಮನಸ್ಸಿನಲ್ಲೂ ಮಿಗುನುಗುತ್ತಿರುತ್ತವೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ನಿಧನರಾದ ಬಹುಭಾಷೆ ಸಿನಿಮಾ ಹಿನ್ನೆಲೆ ಗಾಯಕಿ ಗಾನಕೋಗಿಲೆ ಎಸ್.ಜಾನಕಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸೇರಿದಂತೆ ವಿಶ್ವ ಕಂಡ ಈ ಶತಮಾನದ ಶ್ರೇಷ್ಠ ಗಾಯಕಿಯರಲ್ಲಿ ಎಸ್. ಜಾನಕಿ ಅಗ್ರಸ್ಥಾನದಲ್ಲಿದ್ದಾರೆ. ಸುಮಾರು ೧೬ಕ್ಕೂ ಅಧಿಕ ಭಾಷೆಗಳಲ್ಲಿ ೪೮ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಲತಾ ಮಂಗೇಶ್ಕರ್ ಅವರ ನಂತರ ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಅಪರೂಪದ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ…

Read More

ಲಾರಿ ಸೇರಿದಂತೆ ಎಲ್ಲ ದೊಡ್ಡ ವಾಹನಗಳು ಸಂಚರಿಸುತ್ತಿವೆಯಾದರೂ ಬಸ್ ಸಂಚಾರವಿಲ್ಲ ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ದುರಸ್ತಿ ಸಲುವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಿರುವುದರಿಂದ ಕಳೆದ ನಾಲ್ಕು ತಿಂಗಳಿಂದ ಸಾರಿಗೆ ಸಂಸ್ಥೆಯ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.ವಿಜಯಪುರ ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ, ಔರಾದ ಸದಾಶಿವಘಡ ರಾಜ್ಯ ಹೆದ್ದಾರಿ 34, ಅದರಲ್ಲಿ ಬರುವ ಈ ಸೇತುವೆಯ ಮೇಲ್ಭಾಗ ಕಿತ್ತು ಹೋಗಿ ಪ್ರಯಾಣಕ್ಕೆ ಸಂಚಕಾರ ಎದುರಾಗಿತ್ತು.ಆದ್ದರಿಂದ ಕಳೆದ ಎಪ್ರಿಲ್ 23 ರಿಂದ ಎರಡು ತಿಂಗಳುಗಳ ಕಾಲ ಸೇತುವೆ ದುರಸ್ತಿ ಮಾಡುವ ಸಲುವಾಗಿ ಸಾರಿಗೆ ಸಂಸ್ಥೆಯ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಿಲಾಗಿತ್ತು.ಸದ್ಯ ದ್ವಿಚಕ್ರ ಹಾಗೂ ಸಣ್ಣ ವಾಹನಗಳನ್ನು ಸೇತುವೆ ಮೇಲೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ದೊಡ್ಡ ದೊಡ್ಡ ಲಾರಿಗಳು ಕೂಡ ಸಂಚರಿಸುತ್ತಿವೆ, ಆದರೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯಂಕಂಚಿ ಗ್ರಾಮದ ಮಾರ್ಗವಾಗಿ ಸಿಂದಗಿಯೆಡೆಗೆ ಅಕ್ರಮವಾಗಿ ಸಾದಾ ಮರಳು ಸಾಗಾಟ ಮಾಡುತ್ತಿದ್ದ ನಂಬರಿಲ್ಲದ ಟ್ರ‍್ಯಾಕ್ಟರ್ ಹಾಗೂ ಟ್ರೇಲರ್‌ನ್ನು ಸಿಂದಗಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿರುವ ಘಟನೆ ಯಂಕಂಚಿ-ಸಿಂದಗಿ ರಸ್ತೆಯ ಸವಹಳ್ಳದ ಸಮೀಪ ನಡೆದಿದೆ.ಖಚಿತ ಮಾಹಿತಿಯ ಮೇರೆಗೆ, ಮೇಲಾಧಿಕಾರಿಗಳ ಸೂಚನೆಯಂತೆ ಸಿಂದಗಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ ಕಾಂಬಳೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ ನಂದಶೆಟ್ಟಿ, ವಾಯ್.ಕೆ.ಉಕಮನಾಳ ಕಾರ್ಯಾಚರಣೆ ನಡೆಸಿದರು. ಈ ವೇಳೆ ಯಂಕಂಚಿ ಮಾರ್ಗದಿಂದ ಬರುತ್ತಿದ್ದ ಕುಬೋಟಾ ಕಂಪನಿಯ ನಂಬರಿಲ್ಲದ ಟ್ರ‍್ಯಾಕ್ಟರ್‌ನ್ನು ತಡೆಹಿಡಿಯಲು ಪೊಲೀಸರು ಸೂಚನೆ ನೀಡಿದಾಗ, ಚಾಲಕ ಸ್ವಲ್ಪ ದೂರ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.ಪಂಚರ ಸಮ್ಮುಖದಲ್ಲಿ ವಾಹನವನ್ನು ಪರಿಶೀಲಿಸಿದಾಗ ಟ್ರೇಲರ್‌ನಲ್ಲಿ ಅಂದಾಜು ಒಂದು ಬ್ರಾಸ್ ಸಾದಾ ಮರಳು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಟ್ರ‍್ಯಾಕ್ಟರ್ ಹಾಗೂ ಟ್ರೇಲರ್ ಸೇರಿ ಸುಮಾರು ರೂ.೨ ಲಕ್ಷ ಮೌಲ್ಯದ ವಾಹನ ಹಾಗೂ ರೂ.೪…

Read More