ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಶಿವಪ್ಪ ಹೊರಟ್ಟಿ ಅವರು 2025-26ನೇ ಸಾಲಿನ NMMS ಪರೀಕ್ಷೆಯಲ್ಲಿ 114 ಅಂಕಗಳನ್ನು ಪಡೆದು ಬಸವನ ಬಾಗೇವಾಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಅದೇ ಶಾಲೆಯ ಇತರೆ ವಿದ್ಯಾರ್ಥಿಗಳೂ ಉತ್ತಮ ಸಾಧನೆ ತೋರಿದ್ದು, ಗಾಯತ್ರಿ ಬಡಿಗೇರ 92, ಅಪೇಕ್ಷಾ ಕೋಲಕಾರ 86, ಮಲ್ಲಪ್ಪ ಬಿಜ್ಜರಗಿ 84, ಸಾಕ್ಷಿ ಮ್ಯಾಗೇಡಿ 81 ಹಾಗೂ ಲಕ್ಷ್ಮೀ ತಿಳಗುಳ 77 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಮಕ್ಕಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಮನ್ವಯಾಧಿಕಾರಿ ಸುನೀಲ ನಾಯಕ, NMMS ತಾಲೂಕು ನೋಡಲ್ ಅಧಿಕಾರಿ ಅನುಜಾ ಗುಬ್ಬಾ ಸೇರಿದಂತೆ ಶಾಲಾ ಅಧ್ಯಕ್ಷ ಮುರಗೇಶ ಹಳ್ಳಿ, ಮುಖ್ಯಗುರು ಸಿದ್ದಪ್ಪ ಕೋಟ್ಯಾಳ ಹಾಗೂ ಶಿಕ್ಷಕರಾದ ಹಣಮಂತ ಬಿರಾದಾರ, ಸಂಗಮೇಶ ಎಲಬಳ್ಳಿ, ಶಾಂತಪ್ಪ ನಾಗರಳ್ಳಿ, ಕವಿತಾ ಹಿರೇಮಠ, ಹೇಮಾವತಿ, ಲಕ್ಷ್ಮೀ ವನೇಶಿ, ಅನೀಲ ಗಣಿ ಸೇರಿದಂತೆ ಸಮಸ್ತ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

