ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಶ್ರೀ ಶಂಕರಲಿಂಗ ಮಹಾ ರಥೋತ್ಸವ ಬುಧವಾರ ಸಂಜೆ ಮೂಲಾ ನಕ್ಷತ್ರ ಶುಭ ಮೂಹೂರ್ತದಲ್ಲಿ ನೆರೆದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ನೆರವೇರಿತು.
ಬಂಥನಾಳದ ಪರಮಪೂಜ್ಯ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಪೂಜ್ಯ ಶ್ರೀ ಗುರು ಸಂಗನಬಸವ ಶ್ರೀಗಳು, ಇಟಗಿ ಪೂಕ್ಯರು, ಶಿರವಾಳದ ಸೋಮನಿಂಗ ಮಹಾರಾಜರು, ಸೇರಿದಂತೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ನಡೆದ ರಥೋತ್ಸವ ನೋಡಿ ಕಣ್ಣು ತುಂಬಿಕೊಳ್ಳಲು ನೆರೆಯ ರಾಜ್ಯ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗದ ಸಹಸ್ರಾರು ಭಕ್ತರು ಆಗಮಿಸಿದರು. ರಥೋತ್ಸದ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು ಉತ್ತತ್ತಿ ಖಾರಿಕ ರಥದ ಮೇಲೆ ಎಸೆದು ಭಕ್ತಿಯ ಸಮರ್ಪಿಸಿದರು.
ರಥವು ಬಸವಣ್ಣ ಕಟ್ಟೆಯ ವರೆಗೆ ಚಲಿಸಿ ಮೂಲ ಸ್ಥಳ ತಲುಪಿತು.

