ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾನವ ಕಲ್ಯಾಣ ಹಾಗೂ ಇಡೀ ಸಮಾಜ ಒಂದಾಗಿ ಬಾಳಬೇಕು ಎಂಬುವುದೇ ಪಂಚಪೀಠಗಳ ಆಶಯವಾಗಿದೆ. ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.
ಪಟ್ಟಣದ ಜಡಿಮಠ ದ್ವಾರಬಾಗಿಲು ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡುವುದರ ಮೂಲಕ ಆಶೀರ್ವಚನ ನೀಡಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣದಲ್ಲಿ ಐದು ಮಠಗಳಿದ್ದು ಅವುಗಳ ಪೀಠಾಧ್ಯಕ್ಷರ ನೇತೃತ್ವದಲ್ಲಿ ಇಲ್ಲಿ ವೀರಶೈವ ಧರ್ಮ, ಪರಂಪರೆ ಬೆಳವಣಿಗೆಯಲ್ಲಿ ನಿರತವಾಗಿವೆ. ಅವರ ಮಾರ್ಗದರ್ಶನದಲ್ಲಿ ಪಂಚಪೀಠಾಧಿಪತಿಗಳಿಗೆ ಸಂದರ್ಭನುಸಾರವಾಗಿ ಗೌರವ ನೀಡಲಾಗಿದೆ. ಇಂದಿನ ದಿನಮಾನಗಳಲ್ಲಿ ಬಹಳಷ್ಟು ಕಡೆ ಧರ್ಮ, ಪರಂಪರೆ, ಆದರ್ಶಗಳನ್ನು ದೂರತಳ್ಳಿ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವಂತ ಮತ್ತು ಜನರ ಭಾವನೆಗಳನ್ನು ಕೆಡಿಸುವಂತ ಕೆಲಸ ನಡೆಯುತ್ತಿದೆ. ಅದಕ್ಕೆ ಯಾರು ಅವಕಾಶ ಕೊಡದೇ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವಂತೆ ಬಾಳಬೇಕಾಗಿದೆ. ಮಾನವ, ಮಾನವೀಯ ಸಂಬಂಧಗಳನ್ನು ಬೆಸೆಯುವಂತ ಸಮಾಜ ಕಟ್ಟಬೇಕಾಗಿದೆ. ಎಲ್ಲರಿಗೂ ಶುಭವಾಗಲಿ ಎಂದರು.
ಜಡಿಮಠ ಜಡಿಸಿದ್ಧೇಶ್ವರಶ್ರೀಗಳು ಮಾತನಾಡಿ, ಬಿಜೆಪಿ ಧುರೀಣ ಬಸನಗೌಡ ಪಾಟೀಲ (ಯಡಿಯಾಪೂರ) ಸಹಕಾರ ಹಾಗೂ ಜವಾಬ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಮಹಾದ್ವಾರಕ್ಕೆ ಶ್ರೀಗಳು ಚಾಲನೆ ನೀಡಿದ್ದು ಅತ್ಯಂತ ಸಂತೋಷಕರ ಸಂದರ್ಭ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಡಾ.ಆರ್.ಆರ್.ನಾಯಿಕ್, ಪ್ರಭುದೇವ ಹಿರೇಮಠ, ಬಿ.ಎಸ್.ಶಾಬಾದಿ (ತೆಗನೂರ), ಸಾಹೇಬಗೌಡ ಬಿರಾದಾರ (ಬೂದಿಹಾಳಡೋಣ), ಉಮಾಕಾಂತ ಸೊನ್ನದ, ಸೋಮಶೇಖರ ಹಿರೇಮಠ, ಆನಂದ ಜಡಿಮಠ, ಗುರುಪಾದ ಬುದ್ನಿ, ಗಣೇಶ ಹಿರೇಮಠ, ಸಾಯಬಣ್ಣ ನಾಯ್ಕೋಡಿ, ಅಪ್ಪಾಸಾಹೇಬ ಅವಟಿ, ಈರಣ್ಣ ವಸ್ತçದ, ದೊಡ್ಡಪ್ಪ ಯರಗಲ್, ಸುರೇಶ ಬಡಿಗೇರ ಇದ್ದರು.

